ಶಿವಮೊಗ್ಗದ ಪಾಲಿಗೆ ಶುಭಸುದ್ದಿಯೊಂದು ಹೊರಬಿದ್ದಿದ್ದು, ಆಹಮದಾಬಾದಿನಿಂದ ಬಂದಿದ್ದವರ ಪೈಕಿ ಮತ್ತೆ ಮೂವರು ಗುಣುಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.30): ಗುಜರಾತ್ ರಾಜ್ಯದ ಅಹಮದಬಾದ್‌ನಿಂದ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದ 9 ಮಂದಿ ಕೊರೋನಾ ಸೋಂಕಿತರಲ್ಲಿ ಮತ್ತೆ ಮೂವರು ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕೊರೋನಾ ಗೆದ್ದವರಿಗೆ ಆಸ್ಪತ್ರೆ ಸಿಬ್ಬಂದಿ ಶುಭ ಹಾರೈಸಿ ಬೀಳ್ಕೊಡಲಾಯಿತು.
ಅಹಮದಾಬಾದಿನಿಂದ ಜಿಲ್ಲೆಗೆ ಆಗಮಿಸಿದ 9 ಮಂದಿಯಲ್ಲಿ ಮೊದಲು 8 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಮೇ 24 ರಂದು ಭಾನುವಾರ ಮತ್ತೊಬ್ಬರಿಗೂ ಸೋಂಕು ಕಂಡುಬಂದಿತ್ತು. ಸೋಂಕಿತರಲ್ಲಿ ನಾಲ್ವರು ಸೋಮವಾರವಷ್ಟೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಸೋಮವಾರ ಬಿಡುಗಡೆಯಾದ ನಾಲ್ವರನ್ನು ಹೊರತುಪಡಿಸಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನುಳಿದ ನಾಲ್ವರಲ್ಲಿ ಮೂವರು ಗುಣಮುಖರಾಗಿರುವ ಹಿನ್ನೆಲೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪಿ-811, ಪಿ-812, ಪಿ-814 ಬಿಡುಗಡೆಯಾದವರು. ಇವರು ಮೇ 10 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರು ಶಿಕಾರಿಪುರ, ಒಬ್ಬರು ತೀರ್ಥಹಳ್ಳಿ ತಾಲೂಕಿನವರು. ಗುಣಮುಖರಾದ ಎಲ್ಲರಿಗೂ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 35 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಈವರೆಗೂ 7 ಜನರು ಗುಣಮುಖರಾಗಿದ್ದಾರೆ. ಇನ್ನುಳಿದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕ್ವಾರೆಂಟೈನ್‌ನಲ್ಲಿದ್ದವ್ರಿಗೆಲ್ಲಾ ಕೊರೋನಾ ಟೆಸ್ಟ್ ಇಲ್ಲ, ಲಕ್ಷಣ ಇದ್ರೆ ಮಾತ್ರ ಪರೀಕ್ಷೆ
ಭದ್ರಾವತಿ ಮೂಲದ ಮಹಿಳೆಯಲ್ಲಿ ಸೋಂಕು
ಇತ್ತ ಶುಕ್ರವಾರ ಇನ್ನೊಂದು ಕೊರೋನಾ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಕಂಡು ಬಂದಿದೆ. ಭದ್ರಾವತಿ ಮೂಲದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಮೂಲದ ಮಹಿಳೆ ಕಳೆದ ವಾರ ದೆಹಲಿಯಿಂದ ಬಂದಿದ್ದು, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸದ್ಯ ಪಿ-2583 ಎಂದು ಗುರುತಿಸಲಾಗಿರುವ ಇವರಲ್ಲಿ ಮೇಲ್ನೋಟಕ್ಕೆ ಕೊರೋನಾದ ಶೀತ, ಕೆಮ್ಮು, ಜ್ವರದ ಯಾವುದೇ ಲಕ್ಷಣಗಳೂ ಕಂಡು ಬಂದಿಲ್ಲ. ಆದರೆ ಸ್ವಾಬ್ ಟೆಸ್‌ನಲ್ಲಿ ಇವರಿಗೆ ಕೊರೋನಾ ಪಾಸಿಟಿವ್ ಕಾಣಿಸಿದೆ. ಸದ್ಯ ಇವರನ್ನು ಮೆಗ್ಗಾನ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರು- 35
ಬಿಡುಗಡೆ-7
ಚಿಕಿತ್ಸೆ ಪಡೆಯುತ್ತಿರುವವರು-28
ವಿದೇಶದಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರು-8
ಹೊರ ರಾಜ್ಯದಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರು-376