
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಜು.05): ನಗರದಲ್ಲಿ ನಡೆದ ಮರಾಠಿ ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಡಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡ್ತಿದೆ.
ಹೌದು, ಬೆಳಗಾವಿಯ ಖ್ಯಾತ ಕಲಾವಿದ ರಾಜು ಪವಾರ್ ಇತ್ತೀಚೆಗೆ ನಗರದಲ್ಲಿ ಮರಾಠಿ ಕಾಮಿಡಿ ಶೋವೊಂದನ್ನು ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಡ್ಯಾನ್ಸ್ ಬಗ್ಗೆ ತಮ್ಮ ಮನದಾಳ ಮಾತು ಬಿಚ್ಚಿಟ್ಟಿದ್ದಾರೆ.
ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ: ಸತೀಶ ಜಾರಕಿಹೊಳಿ ಹೇಳಿದ್ದಿಷ್ಟು
25 ವರ್ಷಗಳ ಹಿಂದೆ ನಾನು ಖಾನಾಪುರದಲ್ಲಿ ವಾಸವಿದ್ದೆ. ಖಾನಾಪುರದಿಂದ ಬೆಳಗಾವಿಗೆ ನನ್ನ ಮಗನಿಗೆ ಡ್ಯಾನ್ಸ್ ಕ್ಲಾಸ್‌ಗೆ ರಾಜು ಪವಾರ್ ಬಳಿ ಕರೆದುಕೊಂಡು ಬರುತ್ತಿದೆ. 25 ವರ್ಷಗಳ ಹಿಂದೆ ನನಗೆ ಮೊದಲು ಡ್ಯಾನ್ಸ್ ಬಗ್ಗೆ ಬಹಳ ಹವ್ಯಾಸ ಇತ್ತು. ಆದ್ರೆ ಈಗ ಬೇರೆಯವರನ್ನು ಕುಣಿಸುತ್ತೇನೆ ನಾನು ಕುಣಿಯಲ್ಲ ಅಂತಾ ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಇನ್ನು ರಾಜು ಪವಾರ್ ತಮ್ಮ ಜೀವನಲದಲ್ಲಿ ಬಹಳ ಕಷ್ಟ ಪಟ್ಟಿದ್ದಾರೆ. ನಾವೆಂದಿಗೂ ಕಲಾವಿದ ರಾಜು ಪವಾರ್ ಜೊತೆಗೆ ಇರ್ತೇವೆ. ಬೆಳಗಾವಿ ತಾಲೂಕಿನ ರಾಜಹಂಸಗಡದಲ್ಲಿ ಕೆಲವೇ ದಿನಗಳಲ್ಲಿ ಬೃಹತ್ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಇದೆ. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಕಲಾವಿದ ರಾಜು ಪವಾರ್ ಅಲ್ಲಿಯೇ ಒಂದು ಕಾರ್ಯಕ್ರಮ ನಡೆಸಿ ಕೊಡಬೇಕು. ಈಗಲೇ ಬುಕ್ ಮಾಡ್ತಿದೀನಿ ಅಂತಾನೂ ತಿಳಿಸಿದ್ದಾರೆ.