ದಾವಣಗೆರೆಯಲ್ಲಿ 2 ಹೊಸ ಕೇಸ್‌, 6 ಜನ ಡಿಸ್ಚಾರ್ಜ್..!

By Kannadaprabha NewsFirst Published Jun 24, 2020, 9:56 AM IST
Highlights

ದಾವಣಗೆರೆಯಲ್ಲಿ ಮಂಗಳವಾರ(ಜೂ.23)ರಂದು ಹೊಸದಾಗಿ ಎರಡು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇನ್ನು 6 ಮಂದಿ ಗುಣಮುಖರಾಗಿದ್ದು ಜಿಲ್ಲೆಯಲ್ಲಿ 34 ಸಕ್ರಿಯ ಪ್ರಕರಣಗಳು ಇವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದಾವಣಗೆರೆ(ಜೂ.24): ಹೊಸದಾಗಿ 2 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, 6 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಜಿಲ್ಲೆಯಲ್ಲಿ 34 ಸಕ್ರಿಯ ಕೇಸ್‌ ಇವೆ ಎಂದು ಜಿಲ್ಲಾಧಿಕಾರಿ ಬೀಳಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆವರಗೆರೆ ಗ್ರಾಮಕ್ಕೆ ಸಂಬಂಧಿಸಿದ 34 ವರ್ಷದ ಪುರುಷ(ಪಿ-9420), 68 ವರ್ಷದ ವೃದ್ಧ(9421)ನಲ್ಲಿ ಸೋಂಕು ದೃಢಪಟ್ಟಿದೆ. ಆವರಗೆರೆಗೆ ಸಂಬಂಧಿಸಿದ ಪಿ-9420 ಪ್ರಾಥಮಿಕ ಸಂಪರ್ಕದ 8 ಜನರ ಸ್ವಾಬ್‌ ಸಂಗ್ರಹಿಸಿದೆ. ಮಹಾರಾಜಪೇಟೆಯ ಪಿ-9421ರ ಸಂಪರ್ಕದ 12 ಜನರ ಸ್ವಾಬ್‌ ಸಂಗ್ರಹಿಸಲಾಗಿದೆ. ಪಿ-9420, 9421 ಇಬ್ಬರೂ ತೀವ್ರ ಉಸಿರಾಟದ ತೊಂದರೆ(ಎಸ್‌ಎಆರ್‌ಐ) ಕೇಸ್‌ ಹಿನ್ನೆಲೆಯವರು ಎಂದು ಅವರು ಹೇಳಿದರು.

ಪಿ-7804, 7805, 8066, 8067, 8068 ಹಾಗೂ 8069 ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 267 ಪಾಸಿಟಿವ್‌ ಕೇಸ್‌ ವರದಿಯಾಗಿದ್ದು, 7 ಜನ ಸಾವನ್ನಪ್ಪಿದ್ದಾರೆ. 226 ಜನರು ಸೋಂಕಿನಿಂದ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 34 ಸಕ್ರಿಯ ಕೇಸ್‌ ಇವೆ ಎಂದು ತಿಳಿಸಿದರು.

ಜೂನ್‌ 18ರಂದು ದೊಡ್ಡಬಾತಿ, ಆವರಗೊಳ್ಳ, ಶ್ಯಾಗಲೆ, ಬಸವನಳ್ಳಿ, ಮಾದನಬಾವ ಗ್ರಾಮಗಳಿಗೆ ಸಂಬಂಧಿಸಿದ ಪಿ-7804, 7805, 8066, 8067, 8068, 8069 ಈ ಎಲ್ಲರ ಗಂಟಲು ದ್ರವ ಮಾದರಿಯನ್ನು ನಗರದ ಖಾಸಗಿ ಲ್ಯಾಬ್‌ಗೆ ಕಳಿಸಿದಾಗ ಪಾಸಿಟಿವ್‌ ವರದಿ ಬಂದಿತ್ತು. ಈ ಪೈಕಿ ಯಾರೊಬ್ಬರೂ ಕಂಟೈನ್‌ಮೆಂಟ್‌ ಝೋನ್‌, ಸೋಂಕಿತರ ಸಂಪರ್ಕಕ್ಕೆ ಬಾರದಿರುವುದು ಕಂಡು ಬಂದಿದೆ ಎಂದರು.

ಮತ್ತೊಮ್ಮೆ ಜೂ.20ರಂದು ಆರೂ ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ, ಮತ್ತೊಂದು ಖಾಸಗಿ ಆಸ್ಪತ್ರೆಗೆ ಕಳಿಸಿದಾಗ ವರದಿ ನೆಗೆಟಿವ್‌ ಬಂದಿತು. ಇದನ್ನು ಪುನಾ ದೃಢಪಡಿಸಿಕೊಳ್ಳಲು ಬೆಂಗಳೂರಿನ ಲ್ಯಾಬ್‌ಗೆ ಕಳಿಸಿದಾಗಲೂ ನೆಗೆಟಿವ್‌ ಬಂದಿದ್ದರಿಂದ ಈ ವಿಚಾರ ಸರ್ಕಾರದ ಗಮನಕ್ಕೆ ತಂದೆವು ಎಂದು ಹೇಳಿದರು.

ಮುಂಬೈಯಿಂದ ಬಂದಿದ್ದ ಭದ್ರಾವತಿ ಮಹಿಳೆಗೆ ಕೊರೋನಾ

ದೊಡ್ಡಬಾತಿ, ಶ್ಯಾಗಲೆ, ಬಸವನಹಳ್ಳಿ, ಮಾದನಬಾವಿ ಕಂಟೈನ್‌ಮೆಂಟ್‌ಗಳನ್ನು ಡಿನೋಟಿಫೈ ಮಾಡಿದೆ. ಆರು ಜನರಲ್ಲಿ ಐಎಲ್‌ಐ ಹಿನ್ನೆಲೆ ಮತ್ತು ನಾಲ್ವರು ಗರ್ಭಿಣಿಯರಿದ್ದು, ಈ ಎಲ್ಲರ ವರದಿ ನೆಗೆಟಿವ್‌ ಬಂದಿದೆ. ಆದರೂ ಮುಂಜಾಗ್ರತೆಯಾಗಿ 2 ವಾರ ಹೋಂ ಕ್ವಾರಂಟೈನ್‌ ಇರಲು ಸೂಚಿಸಿದೆ. ಕೊರೋನಾ ಟೆಸ್ಟ್‌ ಕಿಟ್ಸ್‌ ಸಮಸ್ಯೆ ಅಥವಾ ಕಂಟಾಮಿನೇಟ್‌ ಆದ ಕಾರಣಕ್ಕೆ ತಪ್ಪು ವರದಿ ಬಂದಿರಬಹುದು. ಆ ಖಾಸಗಿ ಆಸ್ಪತ್ರೆ ಲ್ಯಾಬ್‌ಗೆ ನೋಟಿಸ್‌ ಜಾರಿ ಮಾಡುತ್ತೇವೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್‌ ಇದ್ದರು.

ದಾವಣಗೆರೆಯಲ್ಲಿ ಕೋವಿಡ್‌ಗೆ 5122 ಬೆಡ್‌ ಸಿದ್ಧ

ಕೊರೋನಾ ಎದುರಿಸಲು ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳೂ ಸೇರಿ ಒಟ್ಟು 5122 ಕೋವಿಡ್‌ ಬೆಡ್‌ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸೋಂಕಿನ ಬಗ್ಗೆ ಯಾರೂ ಭಯಪಡಬೇಕಿಲ್ಲ. ಸೋಂಕು ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸ್ಯಾನಿಟೈಸರ್‌ ಬಳಸುವತ್ತ ಗಮನ ಹರಿಸಬೇಕು. ವೈರಸ್‌ ನಿಯಂತ್ರಣಕ್ಕೆ ವೈಯಕ್ತಿಕ ಎಚ್ಚರಿಕೆ ಅತ್ಯಗತ್ಯ. ದುರ್ಬಲ ವರ್ಗದವರು, ಸ್ಲಂ, ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್‌ ಶಾಪ್‌ಗಳಲ್ಲಿ ಔಷಧಿ ತೆಗೆದುಕೊಂಡವರ ಸ್ಯಾಂಪಲ್‌ ಸೇರಿದಂತೆ ಒಟ್ಟು 1075 ಜನರ ಸ್ಯಾಂಪಲ್‌ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಿದೆ. ತಾಲೂಕುಗಳಲ್ಲೂ ಸ್ವಾಬ್‌ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.

18 ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ

ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್‌ ವೈರಸ್‌ ನಿಯಂತ್ರಣದಲ್ಲಿದ್ದು, ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ ಕೋವಿಡ್‌ ವಾರ್ಡ್‌ ಹೊರತುಪಡಿಸಿದಂತೆ ನಗರ, ಜಿಲ್ಲೆಯ 19 ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಚಿಕಿತ್ಸೆಗೆ ಸರ್ಕಾರದ ಆದೇಶ ಬಂದಿದೆ.

- ಮಹಾಂತೇಶ ಜಿ.ಬೀಳಗಿ, ಜಿಲ್ಲಾಧಿಕಾರಿ
 

click me!