ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್ ಕಸಾಪ ಅಧ್ಯಕ್ಷ ನಿಧನರಾಗಿದ್ದಾರೆ. ಜೂ. 25 ಬೆಳಗ್ಗೆ 2 ಗಂಟೆ ಸುಮಾರಿಗೆ 59 ವರ್ಷದ ಮೋಹನ್ ಕುಮಾರ್ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು, (ಜೂ.26): ಜಿಲ್ಲೆಯ ಮೂಡಿಗೆರೆ ತಾಲೂಕು, ಬಣಕಲ್ ಹೋಬಳಿಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಮೋಹನ್ ಕುಮಾರ್ ಶೆಟ್ಟರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಜೂ. 25 ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೋಹನ್ ಕುಮಾರ್ (59) ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಮೋಹನ್ ಕುಮಾರ್ ಕಳೆದ ಎರಡು ವಾರಗಳಿಂದ ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಣಕಲ್ ವಿದ್ಯಾಭಾರತಿ ಶಾಲೆಯ ನಿರ್ದೇಶಕರಾಗಿ, ಹೋಬಳಿಯಲ್ಲಿ ನಾನಾ ಕನ್ನಡ ಪರ ಕೆಲಸಗಳನ್ನು ಮೋಹನ್ ಕುಮಾರ್ ಮಾಡುತ್ತಾ ಬಂದಿದ್ದರು.
ಇವರ ಅವಧಿಯಲ್ಲಿ ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 22 ಮನೆಯಂಗಳದ ತಿಂಗಳ ಕಾರ್ಯಕ್ರಮ, ಆಲೇಖಾನ್ ಹೊರಟ್ಟಿಯಲ್ಲಿ ಕಥಾಕಮ್ಮಟ, ಸಾಹಿತ್ಯ ಅಕ್ಷತೆ ಕಾರ್ಯಕ್ರಮಗಳನ್ನು ಇವರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿದ್ದ ಯುವ ಕವಿಗಳ ಕಥಾ ಸಂಕಲನಕ್ಕೆ ಸಹ ಸಂಪಾದಕರೂ ಆಗಿದ್ದರು.
ಉಳಿದಂತೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದರು.