
ಲಿಂಗಸುಗೂರು(ಸೆ.16): 2,394 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಂಡ, ಜಿಲ್ಲೆಯ 3 ತಾಲೂಕುಗಳ 84 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಾರಾಯಣಪುರ ಬಲದಂಡೆ ಮುಖ್ಯನಾಲೆ 35ನೇ ಕಿ.ಮೀನಲ್ಲಿ ಹಾಗೂ ವಿತರಣಾ ನಾಲೆ ಸಂಖ್ಯೆ 7(ಎ)ಯಲ್ಲಿ ಮಳೆ ನೀರು ನುಗ್ಗಿ ಮುಖ್ಯನಾಲೆಗೆ ನೀರು ಹರಿಯುವಿಕೆ ಪ್ರಮಾಣ ಇಳಿಮುಖಗೊಂಡಿದ್ದು, ರೈತರ ತೊಂದರೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ 84 ಸಾವಿರ ಹೆಕ್ಟೇರ್ ಪ್ರದೇಶದ ಅಚ್ಚುಕಟ್ಟು ಪ್ರದೇಶಕ್ಕೆ ನೀರೋದಗಿಸುವ ನಾರಾಯಣಪುರ ಬಲದಂಡೆ ನಾಲೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮುಖ್ಯನಾಲೆಯನ್ನು 950 ಕೋಟಿ ರು. ವೆಚ್ಚದಲ್ಲಿ, ವಿತರಣಾ ನಾಲೆ, ಉಪ ವಿತರಣಾ ನಾಲೆ, ಹೊಲಗಾಲೂವೆ, ನೆಲಗಾಲುವೆಗಳನ್ನು 1,444 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗಿದೆ. ಇನ್ನೂ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿ ಇದೆ. ಆದರೆ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಕೃಷ್ಣಾ ಭಾಗ್ಯ ಜಲದ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಲೆಗಳು ಒಡೆದು ಹೋಗಿವೆ.
ಬೈಕ್ ಕಳ್ಳರ ಜಾಲ ಭೇದಿಸಿದ ರಾಯಚೂರು ಪೊಲೀಸ್ರು, ಖದೀಮರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್
35ನೇ ಕಿ.ಮೀ ಮುಖ್ಯನಾಲೆ ಆಧುನೀಕರಣ ಮಾಡಿದ ಸ್ಥಳದಲ್ಲಿ ಮಳೆಯ ನೀರು ಮುಖ್ಯನಾಲೆಯ ಬದಿಗೆ ಸಿಮೆಂಟ್ ಕಾಂಕ್ರಿಟ್‌ನಿಂದ ಹಾಕಿದ ನೆಲಹಾಸು 10 ಮೀಟರ್‌ಗೂ ಅಧಿಕ ಉದ್ದದಲ್ಲಿ ಬಿರುಕು ಬಿಟ್ಟಿದೆ. ಅಲ್ಲದೇ ಕೆಲವಡೆ ಕೊಚ್ಚಿಕೊಂಡು ಹೋಗಿದ್ದು, ವಿತರಣಾ ನಾಲೆ ಸಂಖ್ಯೆ 7(ಎ) ಕೂಡಾ ನೀರು ಪಾಲಾಗಿದೆ. ಎರಡು ಕಡೆಯಲ್ಲಿ ಆಧುನೀಕರಣ ಮಾಡಿದ ಭಾಗವೇ ಕೊಚ್ಚಿ ಹೋಗಿದ್ದು ಕಾಮಗಾರಿ ಗುಣಮಟ್ಟ ಓರೆಗಲ್ಲಿಗೆ ಹಚ್ಚುವಂತಾಗಿದೆ.
ಮುಖ್ಯನಾಲೆ ಒಡೆದಿದ್ದರಿಂದ 1000 ಕ್ಯುಸೆಕ್ ನೀರು ಮಾತ್ರ ಹರಿಸಲಾಗುತ್ತದೆ. ಇದರಿಂದ ಮೇಲ್ಮಟ್ಟದಲ್ಲಿರುವ 8(ಎ), 8(ಬಿ) ಸೇರಿದಂತೆ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಪರಿಣಾಮ ವಿತರಣಾ ನಾಲೆ ಅಚ್ಚುಕಟ್ಟು ರೈತರ ಭತ್ತ ನಾಟಿ, ನೀರು ಹಾಯಿಸಲು ಮಳೆಗಾಲದಲ್ಲೂ ತೊಂದರೆ ಅನುಭವಿಸುವಂತಾಗಿದೆ.
ರಾಹುಲ್ ಗಾಂಧಿ 'Bharat Jodo Yatra' ಬ್ಯಾನರ್ ನಲ್ಲಿ ಸಿದ್ದರಾಮಯ್ಯ ನಾಪತ್ತೆ!
ನಾಲೆ ಒಡೆದು ರೈತರ ಜಮೀನುಗಳಿಗೆ ಸಮರ್ಪಕ ನೀರು ಬರುತ್ತಿಲ್ಲ. ಭತ್ತದ ನಾಟಿ ಮಾಡಲು ನೀರು ಸಾಕಾಗುತ್ತಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಹೋದರೂ ದುರಸ್ಥಿಗೆ ಮುಂದಾಗಿಲ್ಲ. ಪರಿಣಾಮ ರೈತರ ಭತ್ತ ಸೇರಿದಂತೆ ಬೆಳೆಗಳಿಗೆ ನೀರು ಹರಿಯುತ್ತಿಲ್ಲ ಅಂತ ಗುರುಗುಂಟಾ ರೈತ ಹನುಮಂತ ದಿವಾಣದವರದೊಡ್ಡಿ ತಿಳಿಸಿದ್ದಾರೆ.
ವಿಪರೀತ ಮಳೆಯಿಂದ ಜಮೀನುಗಳ ನೀರೆಲ್ಲಾ ನಾಲೆಗೆ ನುಗ್ಗಿವೆ. ಇದರಿಂದ ಮುಖ್ಯನಾಲೆಯ ನೆಲಹಾಸು ಬಿರುಕು ಬಿಟ್ಟಿದೆ. ಎಂಬ್ಯಾಕ್‌ಮೆಂಟ್‌ನಲ್ಲಿ ಇರುವುದರಿಂದ ನಾಲೆಯಲ್ಲಿ ನೀರು ಹರಿಸುವಿಕೆಗೆ ತೊಂದರೆಯಾಗುವುದಿಲ್ಲ. ನೀರು ಇಲ್ಲದಾಗ ಬಿರುಕು ಬಿಟ್ಟಪ್ರದೇಶ ಹಾಗೂ ಬೋಂಗಾ ಬಿದ್ದ ಸ್ಥಳಗಳನ್ನು ದುರಸ್ತಿ ಮಾಡಲಾಗುವುದು ಅಂತ ನಾರಾಯಣಪುರ ಕೃಷ್ಣಾ ಭಾಗ್ಯ ಜಲ ನಿಗಮ ಶಂಕರ, ಎಎ ತಿಳಿಸಿದ್ದಾರೆ.