ಮಂಡ್ಯದಲ್ಲಿ ಬಸ್ - ಕಾರು ನಡುವೆ ಭೀಕರ ಅಪಘಾತ : ಮೂವರ ದುರ್ಮರಣ

Published : Oct 03, 2019, 02:32 PM ISTUpdated : Dec 03, 2019, 03:11 PM IST
ಮಂಡ್ಯದಲ್ಲಿ ಬಸ್ - ಕಾರು ನಡುವೆ ಭೀಕರ ಅಪಘಾತ : ಮೂವರ ದುರ್ಮರಣ

ಸಾರಾಂಶ

ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. 

ಮಂಡ್ಯ (ಸೆ.03]: ಡಿವೈಡರ್ ಗೆ ಖಾಸಗಿ ಬಸ್ ಹಾಗೂ ಇನೋವಾ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. 

ಮಂಡ್ಯದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗಣಂಗೂರು ಬಳಿಯಲ್ಲಿ ಬುಧವರಾ ತಡರಾತ್ರಿ ಅವಘಡವಾಗಿದೆ. ಡಿವೈಡರ್ ಹಾರಿ ಬಳಿಕ ಖಾಸಗಿ ಬಸ್ಸಿಗೆ ಕಾರು ಗುದ್ದಿದ್ದು, ಕಾರಿನಲ್ಲಿದ್ದ ಮೈಸೂರು ಮೂಲದ ಷರೀಫ್ ಹಾಗೂ ವಸೀಮ್, ತಜಮುಲ್ ರಜ್ ಎಂಬುವವರು ಸಾವಿಗೀಡಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತರೆಲ್ಲರೂ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮೃತದೇಹಗಳ ಪರೀಕ್ಷೆ ನಡೆಸಿ, ಹಸ್ತಾಂತರಿಸಲಾಗಿದೆ.   

ಶ್ರೀ ರಂಗಪಟ್ಟಣ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು