ಮಾರಮ್ಮ ದೇಗುಲದಲ್ಲಿ 25 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ : ಆತಂಕ

Kannadaprabha News   | Asianet News
Published : Mar 31, 2021, 01:01 PM ISTUpdated : Mar 31, 2021, 02:32 PM IST
ಮಾರಮ್ಮ ದೇಗುಲದಲ್ಲಿ 25 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ :  ಆತಂಕ

ಸಾರಾಂಶ

ಬರೋಬ್ಬರು 25 ಅಡಿ ಉದ್ದದ ನಾಗರ ಹಾವು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಈ ಘಟನೆ ನಡೆದಿದೆ. 

ಮದ್ದೂರು (ಮಾ.31): ತಾಲೂಕಿನ ಅಣ್ಣೆದೊಡ್ಡಿ ಮಾರಮ್ಮ ದೇವಸ್ಥಾನದ ಬಳಿ 20 ರಿಂದ 25 ಅಡಿ ಉದ್ದದ ನಾಗರ ಹಾವೊಂದು  ಕಾಣಿಸಿಕೊಂಡಿತ್ತು. 

ಮಂಗಳವಾರ ಮದ್ದೂರಿನ ಮಾರಮ್ಮ ದೇಗುಲದ ಬಳಿ ಈ ಹಾವು ಕಂಡ ಜನರಲ್ಲಿ ಅಚ್ಚರಿಯೊಂದಿಗೆ ಆತಂಕವೂ ಮೂಡಿದೆ. ಈ ಹಾವನ್ನು ನೋಡಲು ಗ್ರಾಮದ ಜನರು ಗುಂಪಾಗಿ ಆಗಮಿಸಿದರು. 

ಅಫಜಲ್ಪುರ: ಗಂಗಲಿಂಗ ಮಹಾರಾಜರ ಗದ್ದುಗೆ ಮೇಲೆ ಸರ್ಪ ಪ್ರತ್ಯಕ್ಷ..! ...

ಕಳೆದ ಮೂರು ನಾಲ್ಕು ವರ್ಷಗಳಿಂದ ಮಾರಮ್ಮ ದೇವರ ಹಬ್ಬ ಆಚರಣೆ ಮಾಡದೇ ಇರುವುದರುಂದ ಹಾವು ಕಾಣಿಸಿಕೊಂಡಿದೆ. ತಂಬಿಟ್ಟಿನ ಆರತಿಯೊಂದಿಗೆ ದೇವರಿಗೆ  ವಿಶೇಷ ಪೂಜೆ  ಮಾಡುವುದು ಸಂಪ್ರದಾಯ ಎಂದು ಇಲ್ಲಿನ ಜನರು ಹೇಳಿದರು. 

ಹಬ್ಬ ಆಚರಣೆ ಬಗ್ಗೆ ನಿರ್ಧರಿಸುವ ಸಂಬಂಧ ಮಾ.31 ರಂದು ಕೀಳಘಟ್ಟ ಗ್ರಾಮದಲ್ಲಿ ಸಭೆ ಕರೆಯಲಾಗಿದೆ ಎಂದು ಇಲ್ಲಿನ ಮುಖಂಡರು ತಿಳಿಸಿದರು. 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು