ಮಾಗಡಿ ಪತ್ರಕರ್ತರ ಸಂಘದಿಂದ ಅಜಿತ್ ಹನುಮಕ್ಕನವರ್‌ಗೆ ಕೆಂಪೇಗೌಡ ಮಾಧ್ಯಮ ಪ್ರಶಸ್ತಿ ಪ್ರಧಾನ

By Suvarna News  |  First Published Aug 1, 2022, 6:14 PM IST

ಮಾಗಡಿ ಕಾರ್ಯನಿರತ ಪತ್ರಕರ್ತರ ಸಂಘ  ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಅವರಿಗೆ ಕೆಂಪೇಗೌಡ ಮಾಧ್ಯಮ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.


ರಾಮನಗರ, (ಆಗಸ್ಟ್. 01): ಮಾಗಡಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು(ಸೋಮವಾರ) ತಾಲೂಕು ಪತ್ರಿಕಾ ದಿನಾಚರಣೆ ಹಾಗೂ ನಾಡಪ್ರಭು ಕೆಂಪೇಗೌಡ ಮಾಧ್ಯಮ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು. 

ಮಾಗಡಿಯ ಕಲ್ಯಾಗೇಟ್ ಬಳಿ‌ ಇರುವ ಸಿದ್ದಾರೂಢ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಅವರಿಗೆ ಕೆಂಪೇಗೌಡ ಮಾಧ್ಯಮ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯ್ತು. 

Tap to resize

Latest Videos

ಇದೇ ಮೊದಲ ಬಾರಿಗೆ ಮಾಗಡಿ ತಾಲ್ಲೂಕು ಪತ್ರಕರ್ತರಿಂದ ಆಯೋಜಿಸಿದ ಕೆಂಪೇಗೌಡ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಿ ಬಳಿಕ ಮಾತನಾಡಿದ ಅಜಿತ್ ಹನುಮಕ್ಕನವರ್, ನಾವು ಆಡುವ ಪ್ರತಿ ಮಾತುಗಳು ಹಾಗೂ ಬರೆಯುವ ಪ್ರತಿ ಬರಹವು ನಮ್ಮನ್ನು ಮತ್ತಷ್ಟು ಎಚ್ಚರಿಸುವಂತೆ ಪ್ರೇರೇಪಿಸುತ್ತವೆ. ಇಂತಹ ಸನ್ಮಾನಗಳು ನಮ್ಮ ಮೇಲಿನ ಜವಾಬ್ದಾರಿಯನ್ನ ಹೆಚ್ಚಿಸುತ್ತವೆ. ಎಂದರು.

ಏಷ್ಯಾನೆಟ್ ಸುವರ್ಣನ್ಯೂಸ್‌ನ ವರದಿಗಾರ ಹಾಗೂ ಕ್ಯಾಮೆರಾಮನ್‌ಗೆ ರಾಯಚೂರು ಗಿಲ್ಡ್ ಪ್ರಶಸ್ತಿ

 ಪತ್ರಕರ್ತರ ಕೆಲಸ ಜನಸಾಮಾನ್ಯರ ಮಧ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ವಿಧಾನಸೌಧಕ್ಕೆ ತಲುಪಿಸುವ ಕೆಲಸವಾಗಿರಬೇಕು, ಆದರೆ ಪರಿಸ್ಥಿತಿ ಬದಲಾಗಿ ವಿಧಾನಸೌಧದಲ್ಲಿ ಏನಾಗುತ್ತಿದೆ ಎಂಬುದನ್ನು ಜನಸಾಮಾನ್ಯರಿಗೆ ತಲುಪಿಸುವ ಹಾಗೆ ಆಗಿದೆ. ಪತ್ರಕರ್ತರು ಹಾಗೂ ರಾಜಕಾರಣಿಗಳ ನಡುವೆ ಪರಿಚಯ ಇರಬೇಕಾ ಅಥವಾ ಸ್ನೇಹ ಇರಬೇಕಾ ಸ್ನೇಹ ಆದ್ರೆ ಅದಕ್ಕೊಂದು ಗೆರೆ ಹಾಕಿಕೊಳ್ಳಬೇಕು. ರಾಜಕಾರಣಿಗಳನ್ನು ಟೀಕಿಸುವಾಗ ಆ ಪರಿಚಯ ಅಡ್ಡ ಬರಬಾರದು ಎಂದು ಹೇಳಿದರು.

ರಾಜಕಾರಣಿಗಳು ಸಮಾಜಕ್ಕೆ ಕೊಡಬೇಕಾದದ್ದನ್ನು ಕೊಡದೆ ಇದ್ದಾಗ ಹಿಂದೆ ಮುಂದೆ ನೋಡದೆ ಟೀಕಿಸುತ್ತೇನೆ ಎಂಬ ಕಾನ್ಫಿಡೆನ್ಸ್ ನಲ್ಲಿ ಒಬ್ಬ ಪತ್ರಕರ್ತ ಇರಬೇಕು ಎಂದು ಹೇಳುವ ಮೂಲಕ ಪತ್ರಕರ್ತರ ಜವಾಬ್ದಾರಿ ಏನೆಂಬುದನ್ನು ತಿಳಿಸಿದರು.

ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಹಾಗೂ ಮಾಗಡಿ ಶಾಸಕ ಎ ಮಂಜುನಾಥ್,  ನೆಲಮಂಗಲ ಶಾಸಕ ಶ್ರೀನಿವಾಸ್ ಮೂರ್ತಿ ಮತ್ತಿತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು, 

click me!