
ಬೆಂಗಳೂರು (ಅ.05): ದೇವರ ಪ್ರಸಾದ, ಸೀರೆ ಹಾಗೂ ಮಿಕ್ಸಿಯಲ್ಲಿ ಮಾದಕ ವಸ್ತು ತುಂಬಿ ವಿದೇಶಕ್ಕೆ ಸಾಗಿಸುತ್ತಿದ್ದ ಮೂವರು ಪೆಡ್ಲರ್‌ಗಳು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (NCB)ಬಲೆಗೆ ಬಿದ್ದಿದ್ದಾರೆ.
ಈ ಮೂವರ ಪೈಕಿ ಓರ್ವ ವಿದೇಶದಲ್ಲಿ ಮಾಜಿ ಪೊಲೀಸ್ ಅಧಿಕಾರಿ (Ex Police Officer) ಆಗಿದ್ದು, ಇನ್ನುಳಿದವರು ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದರು. ಮೂವರು ಸಹ ಕೇರಳ ರಾಜ್ಯದವರಾಗಿದ್ದಾರೆ. ಆರೋಪಿಗಳಿಂದ 1 ಕೋಟಿ ರು. ಮೌಲ್ಯದ ಹಶಿಶ್ (Hashish) ಸೇರಿದಂತೆ ಇತರೆ ಡ್ರಗ್ಸ್ (Drugs) ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಸಮುದ್ರ ಮಧ್ಯೆ ಡ್ರಗ್ಸ್ ಪಾರ್ಟಿ: ಸಿಕ್ಕ ಡ್ರಗ್ಸ್ ಪ್ರಮಾಣವೆಷ್ಟು ಗೊತ್ತಾ.?
ಇತ್ತೀಚಿಗೆ ವಿದೇಶಕ್ಕೆ ದೇವರ ಪ್ರಸಾದದ ಡಬ್ಬಿಯಲ್ಲಿ 3.5 ಕೆ.ಜಿ. ಹಶಿಶ್ ಅನ್ನು ತುಂಬಿ ಬಹ್ರೇನ್‌ಗೆ ಸಾಗಿಸಲು ಆರೋಪಿಗಳು ಯತ್ನಿಸಿದ್ದರು. ಆ ಬಗ್ಗೆ ಖಚಿತ ಮಾಹಿತಿ ಪಡೆದ ಎನ್‌ಸಿಬಿ ಅಧಿಕಾರಿಗಳು, ಕೇರಳದ (Kerala) ಕೊಚ್ಚಿ ವಿಮಾನ ನಿಲ್ದಾಣದಲ್ಲಿ (Kochi Airport) ಸೆ.12ರಂದು ದೇವರ ಪ್ರಸಾದದಲ್ಲಿದ್ದ ಡ್ರಗ್ಸ್ ಪತ್ತೆ ಹಚ್ಚಿ ಒಬ್ಬಾತನನ್ನು ಸೆರೆ ಹಿಡಿದಿದ್ದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಈ ಜಾಲದ ಮಾಸ್ಟರ್ ಮೈಂಡ್ ಆಗಿದ್ದ ಬಹ್ರೇನ್ ದೇಶದ ಮಾಜಿ ಪೊಲೀಸ್ ಅಧಿಕಾರಿ, ಕೇರಳ ಮೂಲದ ವ್ಯಕ್ತಿಯನ್ನು ಎನ್‌ಸಿಬಿ ಬಂಧಿಸಿದೆ.
ವಿಮಾನ ನಿಲ್ದಾಣದಲ್ಲಿ ತನ್ನ ಸಹಚರ ಸೆರೆಯಾದ ಬಳಿಕ ಬಂಧನ ಭೀತಿಯಿಂದ ಮಾಜಿ ಪೊಲೀಸ್ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ. ಆತನ ಇರುವಿಕೆಗೆ ಕುರಿತು ಖಚಿತ ಮಾಹಿತಿ ಪಡೆದು ಸೆರೆ ಹಿಡಿಯಲಾಗಿದೆ. ಅಲ್ಲದೆ ಕೇರಳದ ಎರ್ನಾಕುಲಂನಲ್ಲಿ 11.6 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ದಾಳಿಯಲ್ಲಿ ಚೆನ್ನೈನ (Chennai) ವಿಮಾನ ನಿಲ್ದಾಣದಲ್ಲಿ ಕೋರಿಯರ್ ಸೋಗಿನಲ್ಲಿ ಆಸ್ಪ್ರೇಲಿಯಾಕ್ಕೆ ಡ್ರಗ್ಸ್ ಸಾಗಿಸಲು ಯತ್ನಿಸಿದ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಲ್ಲಿ ಕೋಟಿ ಮೌಲ್ಯದ ಡ್ರಗ್ಸ್
ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 3.20 ಕೋಟಿ ಮೌಲ್ಯದ ನಿಷೇಧಿತ ಮೆಥಾಫೆಟಮೆನ್ ಮಾದಕವಸ್ತು(Drugs) ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನ್ನು ಬೆಂಗಳೂರು ರೈಲ್ವೆ ವಿಭಾಗದ ರೈಲ್ವೆ ಭದ್ರತಾ ಪಡೆ(ಆರ್‌ಪಿಎಫ್) ಸಿಬ್ಬಂದಿ ಮಾಲು ಸಮೇತ ಹಿಡಿದಿದ್ದಾರೆ.
ಮಾದಕ ಲೋಕ ಎಂಬ ಮಾಯಾಲೋಕದ ರಹಸ್ಯಗಳು..!
ಬಂಧಿತ ವ್ಯಕ್ತಿಯಿಂದ 3.20 ಕೋಟಿ ಮೌಲ್ಯದ 640 ಗ್ರಾಂ ಮೆಥಾಫೆಟಮೆನ್ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಆರ್‌ಪಿಎಫ್‌ನ ಎಎಸ್‌ಐ ಎನ್.ಪಿ.ತನುಜಾ ಅವರು ಶುಕ್ರವಾರ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ(Train) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ರೈಲಿನೊಳಗೆ ವ್ಯಕ್ತಿಯೊಬ್ಬನ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದನ್ನು ತನುಜಾ ಗಮನಿಸಿದ್ದಾರೆ. ಬಳಿಕ ರೈಲಿನಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಇತರೆ ಆರ್‌ಪಿಎಫ್(RPF) ಸಿಬ್ಬಂದಿಗೂ ಈತನ ವರ್ತನೆ ಬಗ್ಗೆ ಮಾಹಿತಿ ನೀಡಿದ್ದು, ನಿಗಾವಹಿಸುವಂತೆ ಸೂಚಿಸಿದ್ದಾರೆ