25 ಲಕ್ಷ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ, ಓರ್ವ ಪರಾರಿ

Published : Mar 13, 2020, 10:39 AM IST
25 ಲಕ್ಷ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ, ಓರ್ವ ಪರಾರಿ

ಸಾರಾಂಶ

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧನ| ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದ ಘಟನೆ| ವೇಳೆ 107 ಕೆಜಿ ಒಣಗಿದ ಗಾಂಜಾ, 13 ಗಾಂಜಾ ಹಸಿ ಗಿಡ ಜಪ್ತಿ|

ವಿಜಯಪುರ(ಮಾ.13): ಜಿಲ್ಲೆಯ ಸಿಂದಗಿ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸಿದ ಘಟನೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಇಂದು(ಶುಕ್ರವಾರ) ನಡೆದಿದೆ. ಈ ವೇಳೆ 25 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. 

ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರಲ್ಲಿ ಇಬ್ಬರನ್ನ ಬಂಧಿಸಲಾಗಿದೆ.  ಈ ವೇಳೆ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ದತ್ತಾತ್ರೇಯ ಯಾತನೂರ್ ಹಾಗೂ ಹಣಮಂತರಾಯ್ ಬಂಧಿತ ಆರೋಪಿಗಳಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದತ್ತಾತ್ರೇಯ ಯಾತನೂರ್ ಹಾಗೂ ರಾಜೇಂದ್ರ ವಾಲಿಕಾರ್ ತೋಟದ ಮನೆ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 107 ಕೆಜಿ ಒಣಗಿದ ಗಾಂಜಾ, 13 ಗಾಂಜಾ ಹಸಿ ಗಿಡಗಳನ್ನ ಜಪ್ತಿ ಮಾಡಲಾಗಿದೆ. 

ರಾಜೇಂದ್ರ ವಾಲಿಕಾರ್ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಬಕಾರಿ ಪೊಲೀಸ್ ಎ.ಎ. ಮುಜಾವರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಸಿಂದಗಿ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು