* ಆಶ್ರಮದಲ್ಲಿರುವ 270 ಮಂದಿಯಲ್ಲಿ 210 ಮಂದಿಗೆ ಸೋಂಕು
* ಸೋಂಕಿತರನ್ನು ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ಕ್ವಾರಂಟೈನ್ ಕೇಂದ್ರದಲ್ಲಿ ದಾಖಲು
* ಇಬ್ಬರನ್ನು ಮಂಗಳೂರಿನ ಕೋವಿಡ್ ಕೇಂದ್ರಕ್ಕೆ ರವಾನೆ
ಬೆಳ್ತಂಗಡಿ(ಮೇ.31): ಮಾನಸಿಕ ರೋಗಿಗಳ, ನಿರ್ಗತಿಕರ ಪೋಷಣೆ ಮತ್ತು ಚಿಕಿತ್ಸಾ ಕೇಂದ್ರವೊಂದರ 210ಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗಲಿರುವ ಆತಂಕಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ವರದಿಯಾಗಿದೆ.
ಇಲ್ಲಿನ ನೆರಿಯದ ಗಂಡಿಬಾಗಿಲಿನಲ್ಲಿರುವ ಸಿಯೋನ್ ದಲ್ಲಿ ವಾಸವಿರುವ 270 ಮಂದಿಯಲ್ಲಿ 210 ಮಂದಿಗೆ ಸೋಂಕು ಕಂಡುಬಂದಿದ್ದು, 194 ಸಕ್ರಿಯ ಪ್ರಕರಣಗಳಿವೆ. 74 ಪುರುಷ ಹಾಗೂ 61 ಮಹಿಳಾ ಸೋಂಕಿತರನ್ನು ಸೋಂಕಿತರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಿಸಲಾಗಿದೆ.
undefined
ಕೊರೋನಾ ಗೆದ್ದ 13 ಮಂದಿಯ ಬಂಗಾಡಿ ಕುಟುಂಬ
ಇಬ್ಬರನ್ನು ಮಂಗಳೂರಿನ ಕೋವಿಡ್ ಕೇಂದ್ರಕ್ಕೆ ರವಾನಿಸಲಾಗಿದೆ. ಓರ್ವ ಮೃತಪಟ್ಟಿದ್ದು, 59 ಮಂದಿ ಮಾನಸಿಕ ಅಸ್ವಸ್ಥರನ್ನು ಹೋಂ ಐಸೋಲೇಶನ್ ಪೂರೈಸಿದ ಹಾಗೂ ನೆಗೆಟಿವ್ ವರದಿ ಬಂದಿರುವ ಉಳಿದ ಮಂದಿಯನ್ನು ಆಶ್ರಮದಲ್ಲಿ ಇರಿಸಿಕೊಳ್ಳಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona