ಶಿವಮೊಗ್ಗ: ಸಕ್ರೆಬೈಲಿನಿಂದ ಮತ್ತೆ 3 ಆನೆಗಳು ಶಿಫ್ಟ್?

By Kannadaprabha News  |  First Published Feb 12, 2023, 4:18 AM IST

ಜಿಲ್ಲೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಸಾಕಷ್ಟುಸದ್ದು ಮಾಡುತ್ತಿದ್ದರೆ, ಇತ್ತ ಆನೆಗಳ ವರ್ಗಾವಣೆಯೂ ಸದ್ದಿಲ್ಲದೆ ನಡೆಯುತ್ತಿದೆ ! ಮೊನ್ನೆಯಷ್ಟೇ ಸಕ್ರೆಬೈಲು ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳು ಸ್ಥಳಾಂತರಿಸಲಾಗಿದೆ. ಈಗ ಮತ್ತೆ ಮೂರು ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಿ ಕೊಡುವಂತೆ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ.


ಶಿವಮೊಗ್ಗ (ಫೆ.12) : ಜಿಲ್ಲೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಸಾಕಷ್ಟುಸದ್ದು ಮಾಡುತ್ತಿದ್ದರೆ, ಇತ್ತ ಆನೆಗಳ ವರ್ಗಾವಣೆಯೂ ಸದ್ದಿಲ್ಲದೆ ನಡೆಯುತ್ತಿದೆ ! ಮೊನ್ನೆಯಷ್ಟೇ ಸಕ್ರೆಬೈಲು ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳು ಸ್ಥಳಾಂತರಿಸಲಾಗಿದೆ. ಈಗ ಮತ್ತೆ ಮೂರು ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಿ ಕೊಡುವಂತೆ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ.

ರಾಜ್ಯ ಎರಡನೇ ಅತೀ ದೊಡ್ಡ ಆನೆ ಶಿಬಿರ, ಸದಾ ಪ್ರವಾಸಿಗರನ್ನು(Tourist) ಆರ್ಕಷಿಸುವ ತಾಣವಾಗಿರುವ ಸಕ್ರೆಬೈಲು ಆನೆ ಬಿಡಾರ(Sakrebailu Elephant Sanctuary)ದಲ್ಲಿ ಈಗ ಆನೆಗಳ ಸಂಖ್ಯೆ ಕುಸಿಯುತ್ತಲೇ ಇದೆ. ಇತ್ತೀಚಿನ ವರ್ಷದಲ್ಲಿ ಆನೆ ಬಿಡಾರದ ಅನೇಕ ಆನೆಗಳು ಸಾವನ್ನಪ್ಪಿರುವುದು ಒಂದೆಡೆಯಾದರೆ, ಸರ್ಕಾರದಿಂದ ಬೇರೆ ರಾಜ್ಯಕ್ಕೆ ಇಲ್ಲಿನ ಆನೆಗಳ ವರ್ಗಾವಣೆಯ ಆದೇಶವೂ ಇದಕ್ಕೆ ಕಾರಣವಾಗಿದೆ.

Tap to resize

Latest Videos

Shivamogga: ಶಾಮನೂರು ನೀಡಿದ್ದ ಆನೆ ಸಕ್ರೆಬೈಲ್‌ ಬಿಡಾರದಲ್ಲಿ ಸಾವು

ಎರಡರ ಬದಲು ಮೂರು: ಕಳೆದ ಬಾರಿ ಸರ್ಕಾರ ಆದೇಶದ ಪ್ರಕಾರ ಸಕ್ರೆಬೈಲು ಆನೆ ಬಿಡಾರದಿಂದ ನಾಲ್ಕು ಆನೆಗಳನ್ನು ಕಳುಹಿಸಿಕೊಡಬೇಕಿತ್ತು. ಆದರೆ, ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ, ರವಿಯನ್ನು ಮಧ್ಯಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಇದರ ಬೆನ್ನೆಲ್ಲೆ, ಈಗ ಎರಡು ಆನೆಗಳ ಬದಲಿಗೆ ಮೂರು ಆನೆ ಕಳುಹಿಸಿಕೊಡುವಂತೆ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸಕ್ರೆಬೈಲ್‌ ಆನೆ ಬಿಡಾರದ ಆರು ವರ್ಷದ ಐರಾವತ, ನಾಲ್ಕು ವರ್ಷದ ಧನುಶ್‌ 14 ವರ್ಷದ ಆಲೆ ಆನೆಗಳನ್ನು ಉತ್ತರ ಭಾರತದ ಮಧ್ಯಪ್ರದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಆನೆಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಅಧಿಕಾರಿಗಳ ತಂಡ, ಈ ಮೂರು ಆನೆಗಳನ್ನು ಆಯ್ಕೆ ಮಾಡಿ, ಅವು ಗಳನ್ನು ತಮಗೆ ನೀಡುವಂತೆ ಅರಣ್ಯ ಇಲಾಖೆಗೆ ನೀಡಿದೆ.

ಬಿಡಾರದಲ್ಲಿ 10 ಆನೆ ಸಾಕಂತೆ !: ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಂಖ್ಯೆ ಹೆಚ್ಚಿತ್ತು. ಆದರೆ, ಕೆಲ ಆನೆಗಳು ಸಾವನ್ನಪ್ಪಿದ ಬಳಿಕ ವರ್ಷದಿಂದ ವರ್ಷಕ್ಕೆ ಆನೆಗಳ ಸಂಖ್ಯೆ ಕುಸಿಯುತ್ತಲೇ ಇದೆ. ಕಳೆದ ವರ್ಷವಷ್ಟೇ ಸೂರ್ಯ ಆನೆಯನ್ನು ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಆನೆ ಬಿಡಾರದ ವಿಶೇಷ ಅತಿಥಿಯಾಗಿದ್ದ ಗಣೇಶ ಆನೆ ಸಾವನ್ನಪ್ಪಿತು ್ತ. ಮೊನ್ನೆಯಷ್ಟೇ 2 ಆನೆಗಳನ್ನು ಇಲ್ಲಿಂದ ಮಧ್ಯಪ್ರದೇಶಕ್ಕೆ ಕಳುಹಿಸಲಾಗಿದೆ. ಈಗ ಮತ್ತೆ 3 ಕಳುಹಿಸಿದರೆ ಬಿಡಾರದಲ್ಲಿ ಆನೆಗಳ ಸಂಖ್ಯೆ 16ಕ್ಕೆ ಇಳಿಯಲಿದೆ. ಹೈಕೋರ್ಚ್‌ ಆದೇಶದ ಪ್ರಕಾರ, ಒಂದು ಕ್ಯಾಂಪ್‌ನಲ್ಲಿ 10 ಆನೆಗಳಷ್ಟೆಇರಬೇಕು ಎಂಬ ನಿಯಮವಿದೆ. ಇದು ಸಹ ಆನೆಗಳ ವರ್ಗಾವಣೆಯಲ್ಲಿ ಮುಖ್ಯ ಅಂಶವಾಗಿ ಗಮನ ಸೆಳೆಯಲಿದೆ. ಒಟ್ಟಾರೆ, ಎರಡು ಆನೆಗಳ ಬೆನ್ನಲ್ಲೆ ಇದೀಗ ಮತ್ತೆ ಮೂರು ಆನೆಗಳ ವರ್ಗಾವೆಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಆನೆಗಳ ವರ್ಗಾವಣೆ ಸಕ್ರೆಬೈಲ್‌ ಬಿಡಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗೆ ಬಿಡಾರಗಳಿಂದ ಆನೆಗಳನ್ನು ಬೇರೆಡೆಗೆ ಶಿಪ್‌್ಟಮಾಡಿದರೆ, ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವುದಷ್ಟೆಅಲ್ಲದೇ, ಆನೆ ಕ್ಯಾಂಪ್‌ಗಳನ್ನು ಖಾಲಿ ಮಾಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

 

ಜೀವನದಲ್ಲಿ ಒಮ್ಮೆ ನೋಡಿ ಕೊಡಗು, ಅಂಥದ್ದೇನಿದೆ ಅಲ್ಲಿ?

ಮಧ್ಯಪ್ರದೇಶದ ಕಾನ್ಹಾ ಹುಲಿ ಅಭಯಾರಣ್ಯಕ್ಕೆ ಈ ಮೊದಲು ನಾಲ್ಕು ಆನೆಗಳನ್ನು ಕಳುಹಿಸಿಕೊಡುವಂತೆ ಸರ್ಕಾರದಿಂದ ಆದೇಶ ಬಂದಿತ್ತು. ಮೊನ್ನೆ ಎರಡು ಆನೆಗಳನ್ನು ಕಳುಹಿಸಿ ಕೊಟ್ಟಿದ್ದೆವು. ಗ ಮತ್ತೆ ಎರಡು ಆನೆಗಳನ್ನು ಕಳುಹಿಸಿಕೊಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಅದರಂತೆ ಎರಡು ಆನೆಗಳನ್ನು ಮಾತ್ರ ಸ್ಥಳಾಂತರ ಮಾಡಲಾಗುತ್ತಿದೆ.

- ಪ್ರಸನ್ನ ಪಟಗಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಶಿವಮೊಗ್ಗ.

click me!