ಬೆಂಗ್ಳೂರಿಂದ ಬಂದ ಅಳಿಯ-ಮಗಳಿಗೆ ಸೋಂಕು ಪತ್ತೆ..!

Suvarna News   | Asianet News
Published : Jul 10, 2020, 02:14 PM IST
ಬೆಂಗ್ಳೂರಿಂದ ಬಂದ ಅಳಿಯ-ಮಗಳಿಗೆ ಸೋಂಕು ಪತ್ತೆ..!

ಸಾರಾಂಶ

ಕಳೆದ ವಾರ ಹೊಸನಗರಕ್ಕೆ ಬಂದಿದ್ದ ಅಳಿಯ ಮಗಳು ಸುಮ್ಮನೇ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಇದೀಗ ಟೆಸ್ಟ್ ರಿಸಲ್ಟ್ ಬಂದಿದ್ದು, ಇಬ್ಬರಿಗೂ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹೊಸನಗರ(ಜು.10) ನಮ್ಮ ಊರು, ಗ್ರಾಮವನ್ನು ನಾವೇ ಕಾಪಾಡಿ ಕೊಳ್ಳಬೇಕು, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದವರಿಗೆ ಕೊರೊನಾ ಟೆಸ್ಟ್ ಮಾಡಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಇದೀಗ ಮಲೆನಾಡಿನಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಹೌದು, ಬೆಂಗಳೂರಿನಿಂದ ಬಂದ ಮಗಳು ಮತ್ತು ಅಳಿಯನಿಗೆ ಕರೊನಾ ಸೋಂಕು ದೃಢಪಟ್ಟ ಘಟನೆ ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಹಿಲ್ಕುಂಜಿ ಗ್ರಾಮದಲ್ಲಿ ನಡೆದಿದೆ. ಜುಲೈ 4 ರಂದು 23 ವರ್ಷದ ಮಗಳು, 36 ವರ್ಷದ ಅಳಿಯ ಇಬ್ಬರು ಮಕ್ಕಳು ಹಿಲ್ಕುಂಜಿಗೆ ಬಂದಿದ್ದರು. ಬಳಿಕ ಹೊಸನಗರ ಸರಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. 

ಅಳಿಯ ಮೂಲತಃ ಉಡುಪಿ ಜಿಲ್ಲೆ ಅಮಾಸೆಬೈಲು, ಮಚ್ಚಟ್ಟು ಗ್ರಾಮದ ಹೆಮ್ಮಣ್ಣು ವಾಸಿಯಾಗಿದ್ದಾನೆ. ಇದೀಗ ಕೊರೋನಾ ಟೆಸ್ಟ್ ವರದಿ ಬಂದಿದ್ದು, ಇಬ್ಬರಿಗೂ ಕೊರೋನಾ ಸೊಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಇಬ್ಬರು ದಂಪತಿ ಕೋವಿಡ್ ವಾಹನದಲ್ಲಿ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ 37 ಜನರಿಗೆ ಕೊರೋನಾ ಸೋಂಕು

ಕೊರೋನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಹಿಲ್ಕುಂಜಿಯ ಸೋಂಕಿತರಿರುವ ಪ್ರದೇಶ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರು ಓಡಾಡಿದ ಪ್ರದೇಶಗಲ್ಲಿ ಔಷಧಿ ಸಿಂಪಡಿಸಿ, ಜಾಗೃತಿ ಮೂಡಿಸುವ ಕೆಲಸಕ್ಕೆ ಹೊಸನಗರ ತಾಲೂಕು ಆಡಳಿತ ಮುಂದಾಗಿದೆ.   ಗುರುವಾರ(ಜು.10)ದ ಅಂತ್ಯದ ವೇಳೆಗೆ ಶಿವಮೊಗ್ಗದಲ್ಲಿ 372 ಕೊರೋನಾ ಸೋಂಕಿತರ ಪತ್ತೆಯಾಗಿದ್ದರು. ಈ ಪೈಕಿ 141 ಗುಣಮುಖರಾಗಿದ್ದಾರೆ.

PREV
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ