ಬಿಜೆಪಿ ಸೇರಲು ನನಗೂ ಆಫರ್‌ ಬಂದಿತ್ತು : ಕೈ ಮುಖಂಡ

By Kannadaprabha News  |  First Published Oct 5, 2021, 9:37 AM IST
  •  ಬಿಜೆಪಿ ಸೇರಿದರೆ ಹಣದ ಜೊತೆ ಮಂತ್ರಿಗಿರಿ ಸಹ ಕೊಡಲಾಗುವುದೆಂದು ನನಗೂ ಆಫರ್‌ ನೀಡಿದ್ದರು
  • ಮಾತೃಪಕ್ಷಕ್ಕೆ ದ್ರೋಹ ಬಗೆಯಬಾರದೆಂದು ಬಿಜೆಪಿಗರ ಆಫರ್‌ ನಿರಾಕರಿಸಿದೆ ಎಂದ ಮುಖಂಡ

ಬಂಗಾರಪೇಟೆ (ಅ.05):  ಬಿಜೆಪಿ (BJP) ಸೇರಿದರೆ ಹಣದ ಜೊತೆ ಮಂತ್ರಿಗಿರಿ ಸಹ ಕೊಡಲಾಗುವುದೆಂದು ನನಗೂ ಆಫರ್‌ ನೀಡಿದ್ದರು, ಆದರೆ ಮಾತೃಪಕ್ಷಕ್ಕೆ ದ್ರೋಹ ಬಗೆಯಬಾರದೆಂದು ಬಿಜೆಪಿಗರ ಆಫರ್‌ ನಿರಾಕರಿಸಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ (Narayana Swamy) ಹೇಳಿದರು.

ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ ನಡೆದ ಗಾಂಧಿ ಗ್ರಾಮ ಸ್ವರಾಜ್ಯ ಕಾಂಗ್ರೆಸ್‌ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿ, ನನಗೆ ಹಣದ ವ್ಯಾಮೋಹವಿದ್ದಿದ್ದರೆ ಯಡಿಯೂರಪ್ಪ (Yediyurappa) ಮುಖ್ಯಮಂತ್ರಿಯಾಗಿದ್ದಾಗ ನನಗೂ ಪಕ್ಷ ಸೇರುವಂತೆ ಮುಖಂಡರು ಆಮಿಷವೊಡ್ಡಿದ್ದರು. ಆದರೆ ನಾನು ಅವರ ಆಹ್ವಾನವನ್ನು ನಿರಾಕರಿಸಿದೆ ಎಂದು ತಿಳಿಸಿದರು.

Latest Videos

undefined

40 ಅಲ್ಲ, 4 ಬಿಜೆಪಿ ಶಾಸಕರನ್ನು ಕರೆದುಕೊಂಡು ಹೋಗಲಿ

ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆ :  ಕಳೆದ 8ವರ್ಷಗಳಿಂದ ಶಾಸಕನಾಗಿ ಕ್ಷೇತ್ರದದಲ್ಲಿ ಅಭಿವೃದ್ದಿಯಲ್ಲಿ ಹಿಂದೆದೂ ಕಾಣಷ್ಟುಸಾಧನೆ ಮಾಡಿರುವೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ (JDS) ಅಭ್ಯರ್ಥಿಗೆ 54ಸಾವಿರ ಮತಗಳನ್ನು ನೀಡಿದ್ದು ಬೇಸರ ತಂದಿದೆ. ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ ಮಾಡುವರೆಂದು ನಂಬಿ ಮತ ಹಾಕಿದರು. ಆದರೆ ಅವರು ಮುಖ್ಯಮಂತ್ರಿಯಾದರೂ ಏನೂ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

40 ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ : ಸತೀಶ ಜಾರಕಿಹೊಳಿ ಹೊಸ ಬಾಂಬ್‌

ಪಕ್ಷದ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ (K Chandrareddy) ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿಲ್ಲ, ಅನುದಾನ ಹಂಚಿಕೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದ್ದರೂ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ್ದಾರೆ. ಬಿಜೆಪಿ ನಾಯಕರದ್ದು ಬರೀ ಪ್ರಚಾರ ವಿನಃ ಕೊಟ್ಟಮಾತನ್ನು ಯಾವುದನ್ನೂ ಕಾರ‍್ಯಗತ ಮಾಡಿಲ್ಲ ಎಂದು ಟೀಕಿಸಿದರು.

ಸಭೆಯಲ್ಲಿ ಬ್ಲಾಕ್‌ ಅಧ್ಯಕ್ಷ ಕೆ.ವಿ.ನಾಗರಾಜ್‌,ತಾಪಂ ಮಾಜಿ ಅಧ್ಯಕ್ಷ ಮಹಾದೇವ್‌,ಯಳೇಸಂದ್ರ ಗ್ರಾಪಂ ಅಧ್ಯಕ್ಷ ಶ್ರೀನಿವಾಸರೆಡ್ಡಿ,ವೆಂಕಟೇಶಗೌಡ,ಮತ್ತಿತರರು ಇದ್ದರು.

4ಕೆಬಿಪಿಟಿ.1.ಬಂಗಾರಪೇಟೆ ತಾಲೂಕು ಯಳೇಸಂದ್ರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ನಾರಾಯಣಸ್ವಾಮಿ ಮಾತನಾಡಿದರು.

click me!