ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ

By Kannadaprabha News  |  First Published Jul 5, 2020, 7:21 AM IST

ದುಬೈ ಮತ್ತು ಕುವೈಟ್‌ನಲ್ಲಿ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ವಂದೇ ಭಾರತ್‌ ಮಿಷನ್‌ನ ಒಂದು ವಿಮಾನ ಸೇರಿದಂತೆ ಮೂರು ವಿಮಾನಗಳು ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿವೆ. ಒಟ್ಟು 423 ಪ್ರಯಾಣಿಕರು ಆಗಮಿಸಿದ್ದು, ಮಂಗಳೂರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.


ಮಂಗಳೂರು(ಜು.05): ದುಬೈ ಮತ್ತು ಕುವೈಟ್‌ನಲ್ಲಿ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ವಂದೇ ಭಾರತ್‌ ಮಿಷನ್‌ನ ಒಂದು ವಿಮಾನ ಸೇರಿದಂತೆ ಮೂರು ವಿಮಾನಗಳು ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿವೆ. ಒಟ್ಟು 423 ಪ್ರಯಾಣಿಕರು ಆಗಮಿಸಿದ್ದು, ಅವರನ್ನು ಏಳು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ದುಬೈನಿಂದ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ 90 ಪ್ರಯಾಣಿಕರು ರಾತ್ರಿ 10 ಗಂಟೆಯ ವೇಳೆಗೆ ಬಂದಿದ್ದರೆ, ದುಬೈನಿಂದ ಹೊರಟ ಫ್ಲೈ ದುಬೈ ಚಾರಿಟಿ ವಿಮಾನ 168 ಅನಿವಾಸಿ ಕನ್ನಡಿಗರನ್ನು ಕರೆತಂದಿದೆ. ಇನ್ನೊಂದು ವಿಮಾನ ಕುವೈಟ್‌ನಿಂದ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಮಂಗಳೂರಿಗೆ ಬಂದಿದ್ದು, 165 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.

Latest Videos

undefined

ಮನೆಯಂಗಳದಲ್ಲಿತ್ತು 13 ಹೆಬ್ಬಾವು ಮರಿಗಳು: ಇಲ್ಲಿವೆ ಫೋಟೋಸ್

ವಂದೇ ಭಾರತ್‌ ಮಿಷನ್‌ನ ವಿಮಾನದ ಹೆಚ್ಚಿನ ಪ್ರಯಾಣಿಕರು ಗೋವಾದಲ್ಲಿ ಇಳಿದಿದ್ದು, ಅಲ್ಲಿಂದ ಮಂಗಳೂರಿಗೆ ವಿಮಾನ ಆಗಮಿಸಿದೆ. ಈ ವಿಮಾನ ಪೂರ್ವ ನಿಗದಿಯಂತೆ ಮಧ್ಯಾಹ್ನ 2.45ಕ್ಕೆ ಮಂಗಳೂರು ತಲುಪಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹೊರಡುವ ಸಮಯ ಮುಂದೂಡಲ್ಪಟ್ಟಿತ್ತು. ದುಬೈಯಿಂದ ಹೊರಟ ಫ್ಲೆ ೖ ದುಬೈ ಚಾರ್ಟರ್‌ ವಿಮಾನ ನೇರವಾಗಿ ಮಂಗಳೂರಿಗೆ ಬಂದಿದೆ. ಕುವೈಟ್‌ನಿಂದಲೂ ನೇರವಾಗಿ ಮಂಗಳೂರಿಗೆ ವಿಮಾನ ಬಂದಿಳಿದಿದೆ.

ಕೊನೆಗೂ ಕುವೈಟ್‌ನಿಂದ ಬಂತು: ಕುವೈಟ್‌ನ ಕೇರಳ ಮುಸ್ಲಿಂ ಎಸೋಸಿಯೇಷನ್‌ನ ಕರ್ನಾಟಕ ಶಾಖೆಯು ಮಂಗಳೂರಿಗೆ ಚಾರಿಟಿ ವಿಮಾನವನ್ನು ವ್ಯವಸ್ಥೆಗೊಳಿಸಿದ್ದು, ಜೂ.27ರಂದೇ ಮಂಗಳೂರಿಗೆ ಆಗಮಿಸಬೇಕಾಗಿತ್ತು. ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ರದ್ದುಗೊಂಡಿತ್ತು. ಇದರಿಂದಾಗಿ 165 ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ನಂತರ ವಿಮಾನಯಾನದ ದಿನಾಂಕವನ್ನು ಜು. 7ಕ್ಕೆ ಮುಂದೂಡಲಾಗಿತ್ತು. ಅನೀರಿಕ್ಷಿತ ಬೆಳವಣಿಗೆಯಲ್ಲಿ ಜೂ.30ರಂದು ಕುವೈಟ್‌ ಸಾಮಾಜ ಸೇವಕ ಮೋಹನ್‌ ದಾಸ್‌ ಪರಿಶ್ರಮದಿಂದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಎಂಎಲ್ಸಿ ಕ್ಯಾಪ್ಟನ್‌ ಗಣೀಶ್‌ ಕಾರ್ಣಿಕ್‌ ಅವರನ್ನು ಸಂಪರ್ಕಿಸಿದಾಗ ಕೂಡಲೆ ಸ್ಪಂದಿಸಿದ್ದ ಅವರು ಶನಿವಾರಕ್ಕೆ ಚಾರಿಟಿ ವಿಮಾನಯಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕುಕ್ಕೆ ಸುಬ್ರಮಣ್ಯ ದೇವಾಲಯದ ಸಿಬ್ಬಂದಿಗೆ ಕ್ವಾರೆಂಟೈನ್..!

ಈ ವಿಮಾನದಲ್ಲಿ ಆಗಮಿಸಿದವರಲ್ಲಿ ಏಳು ಮಂದಿ ಕುವೈಟ್‌ ಸರ್ಕಾರ ಕ್ಷಮದಾನದ ಮೂಲಕ ಕುವೈಟ್‌ ವೀಸಾ ನಿಯಮ ಉಲ್ಲಂಘನೆಯವರಾಗಿದ್ದರೆ ಒಬ್ಬರು ಮಹಿಳಾ ಖೈದಿ ಮತ್ತು ಅವರ ಸಣ್ಣ ಮಗು ಕೂಡ ಒಳಗೊಂಡಿದ್ದಾರೆ. ಅವರಿಗೆ ಎಸೋಸಿಯೇಶನ್‌ ವತಿಯಿಂದ ಧನಸಹಾಯವನ್ನು ವಿಮಾನ ನಿಲ್ದಾಣದಲ್ಲಿ ನೀಡಿ ಕಳುಹಿಸಿಕೊಡಲಾಗಿದೆ.

ಈ ತಿಂಗಳ ಕೊನೆವರೆಗೂ ಗೆಜ್ಜೆಗಿರಿ ಕ್ಷೇತ್ರದಲ್ಲಿ ದರ್ಶನ ನಿರ್ಬಂಧ

ಕುವೈಟ್‌ನಿಂದ ಚಾರಿಟಿ ವಿಮಾನಕ್ಕೆ ಅನುಮತಿ ಸಿಕ್ಕಿದರೂ ಕರ್ನಾಟಕ ಸರ್ಕಾರದ ಹೊಸ ನಿಯಮದಂತೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್‌- 19 ಟೆಸ್ವ್‌ ಮಾಡಿ ನೆಗಟಿವ್‌ ಇದ್ದವರು ಮಾತ್ರ ಪ್ರಯಾಣಿಸಬೇಕಿತ್ತು. ಕುವೈಟ್‌ನಲ್ಲಿ ರಾರ‍ಯಪಿಡ್‌ ಟೆಸ್ವ್‌ ಇಲ್ಲದ ಕಾರಣ ವಿಮಾನಯಾನ ಮುಂದೂಡುವ ಆಂತಕ ಎದುರಾಗಿತ್ತು. ಮತ್ತೆ ಶೋಭಾ ಕರಂದ್ಲಾಜೆ ಮತ್ತು ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ರನ್ನು ಸಂಪರ್ಕಿಸಿದಾಗ ಕೊರೋನಾ ಟೆಸ್ವ್‌ ಇಲ್ಲದೆ ವಿಮಾನಯಾನಕ್ಕೆ ಬೇಕಾದ ಅನುಮತಿ ನೀಡಿದ್ದಾರೆ. ಅದರಂತೆ ಶನಿವಾರ ಬೆಳಗ್ಗೆ ಕುವೈಟ್‌ ವಿಮಾನ ನಿಲ್ದಾಣದಲ್ಲಿ ಮಂಗಳೂರು ಪ್ರಯಾಣಿಕರನ್ನು ಬೀಳ್ಕೊಡಲಾಯಿತು. ಕುವೈಟ್‌ ಕೇರಳ ಮುಸ್ಲಿಂ ಎಸೋಸಿಯೇಷನ್‌ನ ಕರ್ನಾಟಕ ಶಾಖೆಯ ಹೆಲ್ಪ್ ಡೆಸ್ಕ್ ತಂಡವೂ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಮ್ಮಿಂದಾಗುವ ಸಹಾಯ ಮಾಡಿದರು. ಎಲ್ಲಾ ಪ್ರಯಾಣಿಕರಿಗೆ ಕೆಕೆಎಂಎ ವತಿಯಿಂದ ಸುರಕ್ಷಿತ ಕಿಟ್‌ ಮತ್ತು ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.

click me!