* ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಧನ್ವಂತರಿ ರಸ್ತೆಯಲ್ಲಿ ನಡೆದ ಘಟನೆ
* ತಂದೆಯ ಹಿಂಬಾಲಿಸಿ ಬಂದು ಹಿಟಾಚಿ ಮೇಲೆ ಕೂತಿದ್ದ ಮಗು
* ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು
ಬೆಂಗಳೂರು(ಜ.02): ನಿದ್ರೆ ಮಂಪರಿನಲ್ಲಿ ಕುಳಿತಿದ್ದಾಗ ಹಿಟಾಚಿ(Hitachi) ವಾಹನ ಹರಿದು ಮೂರು ವರ್ಷದ ಮಗುವೊಂದು(Kid) ಸಾವನ್ನಪ್ಪಿರುವ(Death) ದಾರುಣ ಘಟನೆ ಮೆಜೆಸ್ಟಿಕ್ ಸಮೀಪದ ಧನ್ವಂತರಿ ರಸ್ತೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಶ್ರೀರಾಮಪುರದ ನಿವಾಸಿ ನೇತ್ರಾವತಿ ಹಾಗೂ ಡೇವಿಡ್ ಜಾನ್ ದಂಪತಿ ಪುತ್ರ ಸಿಮಿಯಾನ್ (3) ಮೃತ ದುರ್ದೈವಿ. ಈ ಘಟನೆ ಸಂಬಂಧ ಹಿಟಾಚಿ ಚಾಲಕ ಶಂಕರ್ ನಾಯಕ್‌ನನ್ನು ಪೊಲೀಸರು(Police) ವಶಕ್ಕೆ ಪಡೆದಿದ್ದಾರೆ. ಶನಿವಾರ ಮುಂಜಾನೆ 5.30ರ ಸುಮಾರಿಗೆ ಹಿಟಾಚಿ ವಾಹನ ಶೆಡ್‌ನಿಂದ ಹೊರ ತೆಗೆಯಲು ಬಂದಾಗ ಈ ಘಟನೆ ನಡೆದಿದೆ.
ಧ್ವನಂತರಿ ರಸ್ತೆಯಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ಡೇವಿಡ್ ಕುಟುಂಬ ನೆಲೆಸಿದೆ. ಆ ನಿರ್ಮಾಣ ಹಂತದ ಕಟ್ಟಡದ ಕಾವಲುಗಾರನಾಗಿ ಡೇವಿಡ್ ಕೆಲಸ ಮಾಡುತ್ತಿದ್ದರು. ಶನಿವಾರ ಮುಂಜಾನೆ 5.30ರ ಸುಮಾರಿಗೆ ಶೆಡ್‌ನಿಂದ ಡೇವಿಡ್ ಹೊರ ಬಂದಿದ್ದಾರೆ. ಆಗ ನಿದ್ರೆಯಿಂದ ಎಚ್ಚರಗೊಂಡು ತಂದೆ ಹಿಂಬಾಲಿಸಿ ಹೊರಬಂದ ಸಿಮಿಯಾನ್, ತನ್ನ ಗುಡಿಸಲ ಮುಂದೆ ನಿಂತಿದ್ದ ಹಿಟಾಚಿ ವಾಹನದ ಚಕ್ರ ಬಳಿ ಹೋಗಿ ಕುಳಿತಿದಿದ್ದಾನೆ. ಇತ್ತ ನಿರ್ಮಾಣ ಹಂತದ ಕಟ್ಟಡದಿಂದ ಅಳಿದುಳಿದ ವಸ್ತುಗಳನ್ನು ಬೇರೆಡೆಗೆ ಸಾಗಿಸಲು ಹೊರಟ ಹಿಟಾಚಿ ವಾಹನದ ಚಾಲಕ, ಹಿಂಬದಿ ಚಕ್ರದ ಬಳಿ ಮಗು ಕುಳಿತಿರುವುದನ್ನು ಗಮನಿಸದೆ ವಾಹನ ಚಾಲೂ ಮಾಡಿದ್ದರಿಂದ ಚಕ್ರ ಹರಿದು ಮಗು ಮೃತಪಟ್ಟಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
Bagalkot Road Accidents: ಎರಡು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ
ಟಿಪ್ಪರ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು
ಪೀಣ್ಯ ದಾಸರಹಳ್ಳಿ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ(Collision) ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಗುಂಟೆಯ ಸಿಡೇದಹಳ್ಳಿ ಬಳಿ ನಡೆದಿದೆ.
ದಾಸರಹಳ್ಳಿಯ ರಿಯಾಜ್ (55) ಮೃತ ಸವಾರ. ವಿಜಯ ನಗರದಿಂದ ರಾತ್ರಿ ಪಾಳಯದ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಅಪಘಾತ ಬಳಿಕ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಪೀಣ್ಯಾ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್-ಆಟೋ ಡಿಕ್ಕಿ: ಪ್ರಯಾಣಿಕರು ಪಾರು
ಮೂಲ್ಕಿ(Mulki): ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಪೆಟ್ರೋಲ್ ಬಂಕ್ ಬಳಿ ಶನಿವಾರ ಬೈಕ್ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ ನಡೆದಿದ್ದು, ಬೈಕ್ ಸವಾರ ಐಕಳ ನೆಲ್ಲಿಗುಡ್ಡೆ ನಿವಾಸಿ ಪ್ರೇಮ್ ಸಲ್ದಾನ ಪವಾಡಸದೃಶವಾಗಿ ಪಾರಾದ ಘಟನೆ ನಡೆದಿದೆ.
Bengaluru Road Accident : ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್
ಕಿನ್ನಿಗೋಳಿ ಪೆಟ್ರೋಲ್ ಬಂಕ್ ಬಳಿಯಿಂದ ಪೆಟ್ರೋಲ್ ತುಂಬಿಸಿ ರಾಜ್ಯ ಹೆದ್ದಾರಿ ಕಡೆ ತಿರುವು ಪಡೆಯುತ್ತಿದ್ದ ಬೈಕ್‌ಗೆ ಮೂರುಕಾವೇರಿಯಿಂದ ಕಿನ್ನಿಗೋಳಿ ಕಡೆ ಬರುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ(Accident) ಆಟೋ ಚಾಲಕ ಗುತ್ತಕಾಡು ನಿವಾಸಿ ಅಸೀಮ್ ಅವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳಾದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ರಸ್ತೆ ಬದಿಯ ಚರಂಡಿಯತ್ತ ಎಸೆಯಲ್ಪಟ್ಟಿತ್ತು. ಬೈಕ್ ಕೂಡ ಪಲ್ಟಿಯಾಗಿ ಬಿದ್ದಿತ್ತು. ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಅಪಘಾತದ ದೃಶ್ಯ ಪೆಟ್ರೊಲ್ ಬಂಕ್ ನ ಸಿಸಿ ಕ್ಯಾಮರಾದಲ್ಲಿ(CC Camera) ಸೆರೆಯಾಗಿದೆ.
11 ವಾಹನ ನಡುವೆ ಸರಣಿ ಅಪಘಾತ: ಇಬ್ಬರ ದುರ್ಮರಣ
ನೆಲಮಂಗಲ: ದಟ್ಟವಾದ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಸರಣಿ ಅಪಘಾತ(Serial Accident) ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ಸಮೀಪದ ರಾಷ್ಟ್ರೀಯ ಹೆದ್ದಾರಿಯ ಟಿ.ಬೇಗೂರು ಬಳಿ ಡಿ.3೦ ರಂದು ನಡೆದಿತ್ತು. ದಟ್ಟವಾದ ಮಂಜು ಕವಿದಿದ್ದ ವೇಳೆ ಲಾರಿಯೊಂದು ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಎರಡು ಬಸ್, ಎರಡು ಕಾರು, ಎರಡು ಲಾರಿ ಮತ್ತು ಒಂದು ಜೀಪ್ ಅಪಘಾತಕ್ಕೆ ಒಳಗಾಗಿವೆ. ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ಸಂಚಾರ ಅಸ್ತವ್ಯಸ್ತವಾಯಿತು(Traffic).