ಹನುಮಾನ್ ಚಾಲೀಸಾ ರ್‍ಯಾಲಿ: ಪೊಲೀಸ್ vs ಬಿಜೆಪಿ, ಶೋಭಾ ಕರಂದ್ಲಾಜೆ ಅರೆಸ್ಟ್, ನಗರ್ತಪೇಟೆ ಉದ್ವಿಗ್ನ!

By Suvarna News  |  First Published Mar 19, 2024, 12:21 PM IST

ಬೆಂಗಳೂರಿನ ನಗರ್ತಪೇಟೆ  ಹಿಂದೂ ಯುವಕನ ಮೇಲೆ ಹಲ್ಲೆ‌ ಆರೋಪ ಪ್ರಕರಣ ಸಂಬಂಧ ಬಿಜೆಪಿ ರ್‍ಯಾಲಿ ವೇಳೆ ಹೈಡ್ರಾಮ ನಡೆದಿದ್ದು, ಶಾಸಕ ಸುರೇಶ್ ಕುಮಾರ್ ಅವರನ್ನೇ ಪೊಲೀಸರು ಎಳೆದಾಡಿದ ಘಟನೆ ನಡೆದಿದೆ.


ಬೆಂಗಳೂರು (ಮಾ.19): ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದ ಎಂದು ಹಿಂದೂ ಯುವಕನ ಮೇಲೆ ಹಲ್ಲೆ‌ ಪ್ರಕರಣ ವಿರೋಧಿಸಿ ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿಯಿಂದ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಶಾಂತಿಯುತ ಮೆರವಣಿಗೆಯಲ್ಲಿ ಹಮ್ಮಿಕೊಂಡಿದ್ದರು. ಬಿಜೆಪಿ ಕೂಡ ಇದರಲ್ಲಿ ಭಾಗಿಯಾಗಿದ್ದು, ರ್‍ಯಾಲಿ ವೇಳೆ ಹೈಡ್ರಾಮ ನಡೆದಿದೆ.  ರ್‍ಯಾಲಿಗೆ ಅನುಮತಿ ತೆಗೆದುಕೊಂಡಿಲ್ಲ ಎಂದು ಪೊಲೀಸರು ನಿರಾಕರಿಸಿದ್ದಾರೆ. ಘಟನಾ ಸಂಬಂಧ ರ್‍ಯಾಲಿಯಲ್ಲಿ ಅಂಗಡಿ ಮಾಲೀಕನಾದ ಮುಖೇಶ್‌ ಕೂಡ ಭಾಗಿಯಾಗಿದ್ದ,  ಆತನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದಾಗ  ರ್‍ಯಾಲಿಗೆ ಬಂದಿದ್ದ ಶಾಸಕ ಸುರೇಶ್ ಅವರು ಪೊಲೀಸ್‌ ಜೀಪಿಗೆ ಅಡ್ಡ ನಿಂತರು. ಈ ವೇಳೆ  ಪೊಲೀಸರು ಸುರೇಶ್ ಕುಮಾರ್‌ ಅವರನ್ನೇ ಎಳೆದಾಡಿದ ಘಟನೆ ನಡೆದಿದೆ.  ಇನ್ನು ರ್‍ಯಾಲಿಯಲ್ಲಿ ಭಾಗವಹಿಸಿದ ಶೋಭಾ ಕರಂದ್ಲಾಜೆ ಅವರನ್ನು ಕೂಡ ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶೋಭಾ ಕರಂದ್ಲಾಜೆ ಅವರನ್ನು ವಶಕ್ಕೆ ಪಡೆದು ಮೈಸೂರ್ ರೋಡ್ ಬಳಿಯ ಸಿಎಆರ್ ಗ್ರೌಂಡ್ ಗೆ  ಪೊಲೀಸರು ಕರೆದೊಯ್ಯದ್ದಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣಕ್ಕೆ ಬಾರದ ಪ್ರತಿಭಟನಾಕಾರರನ್ನು, ಬಿಜೆಪಿ ಕಾರ್ಯಕರ್ತರನ್ನು ಕೂಡ  ಬಂಧಿಸಿ ಸಿಎಆರ್ ಗ್ರೌಂಡ್ ಗೆ  ಪೊಲೀಸರು ಕರೆದುಕೊಂಡು ಹೋಗಿದ್ದಾರೆ.  ಈ ವೇಳೆ ಚನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ.

Tap to resize

Latest Videos

undefined

ಹೊಸಪೇಟೆ: ರಿವರ್ಸ್ ತೆಗೆದುಕೊಳ್ಳುವ ವೇಳೆ ಅವಘಡ, ಸಾರಿಗೆ ಬಸ್‌ ಹರಿದು 3 ವರ್ಷದ ಬಾಲಕ ಸ್ಥಳದಲ್ಲೇ ಸಾವು

ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಬಂದು, ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ ಅನುಮತಿ ಪಡೆಯಲಿಲ್ಲ ಎಂಬ ಕಾರಣ ನೀಡಿ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ಈಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇಡೀ ನಗರ್ತಪೇಟೆ ಬಂದ್ ಆಗಿದೆ.

ಪ್ರಕರಣ ಸಂಬಂಧ ಮಾತನಾಡಿರುವ ಪೊಲೀಸ್ ಕಮಿಷನರ್ ದಯಾನಂದ್ ಭಕ್ತಿ ಗೀತೆ ಹಾಕಿದ್ರು ಎಂಬ ಕಾರಣಕ್ಕೆ ಗಲಾಟೆಯಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿಪ್ರಕರಣ ದಾಖಲಿಸಿತನಿಖೆ ನಡೆಯುತ್ತಿದೆ. ಒಟ್ಟು 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ. ದೂರುದಾರರು ಏನ್ ಅಂತ ದೂರು ಕೊಟ್ಟಿದ್ದಾರೆ ಅದರ ಮೇಲೆ ಕೇಸ್ ದಾಖಲಾಗಿದೆ ಎಂದಿದ್ದಾರೆ.

ಘಟನೆ ಹಿನ್ನೆಲೆ: ನಮಾಜ್‌ ಮಾಡುವ ಸಮಯಕ್ಕೆ ಹನುಮಾನ್‌ ಚಾಲೀಸಾ ಹಾಕಿದ ಎಂಬ ಕಾರಣಕ್ಕೆ ಅನ್ಯಕೋಮಿನ ಕೆಲ ಯುವಕರು ಮೊಬೈಲ್‌ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದರು. ಹಲಸೂರು ಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಡನೆ ನಡೆದಿದ್ದು, ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೊಬೈಲ್‌ ಬಿಡಿ ಭಾಗಗಳ ಅಂಗಡಿ ಮಾಲೀಕ ಮುಖೇಶ್‌ ಹಲ್ಲೆಗೊಳಗಾದವರು.  ಹಲ್ಲೆ ಸಂಬಂಧ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಅನ್ಯಕೋಮಿನ  ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ ಜಿಲೆಟಿನ್ ಕಡ್ಡಿಗಳು, ಸ್ಪೋಟಕ ವಸ್ತುಗಳು ಪತ್ತೆ!

ಸಂಜೆ ಮುಖೇಶ್‌ ಅವರ ಅಂಗಡಿ ಬಳಿ ಬಂದಿರುವ ಅನ್ಯಕೋಮಿನ ಕೆಲ ಯುವಕರು, ನಮಾಜ್‌ ಸಮಯದಲ್ಲಿ ಅಂಗಡಿಯಲ್ಲಿ ಜೋರಾಗಿ ಹನುಮಾನ್‌ ಚಾಲೀಸಾ ಹಾಕದಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಮುಖೇಶ್‌ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಅನ್ಯಕೋಮಿನ ಯುವಕರು ಮುಖೇಶ್‌ನನ್ನು ಅಂಗಡಿಯಿಂದ ಹೊರಗೆ ಎಳೆದು ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

click me!