ಸಿದ್ದರಾಮೋತ್ಸವಕ್ಕೆ ಬಾದಾಮಿಯಿಂದ 25 ಸಾವಿರ ಜನ, 600 ವಾಹನಗಳು ಬುಕ್

By Suvarna News  |  First Published Aug 1, 2022, 6:44 PM IST

ಸಿದ್ದರಾಮಯ್ಯನವರ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭಕ್ಕೆ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿ ತಾಲೂಕಿನಿಂದ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ .
 


ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ, (ಆ.01):
ದಾವಣಗೆರೆಯಲ್ಲಿ ಇದೇ ಆಗಸ್ಟ್ 3 ರಂದು  ನಡೆಯಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಜನ್ಮದಿನದ ಅಮೃತಮಹೋತ್ಸವಕ್ಕೆ ಸಾಕಷ್ಟು ಜನ ಹರಿದುಬರುವ ನಿರೀಕ್ಷೆ ಇದೆ.

ಇನ್ನು ಸ್ವಕ್ಷೇತ್ರ ಬಾದಾಮಿಯಿಂದ  25 ಸಾವಿರ ಜನರು ಸಿದ್ದರಾಮೋತ್ಸವ ಕಾರ್ಯಕ್ರದಮದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ  600 ವಾಹನಗಳನ್ನ ಬುಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಹೊಳಬಸು ಶೆಟ್ಟರ ಮಾಹಿತಿ ನೀಡಿದ್ದಾರೆ.

Latest Videos

undefined

ಬಾದಾಮಿ ಕಾಂಗ್ರೆಸ್  ಕಛೇರಿಯಲ್ಲಿ ಮಾತನಾಡಿದ ಅವರು, ಬಾದಾಮಿಯಿಂದ ಒಟ್ಟು 600 ಕ್ಕೂ ಹೆಚ್ಚಿನ ವಾಹನಗಳಲ್ಲಿ ಜನತೆ ತೆರಳಲಿದ್ದು, ಅವರಿಗೆ ಮಾರ್ಗ ಮಧ್ಯದಲ್ಲಿ ಉಪಹಾರದ ವ್ಯವಸ್ಥೆಯನ್ನು ಕೂಡಾ ಅಲ್ಲಿನ ಅಭಿಮಾನಿಗಳು ಮಾಡಿದ್ದಾರೆ ಎಂದು ಹೇಳಿದರು

ಸಿದ್ದರಾಮೋತ್ಸವ: ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ, ಇಲ್ಲಿದೆ ಊಟದ ಮೆನು

ಸಿದ್ದರಾಮಯ್ಯ ಸಾಹೇಬ್ರು ಸಿಎಂ ಆಗಿದ್ದಾಗ ಮಾಡಿದ ಅಭಿವೃದ್ದಿ ಮತ್ತು ಜನಪರ ಕಾರ್ಯಗಳು ಜನ ಮಾನಸದಲ್ಲಿ ಉಳಿದಿವೆ. ಹೀಗಾಗಿ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಭಂಧ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಬಾದಾಮಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಐತಿಹಾಸಿಕ, ಧಾರ್ಮಿಕ ತಾಣಗಳು, ವಿವಿಧ ಸಮುದಾಯಗಳ ಸೇರಿದಂತೆ ಅಭಿವೃದ್ದಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅನುಷ್ಟಾನಗೊಳಿಸುವ  ಮೂಲಕ  ಬಾದಾಮಿ ಕ್ಷೇತ್ರದ ಜನರಿಗೆ ಭಾಗ್ಯವಿಧಾತರಾಗಿದ್ದಾರೆ ಎಂದು  ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತಗೌಡ ಯಕ್ಕಪ್ಪನವರ ಮಾತನಾಡಿ, ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕಾಗಿರುವ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬಕ್ಕೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. 

ಮುಚಖಂಡಯ್ಯ ಹಂಗರಗಿ, ಡಾ.ಎಂ.ಎಚ್. ಚಲವಾದಿ,  ಪಿ.ಆರ್. ಗೌಡರ, ರಾಜಮ್ಮದ ಬಾಗವಾನ, ಮಹೇಶ ಹೊಸಗೌಡರ, ಮಲ್ಲಣ್ಣ ಯಲಿಗಾರ ಮಾತನಾಡಿ ಸಿದ್ದರಾಮಯ್ಯನವರು ಹುಟ್ಟು ಹಬ್ಬವನ್ನು ಎಂದಿಗೂ ಆಚರಿಸಿ ಕೊಂಡವರಲ್ಲ. ಆದರೆ ಇವರ ಜನ್ಮೋತ್ಸವ ಮತ್ತು ನಮ್ಮ ಕಾಂಗ್ರೆಸ್ ಪಕ್ಷವು ಕೂಡಾ 75 ವಸಂತಗಳನ್ನು ಪೂರೈಸಿದ್ದರ ಹಿನ್ನೆಲೆಯಲ್ಲಿ ಈ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ರಾಜ್ಯ ಹೊರ ರಾಜ್ಯಗಳಲ್ಲಿಂದ ಸಿದ್ದರಾಮಯ್ಯ ಅವರ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ಕಾಂಗ್ರೆಸ್  ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ದಿಗೆ ದಿಕ್ಸೂಚಿ ಆಗಲಿದೆ ಹೇಳಿದರು.

click me!