ಈಗಾಗಲೇ ಬಿಜೆಪಿಯತ್ತ ಮುಖಮಾಡಿದ್ದವರಿಗೆ ಸಚಿವ ಸ್ಥಾನ ನೀಡಿರುವ ಬಿಜೆಪಿಯಿಂದ ಇದೀಗ ಇನ್ನಿಬ್ಬರು ಮುಖಂಡರಿಗೆ ಸ್ಥಾನ ಮಾನ ಸಿಗಲಿದೆ ಎನ್ನುವ ಭರವಸೆ ಮಾತುಗಳು ಕೇಳಿ ಬಂದಿದೆ.
ಚಿಕ್ಕಬಳ್ಳಾಪುರ (ಆ.31): ಹಿಂದೆ ಸರ್ಕಾರ ರಚನೆ ವೇಳೆ ಏನೆಲ್ಲಾ ಮಾತುಕತೆ ಆಗಿತ್ತು. ಅದರಂತೆ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ನೂತನ ಎಂಎಲ್ಸಿಗಳಾದ ಎಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿಯಲ್ಲಿ ಆಗ್ರಹಿಸಿದ್ದಾರೆ.
ಹಳ್ಳಿಯಲ್ಲಿ ಪಕ್ಷ ಸಂಘಟೆ ಮಾಡಿದ ಬಿಜೆಪಿ ನಾಯಕ ಈಗ ದಿಲ್ಲಿ ಪ್ರತಿನಿಧಿ...!...
ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಹೈಕಮಾಂಡ್ ನಮ್ಮೊಂದಿಗೆ ನಡೆಸಿದ ಮಾತುಕತೆ ಅನ್ವಯ ಭರವಸೆಗಳನ್ನು ಈಡೇರಿಸುವುದು ಅವರ ಧರ್ಮ, ಆ ಮಾತಿನಂತೆ ಪಕ್ಷ ಕೂಡ ಇದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಬಂದತಂಹ ನಮ್ಮ ಸ್ನೇಹಿತರಿಗೆ ಮಾತುಕತೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ಅವರ ಕೈ ಹಿಡಿಯುವ ಕೆಲಸ ಮಾಡಬೇಕಿದೆ ಎಂದರು.