ಬೆಂಗಳೂರು ಲಾಕ್ ಆಗುತ್ತಾ ಎಂಬ ಆತಂಕದಲ್ಲಿ ಮಧ್ಯಪ್ರಿಯರು/ ಮದ್ಯದಂಗಡಿ ಮುಂದೆ ಜನವೋ ಜನ/ ಕೈಚೀಲ ತುಂಬಿಕೊಂಡು ಹೋಗುತ್ತಿರುವ ಮದ್ಯಪ್ರಿಯರು/ ನಿನ್ನೆಗಿಂತ ಇವತ್ತು ಬಾರ್ ಮುಂದೆ ಹೆಚ್ಚು ಜನ
ಬೆಂಗಳೂರು(ಏ. 20) ಬೆಂಗಳೂರು ಲಾಕ್ ಆಗುತ್ತಾ ಎಂಬ ಆತಂಕದಲ್ಲಿರುವ ಮದದ್ಯಪ್ರಿಯರು ಅಂಗಡಿ ಕಡೆ ನುಗ್ಗಿದ್ದಾರೆ. ಮಧ್ಯದಂಗಡಿ ಮುಂದೆ ಜನವೋ ಜನ.. ಜನ ಜಾತ್ರೆಯೇ ನಡೆದಿದೆ.
ಕೈಚೀಲ ತಂದು ತಮಗೆ ಬೇಕಾದ ಬ್ರ್ಯಾಂಡ್ ಗಳನ್ನು ತೆಗೆದುಕೊಂಡು ಹೊರಟಿದ್ದಾರೆ. ನಿನ್ನೆಗಿಂತ ಇವತ್ತು ಮಧ್ಯದಂಗಡಿ ಮುಂದೆ ಹೆಚ್ಚು ಜನ ಕಂಡುಬಂದಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಆದ ಚರ್ಚೆಗಳೇನು? ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಲಾಕ್ ಡೌನ್ ಆದ್ರೆ ಬಾರ್ ಬಂದ್ ಅಗುತ್ತವೆ ಎಂಬ ಭಯದಲ್ಲಿ ಇರುವ ಮದ್ಯಪ್ರಿಯರು ಸ್ಟಾಕ್ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಕಳೆದ ಸಾರಿ ಲಾಕ್ ಡೌನ್ ಮಾಡಿದ್ದ ಸಂದರ್ಭ ತಿಂಗಳು ಕಾಲ ಮದ್ಯದಂಗಡಿ ಬಂದ್ ಆಗಿದ್ದವು.
ಅನೇಕರು ಮದ್ಯ ಸಿಗದೆ ಪರದಾಡಿದ್ದರು. ಆತ್ಮಹತ್ಯೆಗೂ ಶರಣಾಗಿದ್ದ ಅನೇಕ ಉದಾಹರಣೆಗಳು ಸಿಕ್ಕಿದ್ದವು. ಸರ್ಕಾರ ಸಹ ಆರ್ಥಿಕ ಮುಗ್ಗಟ್ಟು ಎದುರಿಸಿ ಅಂತಿಮವಾಗಿ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು.