ಮೈಸೂರು ಬಿಷಪ್ ಭೇಟಿಯಾಗಿ ಬೆಂಬಲ ಕೋರಿದ ಯದುವೀರ್ ಒಡೆಯರ್

By Kannadaprabha News  |  First Published Mar 19, 2024, 11:43 AM IST

ಮೈಸೂರು ಬಿಷಪ್ ಬರ್ನಾಡ್ ಮೊರಾಸ್ ಅವರನ್ನು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೋಮವಾರ ಭೇಟಿಯಾಗಿ ಬೆಂಬಲ ಕೋರಿದರು.


  ಮೈಸೂರು :  ಮೈಸೂರು ಬಿಷಪ್ ಬರ್ನಾಡ್ ಮೊರಾಸ್ ಅವರನ್ನು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೋಮವಾರ ಭೇಟಿಯಾಗಿ ಬೆಂಬಲ ಕೋರಿದರು.

ನಗರದ ಬನ್ನಿಮಂಟಪದ ಹೈವೇ ವೃತ್ತದ ಬಳಿಯ ಸನ್ಮಾರ್ಗಿ ಭವನಕ್ಕೆ (ಬಿಷಪ್ ಹೌಸ್) ಆಗಮಿಸಿದ ಅವರನ್ನು ಬಿಷಪ್ ಬರ್ನಾಡ್ ಮೊರಾಸ್ ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಿದರು.

Latest Videos

undefined

ಸೆಂಟ್ ಫಿಲೋಮಿನ ಹಾಗೂ ಮೈಸೂರು ಅರಮನೆ ನಮ್ಮೆಲ್ಲರ ಹೆಮ್ಮ. ಸಂತ ಫಿಲೋಮಿನ ಕಾಲೇಜು, ಚರ್ಚ್ ರಾಜರ ಕೊಡುಗೆ. ಜನರು ರಾಜರನ್ನು ನೋಡಲು ಅರಮನೆ ಕಡೆ ಬರುತ್ತಿದ್ದರು. ಈಗ ರಾಜರು ಜನರ ನೋಡಲು ಬರುತ್ತಿದ್ದಾರೆ. ದೇವರ ಆಶೀರ್ವಾದ ಹಾಗೂ ನಮ್ಮ ಬೆಂಬಲ ನಿಮ್ಮಗೆ ಇರಲಿದೆ ಎಂದು ಯದುವೀರ ಅವರ ತಲೆ ಮೇಲೆ ಕೈಯಿಟ್ಟು ಬಿಷಪ್ ಆಶೀರ್ವದಿಸಿದರು.

ಮೈಸೂರಿಗೆ ಪ್ರವಾಸಿಗರು ಅರಮನೆ ನೋಡುವುದಕ್ಕೆ ಬರುತ್ತಾರೆ. ಅದೇ ಸಂದರ್ಭದಲ್ಲಿ ನಮ್ಮ ಚರ್ಚ್ ನೋಡುವುದಕ್ಕೆ ಬರುತ್ತಾರೆ. ದೇವರ ಆಶೀರ್ವಾದ ಪಡೆಯಲು ಮತ್ತು ಚರ್ಚ್ ನೋಡಲು ಬರುತ್ತಾರೆ. ಚರ್ಚ್ ಗೆ ಬಂದವರು ದೇವಸ್ಥಾನಕ್ಕೂ ಹೋಗುತ್ತಾರೆ, ದೇವಸ್ಥಾನ ಬಂದವರು ಚರ್ಚ್ ಗೆ ಬರುತ್ತಾರೆ. ಇದು ನಮಗೆ ಹೆಮ್ಮೆಯ ವಿಷಯ ಎಂದರು.

ಬಿಜೆಪಿ ಅಭ್ಯರ್ಥಿ ಯದುವೀರ ಮಾತನಾಡಿ, ಮೈಸೂರಿನಲ್ಲಿ ಕ್ರಿಶ್ಚಿಯನ್ ಸಮುದಾಯ ದೊಡ್ಡದು. ಹೀಗಾಗಿ, ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಸಮುದಾಯಗಳ ಬೆಂಬಲ ಮುಖ್ಯ. ಅದರಂತೆ ಬಿಷಪ್ ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದೇನೆ. ನೀತಿ ನಿಯಮಗಳಲ್ಲಿ ಬದಲಾವಣೆ ತರಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ಸರ್ವ ಧರ್ಮ, ಸಮುದಾಯಗಳನ್ನು ಒಂದಾಗಿ ತೆಗೆದುಕೊಂಡು ಹೋಗುತ್ತೇನೆ ಎಂದರು.

ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್ ಮೊದಲಾದವರು ಇದ್ದರು.

click me!