ಕಲ್ಯಾಣ ಮಂಟಪ ಬಂದ್‌: ಮದುವೆ ರದ್ದು, ವಧು-ವರರ ಕನಸು ಭಗ್ನ..!

By Kannadaprabha NewsFirst Published Apr 24, 2021, 2:14 PM IST
Highlights

ಮದುವೆ ಕಾರ್ಯಕ್ಕಾಗಿ ಪಡೆದಿದ್ದ ಮುಂಗಡ ಹಣವನ್ನು ವಾಪಸ್‌ ಮಾಡಿದ ಕಲ್ಯಾಣ ಮಂಟಪ| ಮೇ 31ರ ನಂತರ ಮದುವೆಗೆ ಅವಕಾಶ| ನಿಯಮ ಉಲ್ಲಂಘನೆಯಿಂದ ಪಾರಾಗಲು ಮೇ 31ರವರೆಗೆ ಮದುವೆಗಳನ್ನು ನಡೆಸದಿರಲು ನಿರ್ಧರಿಸಿದ ಕಲ್ಯಾಣ ಮಂಟಪದ ಆಡಳಿತ ಮಂಡಳಿ| 

ವಿಜಯಪುರ(ಏ.24): ಕೊರೋನಾ ಎರಡನೇ ಅಲೆ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮದುವೆಗಳಿಗಾಗಿ ಕಲ್ಯಾಣ ಮಂಟಪದಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ ನೀಡಿದೆ. ನಿಯಮ ಉಲ್ಲಂಘನೆಯಿಂದ ಪಾರಾಗಲು ಕಲ್ಯಾಣ ಮಂಟಪದ ಆಡಳಿತ ಮಂಡಳಿ ಮೇ 31ರವರೆಗೆ ಮದುವೆಗಳನ್ನು ನಡೆಸದಿರಲು ನಿರ್ಧರಿಸಿದೆ. ಇದರಿಂದಾಗಿ 20ಕ್ಕೂ ಹೆಚ್ಚು ಮದುವೆಗಳು ರದ್ದಾಗಿದ್ದು, ಮದುವೆ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಹಸೆಮಣೆ ಏರುವ ವಧು-ವರರ ಕನಸು ಕೂಡ ಭಗ್ನಗೊಂಡಿದೆ.

ನಗರದ ಸ್ಟೇಶನ್‌ ರಸ್ತೆಯಲ್ಲಿನ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಮೇ 31ರವರೆಗೆ 20ಕ್ಕೂ ಅಧಿಕ ಮದುವೆಗಳು ನಡೆಸಲು ಬುಕ್ಕಿಂಗ್‌ ಮಾಡಲಾಗಿತ್ತು. ಆದರೆ ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೇ 31ರವರೆಗೆ ಮದುವೆಗಳನ್ನು ನಡೆಸದಿರಲು ನಿರ್ಧರಿಸಿ ಕಲ್ಯಾಣ ಮಂಟಪ ಆಡಳಿತ ಮಂಡಳಿ ಕಠಿಣ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಮದುವೆಗಾಗಿ ಸಿದ್ಧತೆ ಮಾಡಿಕೊಂಡಿದ್ದ ಜನರಿಗೆ ಭಾರೀ ನಿರಾಸೆಯಾಗಿದೆ.

ವಿಜಯಪುರದಲ್ಲಿ ಬೆಡ್‌ ಸಿಗದೆ ಕೊರೋನಾ ರೋಗಿಗಳ ಪರದಾಟ

ಮದುವೆ ಕಾರ್ಯಕ್ಕಾಗಿ ಪಡೆದಿದ್ದ ಮುಂಗಡ ಹಣವನ್ನು ಕಲ್ಯಾಣ ಮಂಟಪದವರು ವಾಪಸ್‌ ಮಾಡಿದ್ದು, ಮೇ 31ರ ನಂತರ ಮದುವೆಗೆ ಅವಕಾಶ ನೀಡಲಾಗುವುದು. ಆಗ ಬನ್ನಿ ಎಂದು ಸಮಜಾಯಿಸಿ ನೀಡಿ ಕಳುಹಿಸಲಾಗುತ್ತಿದೆ. ವಿಜಯಪುರ ನಗರದಲ್ಲಿ ಬಹುತೇಕ ಕಲ್ಯಾಣ ಮಂಟಪಗಳು ಗುರುದತ್ತ ಮಂಗಲ ಕಾರ್ಯಾಲಯದ ಮುಖ್ಯಸ್ಥರ ಹಾದಿ ತುಳಿಯುವ ಸಾಧ್ಯತೆ ಹೆಚ್ಚಿದೆ.
 

click me!