ಕರ್ನಾಟಕದಲ್ಲಿ ಕೊರೋನಾ ಅಬ್ಬರ/ ಒಂದೇ ದಿನ 23,558 ಹೊಸ ಪ್ರಕರಣ/ ಬೆಂಗಳೂರಿನಲ್ಲಿ 13,640 ಕೇಸ್/ ದೇಶದಲ್ಲಿ ಆಕ್ಟೀವ್ ಕೇಸ್ ಪಟ್ಟಿಯಲ್ಲಿ ಮೂರನೇ ಸ್ಥಾನ
ಬೆಂಗಳೂರು (ಏ. 21) ಕೊರೋನಾ ಕರ್ನಾಟಕದಲ್ಲಿ ತನ್ನ ಹಳೆಯ ದಾಖಲೆಗಳನ್ನು ಮುರಿದು ಮುಂದಕ್ಕೆ ಹೋಗಿದೆ. ಬುಧವಾರ ದಾಖಲೆಯ 23,558 ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 12,22,202ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 13,646ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಹೊಸ ಮಾಗರ್ಸೂಚಿ ಜಾರಿಯಾಗುತ್ತಿದ್ದು ಯಾವ ಪರಿಣಾಮ ಬೀರಲಿದೆ ಎನ್ನುವುದು ಮುಖ್ಯ ವಿಚಾರ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 13,640 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 5,83,675ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 70 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು 6,312 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10,32,233ಕ್ಕೆ ಏರಿಕೆಯಾಗಿದೆ. 1,76,188 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 904 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿಯವರೆಗೆ ಬೆಂಗಳೂರು ಖಾಸಗಿ ವೈದ್ಯಕೀಯ ಕಾಲೇಜುಗಳು ನಾಲ್ಕು ಸಾವಿರ ಬೆಡ್ ನೀಡಿವೆ. ಸರ್ಕಾರಿ ಮೆಡಿಕಲ್ ಕಾಲೇಜ್ ಗಳಲ್ಲಿ ಸಾವಿರ ಬೆಡ್ ಸಿಕ್ಕಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 1400 ಬೆಡ್ ಇವೆ. ಒಟ್ಟಾರೆ ಒಟ್ಟಾರೆ 7400 ಬೆಡ್ ಗಳು ಸದ್ಯಕ್ಕೆ ನಮ್ಮ ಬಳಿ ಇವೆ.
ರಾಜ್ಯದಲ್ಲಿ ಫ್ರೀ ವ್ಯಾಕ್ಸಿನೇಷನ್ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಬೇಕು. ಎರಡು ದಿನದಲ್ಲಿ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಇಂದಿನ 21/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/TrKPapdAsx pic.twitter.com/4DzBQRxUXg
— K'taka Health Dept (@DHFWKA)