ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ವಂಚಿಸಿದ ದ್ವಿತೀಯ ದರ್ಜೆ ಸಹಾಯಕನೋರ್ವನಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಚಿಕ್ಕಮಗಳೂರು (ಆ.31): ಮೇಲಾಧಿಕಾರಿಗಳ ಸಹಿಗಳನ್ನು ಪೋರ್ಜರಿ ಮಾಡಿ ಸರ್ಕಾರಕ್ಕೆ 1.29 ಕೋಟಿ ರು. ವಂಚಿಸಿರುವ ಜಿಲ್ಲೆಯ ತರೀಕೆರೆಯ ಅರಣ್ಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ 2 ಕೋಟಿ ರು. ಸಂದಾಯ ಮಾಡುವಂತೆ ಶನಿವಾರ ತೀರ್ಪು ನೀಡಿ ಜತೆಗೆ 2 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ದ್ವಿತೀಯ ದರ್ಜೆ ಸಹಾಯಕ ಮೋಹನ್‌ಕುಮಾರ್ ಇಲಾಖೆ ಹಣವನ್ನು ವಿವಿಧ ಹಂತಗಳಲ್ಲಿ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು. ಈ ಸಂಬಂಧ ತರೀಕೆರೆಯ ಡಿವೈಎಸ್ಪಿ ಎಚ್.ಬಿ.ಮಲ್ಲಿಕಾರ್ಜುನಪ್ಪ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸೋಂಕಿತೆಯ ಶವದಲ್ಲಿದ್ದ ಮಾಂಗಲ್ಯ ಮಂಗಮಾಯ!...
ಪ್ರಕರಣದ ವಿಚಾರಣೆ ನಡೆಸಿದ 2ನೇ ಜಿಲ್ಲಾ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನಂಜೇಗೌಡ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ .2 ಕೋಟಿ ಪಾವತಿ ಮಾಡಬೇಕು ಅಥವಾ ಒಂದು ವೇಳೆ ಹಣ ಪಾವತಿಸದಿದ್ದಲ್ಲಿ ಮತ್ತೆ 3 ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎನ್.ಗೋವಿಂದರಾಜ್ ಅವರು ವಾದ ಮಾಡಿದ್ದರು.