ಸಾವಿರಾರು ಸಂಖ್ಯೆಯಲ್ಲಿ ಜಾತ್ರೆ ಲೈವ್ ಮಾಡಿದ ಭಕ್ತರು| ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ರಥೋತ್ಸವ| ಗವಿಮಠದ ಕರ್ತೃ ಗದ್ದುಗೆಗೆ ಬೆಳ್ಳಂಬೆಳಗ್ಗೆ ದೀಡ್ ನಮಸ್ಕಾರ ಹಾಕಿದ ಚಿಕ್ಕೇನಕೊಪ್ಪದ ಶ್ರೀಶಿವಶಾಂತವೀರ ಮಹಾಸ್ವಾಮೀಜಿ|
ಕೊಪ್ಪಳ(ಫೆ.01): ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ರಥೋತ್ಸವವನ್ನು ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 3.5 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಇದು ಗವಿಮಠದ ಫೇಸ್‌ಬುಕ್ ಖಾತೆಯಲ್ಲಿ ಆಗಿರುವ ದಾಖಲೆಯಾಗಿದೆ. ಇದಲ್ಲದೆ ಇನ್ನು ಸಾರ್ವಜನಿಕರೆ ಸಾವಿರಾರು ಸಂಖ್ಯೆಯಲ್ಲಿ ಲೈವ್ ಮಾಡಿದ್ದಾರೆ. ಇದರಲ್ಲಿಯೂ ಸಾವಿರಾರು ಜನರು ವೀಕ್ಷಣೆ ಮಾಡಿದ್ದಾರೆ.
ಶ್ರೀಗವಿಸಿದ್ಧೇಶ್ವರ ರಥೋತ್ಸವದ ಮರುದಿನ ಭಾನುವಾರ ಚಿಕ್ಕೇನಕೊಪ್ಪದ ಶ್ರೀಶಿವಶಾಂತವೀರ ಮಹಾಸ್ವಾಮಿಗಳೇ ಗವಿಮಠದ ಕರ್ತೃ ಗದ್ದುಗೆಗೆ ಬೆಳ್ಳಂಬೆಳಗ್ಗೆ ದೀಡ್ ನಮಸ್ಕಾರ ಹಾಕಿದರು. ಪ್ರತಿ ವರ್ಷವೂ ಸಂಪ್ರದಾಯದಂತೆ ಸಂಜೆ ದೀಡ್ ನಮಸ್ಕಾರ ಹಾಕುವ ಪದ್ಧತಿ ಇತ್ತು.
ಕೊಪ್ಪಳ: ಜಾತ್ರೆ ಸಾಕ್ಷೀಕರಿಸಿದ ಲಕ್ಷಾಂತರ ಭಕ್ತರು..!
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇವರ ಜೊತೆಗೆ ಮಠಕ್ಕೆ ದೀಡ್ ನಮಸ್ಕಾರ ಹಾಕುವ ಪದ್ಧತಿ ಇತ್ತು. ಆದರೆ, ಈ ವರ್ಷ ಜಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರಬಾರದು ಎಂದು ಬೆಳ್ಳಂಬೆಳಗ್ಗೆಯೇ ದೀಡ್ ನಮಸ್ಕಾರ ಹಾಕಿದರು.