ಜಿಲ್ಲೆಯೊಳಗೆ ಕೊರೋನಾ ವೈರಸ್ ಹರಡುವ ಆತಂಕ ಸದ್ಯಕ್ಕೆ ದೂರವಾಗಿದೆ. ಜಿಲ್ಲೆಯಲ್ಲಿದ್ದ 3 ಮಂದಿ ಕೊರೋನಾ ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರೆಲ್ಲರ ಗಂಟಲಧ್ರವವನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವು ನೆಗೆಟಿವ್ ಬಂದಿವೆ.
ಉಡುಪಿ(ಏ.11): ಜಿಲ್ಲೆಯೊಳಗೆ ಕೊರೋನಾ ವೈರಸ್ ಹರಡುವ ಆತಂಕ ಸದ್ಯಕ್ಕೆ ದೂರವಾಗಿದೆ. ಜಿಲ್ಲೆಯಲ್ಲಿದ್ದ 3 ಮಂದಿ ಕೊರೋನಾ ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರೆಲ್ಲರ ಗಂಟಲಧ್ರವವನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವು ನೆಗೆಟಿವ್ ಬಂದಿವೆ. ನಗರದ ಡಾ.ಟಿ. ಎಂ. ಎ. ಪೈ ಕೋವಿಡ್ ಆಸ್ಪತ್ರೆಯಲ್ಲಿರುವ ಅವರನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅಲ್ಲದೇ ಅವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಇದ್ದವರ ವರದಿಯೂ ಬಂದಿದ್ದು, ಅವೂ ನೆಗೆಟಿವ್ ಎಂದು ಬಂದಿದೆ. ಆದ್ದರಿಂದ ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೋನಾ ಹರಡುವವರು ಯಾರೂ ಇಲ್ಲ ಎಂದು ಭಾವಿಸಲಾಗಿದೆ. ಆದರೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವವರಿಂದ ಕೊರೋನಾ ಹರಡುವ ಆತಂಕ ಇದ್ದೇ ಇದೆ ಎಂದಿರುವ ಜಿಲ್ಲಾಧಿಕಾರಿ, ಅದೇ ಕಾರಣಕ್ಕೆ ಜಿಲ್ಲೆಯೊಳಗೆ ಹೊರಗಿನಿಂದ ಯಾರನ್ನೂ ಬಿಟ್ಟುಕೊಳ್ಳದಂತೆ ಸೀಲ್ ಡೌನ್ ಮಾಡಲಾಗುತ್ತಿದೆ ಎಂದಿದ್ದಾರೆ.
ಡೆಲ್ಲಿಗೆ ಹೋದ ಮೂವರ ಪರೀಕ್ಷೆ
ಶುಕ್ರವಾರ ಜಿಲ್ಲೆಯಲ್ಲಿ ಮತ್ತೇ ಡೆಲ್ಲಿಗೆ ಹೋಗಿ ಬಂದ 3 ಮಂದಿ ಸೇರಿ ಒಟ್ಟು 14 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಮಂಗಳೂರು ವೆನ್ಲಾಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಗೆ ಒಟ್ಟು 47 ಮಾದರಿಗಳ ವರದಿಗಾಗಿ ಕಾಯಲಾಗುತ್ತಿದೆ.
ಗಡಿ ದಾಟಲು ಹೆಲ್ತ್ ಎಮೆರ್ಜೆನ್ಸಿ ಡ್ರಾಮಾ..! ಅಡ್ಮಿಟ್ ಆಗಿ ರೋಗಿಗಳು ಪರಾರಿ
ಶುಕ್ರವಾರ ಒಟ್ಟು 5 ಮಂದಿ ಕೊರೋನಾ ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿ ಯಾರೂ ಇಲ್ಲ. ಆಸ್ಪತ್ರೆ ಕ್ವಾರಂಟೈನ್‌ನಲ್ಲಿ 2 ಮಂದಿ ಇದ್ದಾರೆ. 38 ಮಂದಿ ಐಸೋಲೇಶನ್ ವಾರ್ಡಿನಲ್ಲಿದ್ದಾರೆ.