ವಿಜಯಪುರ (ಸೆ.12): ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲಘು ಭೂಕಂಪನಕ್ಕೆ ಸಾಕ್ಷಿಯಾಗಿದ್ದ ವಿಜಯಪುರದಲ್ಲಿ ಶನಿವಾರ ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ.
ಆತಂಕ ಸೃಷ್ಟಿಸಿದೆ. ಬೆಳಗ್ಗೆ 8.18ರಿಂದ 8.20ರ ವೇಳೆ ಎರಡು ಬಾರಿ ಕಂಪನ ಸಂಭವಿಸಿದ ಅನುಭವದ ಆಗಿದೆ.
ವಿಜಯಪುರದಲ್ಲಿ ಮತ್ತೆ ಭೂಮಿ ನಡುಗಿದ ಅನುಭವ..!
ಇದಕ್ಕೂ ಮೊದಲು ಭಾರೀ ಸದ್ದೂ ಕೇಳಿಸಿದೆ. ಸೆ.4ರಂದು ಮಧ್ಯರಾತ್ರಿ ಜಿಲ್ಲೆಯ ಹಲವೆಡೆ ರಿಕ್ಟರ ಮಾಪನದಲ್ಲಿ 3.9 ತೀವ್ರತೆಯ ಭೂಕಂಪನ ಸಂಭವಿಸಿತ್ತು.
ಇದರಿಂದ ಸ್ತಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ.