ಬಿಜೆಪಿಗೆ ಮತ್ತೆ ಮೂವರ ಸಪೋರ್ಟ್ ಖಚಿತ

By Kannadaprabha NewsFirst Published Nov 2, 2020, 11:05 AM IST
Highlights

ಬಿಜೆಪಿಗೆ ಮತ್ತೆ ಮೂವರು ಮುಖಂಡರು ಸಪೋರ್ಟ್ ಮಾಡಲು ಮುಂದಾಗಿದ್ದಾರೆ. 

ನಂಜನಗೂಡು (ನ.02):  ನಂಜನಗೂಡು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ   ಅಧ್ಯಕ್ಷರಾಗಿ ಎಚ್‌.ಎಸ್‌. ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ನಾಗಮಣಿ ಶಂಕರಪ್ಪ ಆಯ್ಕೆ ಬಹುತೇಕ ಖಚಿತವಾಗಿದೆ.

31 ಸ್ಥಾನದ ಸದಸ್ಯ ಬಲದ ನಂಜನಗೂಡು ನಗರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್‌ 10, ಜೆಡಿಎಸ್‌ 3 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ನಗರಸಭೆಯ ಅಧಿಕಾರ ಹಿಡಿಯಲು 16 ಸ್ಥಾನಗಳು ಬೇಕಿದೆ. ಈಗಾಗಲೇ ಅಧಿಕ ಸದಸ್ಯ ಬಲ ಹೊಂದಿರುವ ಬಿಜೆಪಿ ಪಕ್ಷ ಮೂವರು ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯುವುದು ಖಚಿತವಾಗಿದೆ.

ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ರೇವಣ್ಣ : ಗರಂ ಆದ ಜೆಡಿಎಸ್ ನಾಯಕ

ನಂಜನಗೂಡು ನಗರಸಭೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿ ಎಲ್ಲಾ ಸದಸ್ಯರು ಆಕಾಂಕ್ಷಿಗಳೇ. ಆದರೆ ಬಿಜೆಪಿ ಪಕ್ಷದಿಂದ ಸಾಮಾನ್ಯ ಕ್ಷೇತ್ರದಲ್ಲಿ ಮಹದೇವಸ್ವಾಮಿ, ಮಹದೇವಪ್ರಸಾದ್‌, ಕಪಿಲೇಶ್‌ ಆಯ್ಕೆಯಾಗಿ ಅರ್ಹತೆ ಹೊಂದಿದ್ದರು. ಆದರೆ 2 ಬಾರಿ ಆಯ್ಕೆಯಾಗಿರುವ ಕ್ರಷರ್‌ ಮಹದೇವಸ್ವಾಮಿ ಅವರನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾತಿ ನೀಡಲಾಗಿತ್ತು. ಆದ್ದರಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 15ನೇ ವಾರ್ಡ್‌ನಿಂದ ಗೆದ್ದಿರುವ ಮಹದೇವಮ್ಮ ಬಾಲಚಂದ್ರು, 31 ನೇ ವಾರ್ಡ್‌ನ ಸದಸ್ಯೆ ನಾಗಮಣಿ ಶಂಕರಪ್ಪ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬದಲಾದ ಕಾರಣ ಉಪಾಧ್ಯಕ್ಷ ಸ್ಥಾನವನ್ನಾದರೂ ಉಪ್ಪಾರ ಜನಾಂಗದ ಮಹಿಳೆಗೆ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ನಾಗಮಣಿ ಶಂಕರಪ್ಪ ಅವರಿಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ.

ಈ ಸಂಬಂಧ ಸಂಸದ ವಿ. ಶ್ರೀನಿವಾಸ ಪ್ರಸಾದ್‌, ಶಾಸಕ ಬಿ. ಹರ್ಷವರ್ಧನ್‌ ನೇತೃತ್ವದಲ್ಲಿ ಬಿಜೆಪಿ ಪಕ್ಷ ಖಾಸಗಿ ಹೊಟೆಲ್‌ನಲ್ಲಿ ಸಭೆ ನಡೆಸಿ ತನ್ನ ಸದಸ್ಯರಿಗೆ ಪಕ್ಷ ಸೂಚಿಸಿರುವ ಅಭ್ಯರ್ಥಿಗಳಿಗೆ ಮತ ಹಾಕಿ ಬೆಂಬಲ ನೀಡುವಂತೆ ವಿಪ್‌ ಜಾರಿಗೊಳಿಸಿದೆ.

click me!