250 ಜನ ಬಿಜೆಪಿಗೆ ಸೇರ್ಪಡೆ : ಆರ್ಶೀವಾದ ಮಾಡುವ ಭರವಸೆ ಇದೆ ಎಂದ ಶಾಸಕ

By Kannadaprabha News  |  First Published Jan 23, 2023, 6:29 AM IST

ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ಮಾಡಿ ಜನಸಾಮಾನ್ಯರ ಕಷ್ಟಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಮಾಡಿದ್ದೇನೆ. ಜನಸಾಮಾನ್ಯರಲ್ಲಿ ನಾನು ಒಬ್ಬ ಎಂಬ ಭಾವನೆಯೊಂದಿಗೆ ಜನಸೇವೆ ಮಾಡಿದ್ದು, ಮುಂದಿನ ಚುನಾವಣೆಯಲ್ಲೂ ಜನತೆ ನನಗೆ ಆರ್ಶೀವಾದ ಮಾಡುವ ಭರವಸೆ ಇದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.


  ಶಿರಾ :  ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ಮಾಡಿ ಜನಸಾಮಾನ್ಯರ ಕಷ್ಟಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಮಾಡಿದ್ದೇನೆ. ಜನಸಾಮಾನ್ಯರಲ್ಲಿ ನಾನು ಒಬ್ಬ ಎಂಬ ಭಾವನೆಯೊಂದಿಗೆ ಜನಸೇವೆ ಮಾಡಿದ್ದು, ಮುಂದಿನಯಲ್ಲೂ ಜನತೆ ನನಗೆ ಆರ್ಶೀವಾದ ಮಾಡುವ ಭರವಸೆ ಇದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.

ತಾಲೂಕಿನ ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಗ್ರಾಮದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇತರೆ ಪಕ್ಷದ ನೂರಾರು ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಕ್ಷೇತ್ರದ ಜನತೆಗೆ ಕೊಟ್ಟಮಾತಿನಂತೆ ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸುವ ಮೂಲಕ ತಾಲೂಕಿನ ಕುಡಿಯುವ ನೀರಿನ ಬವಣೆಯನ್ನು ಶಾಶ್ವತವಾಗಿ ನೀಗಿಸಿದ್ದೇನೆ. ಭದ್ರ ಮೇಲ್ದಂಡೆ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ಶಿರಾ ತಾಲೂಕನ್ನು ಸಮೃದ್ಧಿ ಮಾಡಲು ಸಂಕಲ್ಪ ಹೊಂದಿದ್ದೇನೆ. ಇಂತಹ ಜನ ಸೇವೆಯನ್ನು ಮೆಚ್ಚಿ ಯುವ ಸಮೂಹ ನಮ್ಮೊಂದಿಗೆ ಕೈಜೋಡಿಸಿರುವುದು ಹರ್ಷದಾಯಕ. ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸುವಂತೆ ಮನವೊಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಶಿರಾ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಕಾರ್ಯಕ್ರಮದಲ್ಲಿ ಸುಮಾರು 250 ಜನರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮುಖಂಡರಾದ ಹಲಗುಂಡೇಗೌಡ, ಈರಣ್ಣ, ಗಿರಿಧರ್‌, ರಘು, ಕಿಟ್ಟಪ್ಪ, ಹನುಮಾತಾರಾಯಪ್ಪ, ಮಂಜುನಾಥ್‌ ಸೇರಿದಂತೆ ಹಲವರು ಹಾಜರಿದ್ದರು 

Tap to resize

Latest Videos

ಎಕಕಾಲಕ್ಕೆ ಬಿಜೆಪಿ ಮಹಾಭಿಯಾನ

ವಿಜಯಪುರ(ಜ.22): ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ತಾಲೀಮು ಆರಂಭಿಸಿರುವ ಆಡಳಿತಾರೂಢ ಬಿಜೆಪಿ, ಶನಿವಾರ ಮತ್ತೊಂದು ಬೃಹತ್‌ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿತು. ‘ವಿಜಯ ಸಂಕಲ್ಪ’ ಹೆಸರಿನ ಈ ಅಭಿಯಾನಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅದ್ಧೂರಿ ಚಾಲನೆ ನೀಡಿದರು. ಇದೇ ವೇಳೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ‘ವಿಜಯ ಸಂಕಲ್ಪ’ ಅಭಿಯಾನಕ್ಕೆ ಪಕ್ಷದ ಹಿರಿಯ ನಾಯಕರು, ಸಚಿವರು ಹಾಗೂ ಶಾಸಕರು ಚಾಲನೆ ನೀಡಿದರು. ರಾಜ್ಯದ 2 ಕೋಟಿ ಮತದಾರರ ಮನೆಗಳಿಗೆ ಭೇಟಿ ನೀಡುವುದು ಹಾಗೂ ಮಿಲ್ಡ್‌ ಕಾಲ್‌ ಮೂಲಕ ಸದಸ್ಯತ್ವ ಸ್ವೀಕಾರ ಮಾಡುವ ನಿಟ್ಟಿನಲ್ಲಿ ಶನಿವಾರ ಆರಂಭವಾಗಿರುವ ಈ ಅಭಿಯಾನ ಇದೇ ತಿಂಗಳ 29ರವರೆಗೆ ನಿರಂತರವಾಗಿ ನಡೆಯಲಿದೆ.

ವಿಜಯಪುರ ಹಾಗೂ ನಾಗಠಾಣಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೊಬೈಲ್‌ ಮೂಲಕ ಮಿಸ್ಡ್‌ ಕಾಲ್‌ ನೀಡಿ, ಅಭಿಯಾನದ ಅಂಗವಾಗಿ ನಡೆಯಲಿರುವ ಸದಸ್ಯತ್ವ ಅಭಿಯಾನಕ್ಕೆ ನಡ್ಡಾ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ, ಮನೆ ಮನೆಗೆ ತೆರಳಿ ಮನೆಗಳ ಕಾಂಪೌಂಡ್‌ ಗೋಡೆಗಳಿಗೆ ‘ಕಮಲ’ ಚಿಹ್ನೆಯ ಭಿತ್ತಿಚಿತ್ರ ಅಂಟಿಸಿ, ಪಕ್ಷದ ಕರ ಪತ್ರಗಳನ್ನು ಹಂಚಿದರು. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಕೂಡ ಈ ವೇಳೆ ಉಪಸ್ಥಿತರಿದ್ದು, ಪಕ್ಷದ ಪರ ಪ್ರಚಾರದಲ್ಲಿ ಪಾಲ್ಗೊಂಡರು.

ಬಿಜೆಪಿಯಿಂದ ಯುವಕರ ದಾರಿ ತಪ್ಪಿಸುವ ಕೆಲಸ: ಎಚ್‌.ಡಿ. ಕುಮಾರಸ್ವಾಮಿ

ತುಮಕೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬೆಂಗಳೂರಿನಲ್ಲಿ ನಳಿನ್‌ ಕುಮಾರ್‌ ಕಟೀಲ್‌, ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಪರಿಷತ್‌ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನವರಿ ತಿಂಗಳಲ್ಲಿಯೇ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಜ.12ರಂದು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ, ಜ.19ರಂದು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಅವರು ಚಾಲನೆ ನೀಡಿದ್ದರು. ಇದಕ್ಕೂ ಮೊದಲು, 2022ರ ನವೆಂಬರ್‌ ತಿಂಗಳಲ್ಲಿ ಬಿಜೆಪಿಯಿಂದ ‘ಜನ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿತ್ತು. ಈಗ ‘ವಿಜಯ ಸಂಕಲ್ಪ’ ಯಾತ್ರೆ ಮೂಲಕ ಮತ್ತೊಂದು ಬೃಹತ್‌ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ.

click me!