* ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುರಬರಹಳ್ಳಿಯಲ್ಲಿ
* ಸ್ಫೋಟದ ರಭಸಕ್ಕೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದ ಯುವಕ
* ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ದಾವಣಗೆರೆ(ಜು.05): ಟೈಯರ್ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕುರಬರಹಳ್ಳಿಯಲ್ಲಿ ಇಂದು(ಮಂಗಳವಾರ) ನಡೆದಿದೆ. ಸ್ಫೋಟಗೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರುತಿ(28) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಜೆಸಿಬಿ ವಾಹನದ ಟೈಯರ್‌ಗೆ ಗಾಳಿ ತುಂಬಿಸುವಾಗ ಗಾಳಿ ಹೆಚ್ಚಾಗಿ ಟೈಯರ್ ಸ್ಪೋಟಗೊಂಡಿದೆ. ಈ ವೇಳೆ ಟೈಯರ್ ಸ್ಫೋಟಗೊಂಡು ಮೇಲೆ ಹಾರಿ ಕೆಳಕ್ಕೆ ಬಿದ್ದಿದ್ದಾನೆ. ತಕ್ಷಣ ಯುವಕನನ್ನ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಅಂತ ತಿಳಿದು ಬಂದಿದೆ.
Davanagere; ಗೋಮಾಳ ಅತಿಕ್ರಮಣ, ಸರ್ಕಾರಿ ಶಾಲೆಯೇ ನೆಲಸಮ!
ಘಟನೆ ಹಿನ್ನಲೆ:
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ನಿವಾಸಿ ಮಾರುತಿ (28) ಹರಪನಹಳ್ಳಿ ತಾಲೂಕಿನ ಶಾಮನೂರು ಒಡೆತನದ ದುಗ್ಗಾವತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ. ಈ ವೇಳೆ ಜು 3 ರಂದು ಜೆಸಿಬಿ-ಮತ್ತು ಅಗ್ನಿ ಶಾಮಕ ವಾಹನದ 3 ಟೈಯರ್ ಪಂಕ್ಚರ್ ಹಾಕಿಸಲು ಹರಿಹರ ತಾಲೂಕಿನ ಕುರುಬರಹಳ್ಳಿಗೆ ತಂದಿದ್ದ ಮಾರುತಿ. ಕುರಬರಹಳ್ಳಿ ಗ್ರಾಮದ ಸಂದೀಪ್ ಮತ್ತು ಪರಮೇಶ್ವರಪ್ಪ ಅವರ ಗ್ಯಾರೇಜ್‌ಗೆ ತಂದಿದ್ದರು. ಈ ವೇಳೆ ಜೆಸಿಬಿ ವಾಹನ ಪಂಕ್ಚರ್ ಹಾಕಿದ ಮ್ಯಾಕಾನಿಕ್ ಸಂದೀಪ್ ಮಾರುತಿಗೆ ಗಾಳಿ ತುಂಬಿಸಲು ಹೇಳಿದ್ದ. ಈ ವೇಳೆ ಟೈಯರ್ ಗೆ ಗಾಳಿ ಹೆಚ್ಚಾಗಿ ಸ್ಫೋಟಗೊಂಡು ನೆಲಕ್ಕೆ ಬಿದ್ದಿದ್ದ ಮಾರುತಿಗೆ ಕಾಲಿಗೆ, ಪಕ್ಕೆಲಬು, ಎದೆಗೆ ಪೆಟ್ಟಾಗಿ ನೆಲಕ್ಕೆ ಬಿದ್ದಿದ್ದು ಗಾಯಾಳುವನ್ನು ದಾವಣಗೆರೆ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಾರುತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ ಗ್ಯಾರೇಜ್ ಸಿಬ್ಬಂದಿ ಸಂದೀಪ್ ಮತ್ತು ಪರಮೇಶ್ವರಪ್ಪ ವಿರುದ್ಧ ಅವರ ಕುಟುಂಬದವರು ದೂರು ನೀಡಿದ್ದಾರೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.