
ಬೆಂಗಳೂರು(ಜು.11): ನಮ್ಮ ಮೆಟ್ರೋದ ಹಂತ-3 ನಿರ್ಮಾಣದ ಯೋಜನಾ ವೆಚ್ಚದಲ್ಲಿ 287 ಕೋಟಿ ಕಡಿಮೆ ಮಾಡಿ .16,041 ಕೋಟಿ ಮೊತ್ತದ ಪರಿಷ್ಕೃತ ಯೋಜನಾ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದೆ ಎನ್ನಲಾಗಿದೆ.
ಆದರೆ, ಪರಿಷ್ಕೃತ ವರದಿಯಲ್ಲಿ ‘ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಶಿಫಾರಸ್ಸಿನಂತೆ ರೋಲಿಂಗ್ ಸ್ಟಾಕ್‌ಗೆ (ವಾರ್ಷಿಕ ಶೇ.5) ನೀಡಲಾಗುತ್ತಿದ್ದ ಹೆಚ್ಚುವರಿ ವೆಚ್ಚವನ್ನು ತೆಗೆಯಲಾಗಿದೆ. ಹೀಗಾಗಿ ಯೋಜನಾ ವೆಚ್ಚ ಕಡಿತಗೊಂಡಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋ 'ಮಿಸ್ಸಿಂಗ್ ಲಿಂಕ್' ಪೂರ್ಣ ಶೀಘ್ರ : ಹೊಸ ಸಿಗ್ನಲಿಂಗ್ ವ್ಯವಸ್ಥೆ ಕೆಲಸ ಬಾಕಿ
ಹಿಂದಿನ ಸರ್ಕಾರವು 2022ರ ನವೆಂಬರ್‌ನಲ್ಲಿ 16,328 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅನುಮೋದಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ರಾಜ್ಯವು ಸಲ್ಲಿಸಿದ ಡಿಪಿಆರ್‌ಗೆ ಕೇಂದ್ರವು ಹಲವು ಸ್ಪಷ್ಟನೆಗಳನ್ನು ಕೇಳಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳಿರುವ ಕಾರಣ ವೆಚ್ಚವನ್ನು ಮರು ಪರಿಶೀಲನೆ ಮಾಡುವಂತೆ ಸೂಚಿಸಿತ್ತು. ಹೀಗಾಗಿ ‘ಕನ್ಸಲ್ಟೆನ್ಸಿ ಸಂಸ್ಥೆ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸರ್ವೀಸಸ್ ಲಿಮಿಟೆಡ್’ ಮೂಲಕ ಪರಿಷ್ಕೃತ ಯೋಜನೆ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು ರೂಪಿಸಿತ್ತು.