ಕೊಪ್ಪಳ: ಇಂದು ಲಾಕ್‌ಡೌನ್‌, ಆಚೆ ಬಂದೀರಿ ಜೋಕೆ!

By Kannadaprabha News  |  First Published Jul 5, 2020, 7:10 AM IST

ವಿವಿಧೆಡೆ ಪೊಲೀಸ್‌ ಸಿಬ್ಬಂದಿ ನಿಯೋಜನೆ| ಮಾರುಕಟ್ಟೆ ಸೇರಿದಂತೆ ಎಲ್ಲವೂ ಬಂದ್‌| ಶವಸಂಸ್ಕಾರಕ್ಕೂ 20 ಜನ ಮೀರಂಗಿಲ್ಲ|ತರಕಾರಿ, ದಿನಸಿ ಅಗಂಡಿ, ಮೆಡಿಕಲ್‌ ಶಾಪ್‌ ಸೇರಿದಂತೆ ತುರ್ತು ಸೇವೆಗಳು ಎಂದಿನಂತಿರುತ್ತವೆ|


ಕೊಪ್ಪಳ(ಜು. 06): ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತೆ ಭಾನುವಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಜಿಲ್ಲಾಡಳಿತ ಈ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಮಾರುಕಟ್ಟೆ, ಪ್ರಾರ್ಥನೆ ಸೇರಿದಂತೆ ಎಲ್ಲವನ್ನು ರದ್ದು ಮಾಡಲಾಗಿದ್ದು, ಜನ ಆಚೆ ಬರದಂತೆ ಕಟ್ಟುನಿಟ್ಟಾಗಿ ಆದೇಶ ಮಾಡಲಾಗಿದೆ. ತೀರಾ ಅನಿವಾರ್ಯ ಪರಿಸ್ಥಿತಿಯ ಹೊರತಾಗಿ ಮನೆಯಿಂದ ಆಚೆ ಬರುವಂತೆ ಇಲ್ಲ ಮತ್ತು ಐದು ಜನರಿಗಿಂತ ಹೆಚ್ಚು ಗುಂಪುಗೂಡುವಂತೆ ಇಲ್ಲ. ಯಾರೂ ಸಹ ಸಂಚಾರ, ಮಾರುಕಟ್ಟೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಶನಿವಾರ ರಾತ್ರಿಯಿಂದ ಪ್ರಾರಂಭವಾಗುವ ಲಾಕ್‌ಡೌನ್‌ ಸೋಮವಾರ ಬೆಳಗ್ಗೆಯವರೆಗೂ ಇರುತ್ತದೆ. ಇದಕ್ಕಾಗಿ ಪೊಲೀಸ್‌ ಪಡೆಯನ್ನು ಈಗಾಗಲೇ ನಿಯೋಜನೆ ಮಾಡಿದ್ದು, ಮನೆಯಿಂದ ಆಚೆ ಬಂದರೆ ಬೆತ್ತದ ರುಚಿ ಗ್ಯಾರಂಟಿ ಎಂದೇ ಹೇಳಲಾಗುತ್ತದೆ. ಜಿಲ್ಲಾ ಕೇಂದ್ರ, ಜಿಲ್ಲಾದ್ಯಂತ ನಗರ ಪ್ರದೇಶದಲ್ಲಿ ವಿಶೇಷ ನಿಗಾ ಇಡಲಾಗಿದ್ದು, ವಿಶೇಷ ಪೊಲೀಸ್‌ ಸಿಬ್ಬಂದಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ ಸೇರಿದಂತೆ ಪ್ರಮುಖ ಬೀದಿಯುದ್ದಕ್ಕೂ ನಿಯೋಜನೆ ಮಾಡಲಾಗಿದೆ.

Latest Videos

undefined

ಹೈ ಅಲರ್ಟ್‌:

ಈಗಾಗಲೇ ಈ ಕುರಿತು ಆದೇಶವನ್ನು ಕಟ್ಟುನಿಟ್ಟಾಗಿ ಹೊರಡಿಸಿರುವ ಜಿಲ್ಲಾಡಳಿತ ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಮೂಲಕ ಅಗತ್ಯ ಜಾಗೃತಿ ಮೂಡಿಸಿದೆ. ಮದುವೆ ಮತ್ತಿತರರ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುತ್ತದೆಯಾದರೂ ಪರವಾನಗಿ ಕಡ್ಡಾಯ ಮತ್ತು 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಇನ್ನು ಶವಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನ ಸೇರುವಂತೆ ಇಲ್ಲ.

ಮದುವೆಗೆ ಅಡ್ಡ ಬಂದ ಜಾತಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು

ಬೆತ್ತದ ರುಚಿ ಗ್ಯಾರಂಟಿ:

ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಲಾಕ್‌ಡೌನ್‌ ಮಾಡಲು ಮುಂದಾಗಿರುವ ಜಿಲ್ಲಾಡಳಿತ ಬಿಗಿ ಪೊಲೀಸ್‌ ಪಹರೆ ಹಾಕಿದೆ. ಹೀಗಾಗಿ, ಎಂದಿನಂತೆ ಮಾರುಕಟ್ಟೆಗೆ ಬಂದರೆ ಬೆತ್ತದ ರುಚಿ ಗ್ಯಾರಂಟಿ ಎಂದೇ ಹೇಳಲಾಗುತ್ತದೆ. ಇದೊಂದು ರೀತಿಯಲ್ಲಿ ಕಫä್ರ್ಯ ಇದ್ದಂತೆ ಇದ್ದು, ಜನರು ಆಚೆ ಬರದೆ ಇರುವುದೇ ವಾಸಿ ಎನ್ನುತ್ತಾರೆ ಪೊಲೀಸ್‌ ಹಿರಿಯ ಅಧಿಕಾರಿಗಳು. ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ ಆಚೆ ಬರುವವರ ವಿರುದ್ಧ ಕ್ರಮ ಅನಿವಾರ್ಯ ಎಂದೇ ಹೇಳಲಾಗುತ್ತದೆ.

ಏನೇನು ಇರುವುದಿಲ್ಲ:

ಮಾರುಕಟ್ಟೆ, ಸಂತೆ, ಸಾಮಾನ್ಯ ಮಾರುಕಟ್ಟೆ, ಬಸ್‌ ಸಂಚಾರ, ಖಾಸಗಿ ವಾಹನಗಳ ಸಂಚಾರ ಎಲ್ಲವೂ ಬಂದ್‌ ಎನ್ನುವಂತೆ ಕಟ್ಟನಿಟ್ಟಿನ ಆದೇಶ ಮಾಡಲಾಗಿದೆ. ಸರಕು, ಸಾಗಾಣೆಯೂ ಸಂಪೂರ್ಣ ಬಂದ್‌ ಇರುತ್ತದೆ.

ಏನೇನು ಇರುತ್ತದೆ?:

ತರಕಾರಿ, ದಿನಸಿ ಅಗಂಡಿ, ಮೆಡಿಕಲ್‌ ಶಾಪ್‌ ಸೇರಿದಂತೆ ತುರ್ತು ಸೇವೆಗಳು ಎಂದಿನಂತಿರುತ್ತವೆ. ಆದರೆ, ಇದನ್ನು ಖರೀದಿ ಮಾಡುವ ನೆಪದಲ್ಲಿ ಗುಂಪು ಗುಂಪಾಗಿ ಬರುವಂತೆ ಇಲ್ಲ. ಆರು ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.
 

click me!