* ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ
* 24 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಿರ್ಮಲಾ
* ಹೆರಿಗೆಯ ಸಂತೋಷವನ್ನ ಅನುಭವಿಸಿದ್ದ ನಿರ್ಮಲಾ ಬಲಿ ಪಡೆದ ಕೊರೋನಾ
ಕೊಪ್ಪಳ(ಜೂ.05): ಕೊರೋನಾ ಸೋಂಕಿಗೆ 22 ವರ್ಷದ ಯೊಬ್ಬರು ಸಾವನ್ನಪ್ಪಿದ ಘಟನೆ ನಿನ್ನೆ(ಶುಕ್ರವಾರ) ಸಂಜೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಗುಳದಳ್ಳಿ ನಿವಾಸಿ ನಿರ್ಮಲಾ ಎಂಬುವರೇ ಕೋವಿಡ್‌ಗೆ ಬಲಿಯಾದ ದುರ್ದೈವಿಯಾಗಿದ್ದಾರೆ.
ನಿರ್ಮಲಾಗೆ 24 ದಿನಗಳ ಹಿಂದೆ ಹೆರಿಗೆಯಾಗಿತ್ತು. ಹೆರಿಗೆಯಾದ ಬಳಿಕ ನಿರ್ಮಲಾಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ 24 ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಲಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತೀವ್ರ ಉಸಿರಾಟ ಸಮಸ್ಯೆಯಿಂದ ನಿನ್ನೆ ಸಂಜೆ ನಿರ್ಮಲಾ ಕೊನೆಯುಸಿರೆಳಿದಿದ್ದಾರೆ.
ಕೊಪ್ಪಳ: ಗವಿಮಠ ಕೋವಿಡ್ ಆಸ್ಪತ್ರೆಗೆ ಎನ್‌ಆರ್‌ಐ ನೆರವು
ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಿರ್ಮಲಾಗೆ ಕೊರೋನಾ ಸೋಂಕು ಧೃಡಪಟ್ಟ ಕಾರಣ ತಾಯಿಯನ್ನ ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಮೊದಲ ಹೆರಿಗೆಯ ಸಂತೋಷವನ್ನ ಅನುಭವಿಸಿದ್ದ ನಿರ್ಮಲಾ ಅವರನ್ನ ಕೊರೋನಾ ಬಲಿ ತೆಗೆದುಕೊಂಡಿದೆ.