ರಾಯಚೂರು: SSLC ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆ ಚೇಂಜ್, ಮೂವರು ಶಿಕ್ಷಕರು ಅಮಾನತು

By Suvarna News  |  First Published Jul 8, 2020, 6:09 PM IST

ಕೊರೋನಾ ಸಂಕಷ್ಟದ ನಡುವೆಯೂ ಯಶಸ್ವಿಯಾಗಿ ಮುಕ್ತಾಯಗೊಂಡಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳೆ, ಗಣಿತ ಪ್ರಶ್ನೆ ಪತ್ರಿಕೆ ರಾಯಚೂರಿನ ಸಿಂಧನೂರಿನಲ್ಲಿ ನೀಡುವಾಗ ಅದಲು ಬದಲು ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇದೀಗ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.


ರಾಯಚೂರು, (ಜುಲೈ.08): ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳೆ, ಗಣಿತ ಪ್ರಶ್ನೆ ಪತ್ರಿಕೆ  ಅದಲು ಬದಲು ನೀಡಿದ ಪ್ರಕಾರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ  ಮೂವರು ಶಿಕ್ಷಕರನ್ನು ಅಮಮಾನತು ಮಾಡಲಾಗಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವ ರಾಯಚೂರು ಡಿಡಿಪಿಐ ಬಿ ಹೆಚ್ ಗೋನಾಳ, ಜಿಲ್ಲೆಯ ಸಿಂಧನೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಜೂನ್ 27ರಂದು ನಡೆದಂತ ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆಯ ವೇಳೆಯಲ್ಲಿ ಪ್ರಶ್ನೆ ಪತ್ರಿಕೆ ಬದಲಾವಣೆಗೊಂಡಿತ್ತು. ಅಂದ್ರೆ 20 ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಹಳೆ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು.

Latest Videos

undefined

SSLC ಪರೀಕ್ಷೆ: ಮೇಲ್ವಿಚಾರಕರ ಯಡವಟ್ಟು, ಪ್ರಶ್ನೆ ಪತ್ರಿಕೆ ಅದಲು ಬದಲು

ಈ ಪ್ರಕರಣ ಕುರಿತಂತೆ ಸಿಂಧನೂರು ಬಿಇಒ ಸಮಗ್ರವಾಗಿ ವರದಿಯನ್ನು ನೀಡುವಂತೆ ಆದೇಶಿಸಲಾಗಿತ್ತು. ಇದೀಗ ಸಿಂಧನೂರು ಬಿಇಒ ನೀಡಿದಂತ ವರದಿಯ ಆಧಾರದ ಮೇಲೆ SSLC ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆ ಬದಲು ಪ್ರಕರಣಕ್ಕೆ ಕಾರಣರಾದಂತ ಶಿಕ್ಷಕರಾದ ಶಿವಕುಮಾರ್, ಈರಣ್ಣ, ಸನೀತಾ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ವಿದ್ಯಾರ್ಥಿಗಳು ಏನ್ಮಾಡೋದು?
ಹೌದು.....ಶಿಕ್ಷಕರನ್ನ ಅಮಾನತು ಮಾಡಲಾಗಿದೆ. ಆದ್ರೆ, ಹಳೆ ಗಣಿತ ಪ್ರಶ್ನೆ ಪತ್ರಿಕೆಗೆ ಪರೀಕ್ಷೆ ಬರೆದ 20 ವಿದ್ಯಾರ್ಥಿಗಳ ಗತಿ ಹೇಗೆ..? ಆ ವಿದ್ಯಾರ್ಥಿಗಳು ಒಂದು ವೇಳೆ ಫೇಲ್ ಆದ್ರೆ, ಅವರ ಮುಂದಿನ ಶಿಕ್ಷಣ ಜೀವನದ ಕತೆ ಏನು..? ಶಿಕ್ಷಕರನ್ನ ಸಸ್ಪೆಂಡ್ ಮಾಡಿದ್ರೆ ಸಾಲದು ವಿದ್ಯಾರ್ಥಿಗಳ ಬಗ್ಗೆಯೂ ಡಿಡಿಪಿಐ ಗಮನಹರಿಸಬೇಕು.

click me!