ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಅಬ್ಬರಕ್ಕೆ ಮೊದಲ ಬಲಿ..!

By Girish Goudar  |  First Published Jul 10, 2022, 11:30 PM IST

*  ಮಲೆನಾಡಿನದ್ಯಾಂತ ಗುಡ್ಡ ಕುಸಿತ, ಧರೆಗೆ ಉರುಳಿದ ಮರಗಳು
*  ಹಲವು ಗ್ರಾಮಗಳ ರಸ್ತೆ ಸಂಚಾರ ಬಂದ್ 
*  ಶಾಲಾ-ಕಾಲೇಜಿಗೆ 2 ದಿನ ರಜೆ
 


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಜು.10):  ಮಲೆನಾಡಿನಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಹತ್ತಾರು ಅನಾಹುತಗಳನ್ನು ಸೃಷ್ಠಿಸಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ಭೂ ಕುಸಿತ ಸಂಭವಿಸಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮನೆಗಳಿಗೆ ಹಾನಿ, ಕೆರೆ ಏರಿ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ. ನಿರಂತರ ಮಳೆಯಿಂದಾಗಿ ತೇವಾಂಶ ಹೆಚ್ಚಾಗುತ್ತಿರುವುದೇ ಅನಾಹುತಗಳು ಉಂಟಾಗಲು ಕಾರಣವಾಗುತ್ತಿದೆ. ವರುಣಾರ್ಭಟ ಹೀಗೇ ಮುಂದುವರಿದಲ್ಲಿ ಇನ್ನಷ್ಟು ಸಂಕಷ್ಟ ಎದುರಾಗುವ ಭೀತಿ ಎದುರಾಗಿದ್ದು ಮಲೆನಾಡಿನಲ್ಲಿ ಮಳೆಯಿಂದ ಮೊದಲ ಬಲಿಯಾಗಿದೆ. 

Tap to resize

Latest Videos

ಕುಸಿದುಬಿದ್ದ ತಡೆಗೋಡೆ

ಭಾರೀ ಮಳೆಯಿಂದಾಗಿ ರಸ್ತೆ ಬದಿಯ ತಡೆಗೋಡೆ ಕುಸಿದುಬಿದ್ದ ಪರಿಣಾಮ ಸಂಚಾರಕ್ಕೆ ತೊಡಕಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿಯಲ್ಲಿ ನಡೆದಿದೆ.ರಸ್ತೆಯು ಕುಸಿಯುವ ಭೀತಿ ಇದ್ದು, ಹೊರನಾಡಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪರ್ಯಾಯ ರಸ್ತೆಗೂ ಗಂಡಾಂತರ ವುಂಟಾಗಿದೆ. ಹೊರನಾಡು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಕಳಸ ತಾಲ್ಲೂಕಿನ ಕಡಂಬಿ ಜಲಪಾತದ ಬಳಿ ಭಾರೀ ಗಾತ್ರದ ಮರ ರಸ್ತೆಗುರುಳಿದ ಪರಿಣಾಮ ಕುದುರೆಮುಖ ಕಾರ್ಕಳ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಆಗಿದ್ದು, ಅರಣ್ಯ ಸಿಬ್ಬಂದಿಯಿಂದ ಮರ ತೆರವು ಕಾರ್ಯಚರಣೆ ನಡೆದಿದ್ದು ಎರಡೂ ಬದಲಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ.

ಚಿಕ್ಕಮಗಳೂರು: ಮುಂದುವರಿದ ಮಳೆ ಅಬ್ಬರ, ಜನಜೀವನ ಸಂಪೂರ್ಣ ಅಸ್ತವ್ಯಸ್ಥ

ರಸ್ತೆ ಮೇಲೆ ಕುಸಿದ ಗುಡ್ಡ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು ಸಂಗ್ರಹವಾಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ನಿರಂತರ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೆ ತೊಡಕಾಗಿದೆ. ರಸ್ತೆ ಕೆಳಭಾಗದಲ್ಲಿರುವ ನಾಲ್ಕೈದು ಕೂಲಿ ಕಾರ್ಮಿಕರ ಮನೆಗಳ ಮೇಲೂ ಗುಡ್ಡ ಕುಸಿತುವ ಆತಂಕ ಎದುರಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಉರುಳಿದ ಮರ

ಎಡಬಿಡದ ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯ ಎಂಟನೇ ತಿರುವಿನ ಬಳಿ ಭಾರೀ ಮರವೊಂದು ರಸ್ತೆಗೆ ಬಿದ್ದಿದೆ. ಒಂದು ಕಿಲೋ ಮೀಟರ್ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.ಕೊನೆಗೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು, ಸ್ಥಳೀಯರ ಸಹಕಾರದೊಂದಿಗೆ ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು  ತಿರುವುಗೊಳಿಸಿದರು. 

ತುಂಗಾನದಿ ಪ್ರವಾಹ ಭೀತಿ

ಶೃಂಗೇರಿ ಪಟ್ಟಣ ಸೇರಿದಂತೆ ಕೆರೆಕಟ್ಟೆ ಸುತ್ತ ಮುತ್ತಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಶಾರದಾ ಮಠದ ಆವರಣ ಹಾಗೂ ಗಾಂಧೀ ಮೈದಾನ ಜಲಾವೃತಗೊಂಡಿದೆ.ದೇವಾಲಯಕ್ಕೆ ಹೊಂದಿಕೊಂಡಿರುವ  ರಸ್ತೆ ಹಾಗೂ ಪಾರ್ಕಿಂಗ್ ಪ್ರದೇಶಕ್ಕೆ ನೀರು ನುಗ್ಗಿದೆ. ನದಿ  ಪಕ್ಕದ ಅಂಗಡಿಗಳಿಗೂ ನೀರು ನುಗ್ಗುವ ಭೀತಿ ಎದುರಾಗಿದೆ,  ಅಪಾಯದ ಮಟ್ಟ ಮೀರಿ ತುಂಗಾ ನದಿ ಹರಿಯಲಾರಂಭಿಸಿದೆ.

ಗಿರಿಯಲ್ಲಿ ಭೂ ಕುಸಿತ ಪ್ರವಾಸಿಗರು ವಾಪಸ್

ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಿರಂತರ ಭೂಕುಸಿತ ವುಂಟಾಗುತ್ತಿದೆ. ನಿನ್ನೆ ಕೊಳಗಾಮೆ-ಮುತ್ತೋಡಿ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದ ಅದೇ ಪ್ರದೇಶದಲ್ಲಿ ಇಂದು ಕೂಡ ಗುಡ್ಡ ಜರಿದಿದೆ. 
ತೋಟದ ಕೆಲಸಕ್ಕೆ ತೆರಳಿದ ಕಾರ್ಮಿಕರನ್ನು ಕರೆತರಲಾಗದೆ ಪರದಾಡುವಂತಾಗಿದೆ. ರಸ್ತೆಯಲ್ಲಿ ಬಿದ್ದಿರುವ ಮಣ್ಣು ಕಲ್ಲು ಮರ ತೆರವುಗೊಳಿಸುವಲ್ಲಿ ತೋಟದ ಕಾರ್ಮಿಕರೂ ನಿರತರಾಗಿದ್ದಾರೆ.

ಚಿಕ್ಕಮಗಳೂರು: ಮಳೆಯ ಅರ್ಭಟಕ್ಕೆ ತತ್ತರಿಸಿದ ಜನತೆ: ಸಂಕಷ್ಟದಲ್ಲಿ 17 ಕುಟುಂಬಗಳು

ಪ್ರವಾಸಿಗರು ವಾಪಸ್

ಇನಾಂ ದತ್ತಾತ್ರೇಯ ಪೀಠ ರಸೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯ ಮುಕ್ಕಾಲು ಭಾಗಕ್ಕೆ ಗುಡ್ಡ ಕುಸಿದಿದೆ. ಕಾರು, ಬೈಕ್ ಹೊರತು ಪಡಿಸಿ ಭಾರಿ ವಾಹನಗಳ ಸಂಚಾರ ಬಂದ್ಆಗಿದ್ದು, ಐಡಿ ಪೀಠಕ್ಕೆ ತೆರಳಲು ಸಾಧ್ಯವಾಗದೆ ಪ್ರವಾಸಿಗರು ನಿರಾಶರಾಗಿದ್ದಾರೆ.ದತ್ತಪೀಠ ರಸ್ತೆ ಮೂರ್ನಾಲ್ಕು ಕಡೆ ರಸ್ತೆಗೆ ಮಣ್ಣು ಉರುಳಿರುವ ಪರಿಣಾಮ ವಾರಾಂತ್ಯದ ರಜೆಗೆಂದು ಬಂದವರು ಪರದಾಡುವಂತಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಪ್ರವಾಸಿಗರ ವಾಹನಗಳಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದ್ದ ರಸ್ತೆಯಲ್ಲೀಗ  ಮಳೆ ನೀರು, ಕಲ್ಲಿನ ರಾಶಿಯೇ ಕಂಡುಬರುತ್ತಿದೆ. ಇದರಿಂದ ಭೀತಿಗೊಳಗಾದ ಪ್ರವಾಸಿಗರು ಪ್ರವಾಸ ಮೊಟಕುಗೊಳಿಸುತ್ತಿದ್ದಾರೆ.ಮುಳ್ಳಯ್ಯನ ಗಿರಿಯ ಸರ್ಪಹಾದಿಯಲ್ಲೂ ಭೂ ಕುಸಿತ ಸಂಭವಿಸಿದೆ. ಗಿರಿಶ್ರೇಣಿಯಲ್ಲಿ ಇನ್ನಷ್ಟು ಭೂ ಕುಸಿತ ಸಂಭವಿಸುವ ಆತಂಕ ಎದುರಾಗಿದೆ.

ಕಣ್ಣೆದುರೇ ಕುಸಿದ ಮನೆ

ನಿರಂತರ ಮಳೆಯಿಂದಾಗಿ ನಿವಾಸಿಗಳ ಕಣ್ಣೆದುರೇ ಮನೆ ಕುಸಿದು ಬಿದ್ದ ಘಟನೆ ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಇಂದು ಮುಂಜಾನೆ ನಡೆದಿದ್ದು, ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮಳೆ ಹೆಚ್ಚಾದಂತೆ ತೇವಾಂಶವೂ ಹೆಚ್ಚಾಗಿ ಗೋಡೆ ಬಿರುಕುಬಿಟ್ಟು ಈ ದುರಂತ ಸಂಭವಿಸಿದೆ. ಅಪಾಯ ಅರಿತು ಕುಟುಂಬದ ಸದಸ್ಯರು ಮನೆಯಿಂದ ಹೊರಕ್ಕೆ ಬಂದ ಸಮಯದಲ್ಲಿ ಕುಸಿತ ಸಂಭವಿಸಿದೆ. ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಇನ್ನೆರಡು ಮನೆಗಳು ಭಾಹಶಃ ಹಾನಿಗೀಡಾಗಿವೆ. ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಬರಬೇಕು. ಸಂತ್ತಸ್ಥ ಕುಟುಂಬಕ್ಕೆ ನೆರವು ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಕೆರೆ ಏರಿ ಒಡೆದು ಜನವಸತಿ ಪ್ರದೇಶಕ್ಕೆ ನೀರು 

ಎಡಬಿಡದೆ ಸುರಿದ ಮಳೆಯಿಂದಾಗಿ ನಗರದ ಉಪ್ಪಳ್ಳಿ ಸಮೀಪದ ಕಂಬದ ಕೆರೆ ಏರಿ ನೀರಿನ ಒತ್ತಡ ತಡೆಯಲಾಗದೆ ಒಡೆದ ಪರಿಣಾಮ ಅಕ್ಕಪಕ್ಕದ ಜನವಸತಿ ಬಡಾವಣೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ.ಹತ್ತಾರು ಮನೆಗಳು ಜಾವೃತಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕೆರೆ ನೀರಿನಿಂದಾವೃತವಾದ ಬಡಾವಣೆ ದ್ವೀಪದಂತಾಗಿತ್ತು. ಕೆರೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಇಡೀ ಕೆರೆ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದೆ. ನಗರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮಳೆ ಅಬ್ಬರಕ್ಕೆ ಮಲೆನಾಡಿನಲ್ಲಿ ಮೊದಲ ಬಲಿ 

ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಸ್ತಿ ಪಾಸ್ತಿ ನಷ್ಟವಾಗುತ್ತಿದ್ದರೆ ಮತ್ತೊಂದಡೆ ಭೂ ಕುಸಿತವೂ ಜಾಸ್ತಿ ಆಗುತ್ತಿದೆ. ಇದರ ನಡುವೆ ಮಳೆ ಗಾಳಿಗೆ ಪ್ರಾಣಹಾನಿಯೂ ಸಂಭವಿಸಿದ್ದು ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ತೋಟ ಕೆಲಸ ಮಾಡುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನಲ್ಲಿ ನಡೆದಿದೆ. ಹೊರನಾಡು ಸಮೀಪದ ತೋಟದಲ್ಲಿ ಕೆಲ್ಸ ಮಾಡ್ತಾ ಇದ್ದ ದಾವಣಗೆರೆ ಮೂಲದ 20 ವರ್ಷದ ಪ್ರಿಯಾಂಕ ಅನ್ನೋ ಯುವತಿಯ ಮೇಲೆ ಮರ ಬಿದ್ದಿದ್ರಿಂದ ಸ್ಥಳದಲ್ಲೇ ಮೃತಪಟ್ಟಿರು. ಯುವತಿ ಮೃತಪಟ್ಟಿರುವ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರೋಂದನ ಮುಗಿಲುಮುಟ್ಟಿತ್ತು.

ಚಿಕ್ಕಮಗಳೂರು: ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ತೀರ್ಥಕೆರೆ ಜಲಪಾತ

ಶಾಲಾ-ಕಾಲೇಜಿಗೆ 2 ದಿನ ರಜೆ

ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಶಾಲಾ-ಕಾಲೆಜುಗಳಿ ನೀಡಿದ್ದ ರಜೆಯನ್ನು ಮತ್ತೆ ಎರಡು ದಿನ ವಿಸ್ತರಿಸಿ ಜಿಲ್ಲಾದಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ. 

ಮತ್ತೆ ಎರಡು ದಿನ ರಜೆ ವಿಸ್ತರಣೆ 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಡಬಿಡದೇ ಮಳೆಯಾಗುತ್ತಿದೆ. ಜಿಲ್ಲೆಯ ಬಯಲು ಸೀಮೆ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯ ಅನೇಕ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಆರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ  ಎರಡು ದಿನ ರಜೆಯನ್ನು ಘೋಷಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದು ಜಿಲ್ಲೆಯಲ್ಲಿ ಭಾರೀ ಮಳೆಯಾಗುತರ‍್ತುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ಮತ್ತು ಕಳಸ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ದಿನಾಂಕ 11-7-2022 ಮತ್ತು ದಿನಾಂಕ 12-07_2022ರ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಮಲೆನಡಿನ 6 ತಾಲೂಕುಗಳಾದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ, ಚಿಕ್ಕಮಗಳೂರು ತಾಲೂಕಿಗೆ ರಜೆ ನೀಡಲಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಜು. 6ರಿಂದ 9ರವರೆಗೆ ಶಾಲೆ, ಪ್ರೌಢ ಶಾಲೆಗೆ ರಜೆ ನೀಡಲಾಗಿತ್ತು. ಮತ್ತೆ ಮಲೆನಾಡಿನಲ್ಲಿ ಮಳೆ ಅರ್ಭಟ ಜೋರಾಗಿರುವ ಕಾರಣ ಎರಡು ದಿನ ರಜೆ ವಿಸ್ತರಣೆ ಮಾಡಿದ್ದು ಜು. 11 ಮತ್ತು 12 ರಂದು ರಜೆ ಘೋಷಿಸಲಾಗಿದೆ. 
 

click me!