ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ ಸಾವು: ಕೊರೋನಾ ಶಂಕೆ| ಮೃತ ನೌಕರ ಕರ್ತವ್ಯದ ಮೇಲೆ ಮಹಾರಾಷ್ಟ್ರದ ಮಿರಜ್‌ಗೆ ತೆರಳಿ ವಾಪಸ್ ಹುಬ್ಬಳ್ಳಿಗೆ ಬಂದು ಕಳೆದ ಶುಕ್ರವಾರ ಸ್ವಗ್ರಾಮಕ್ಕೆ ಬಂದಿದ್ದ| ಜ್ವರದಿಂದಾಗಿ ಸೋಮವಾರ ಬಾಗಲಕೋಟೆ ಆಸ್ಪತ್ರೆಗೆ ತೆರಳುವ ವೇಳೆ ಹೃದಯಾಘಾತ ಸಾವನ್ನಪ್ಪಿದ್ದರು|
ಬಾಗಲಕೋಟೆ(ಜೂ.24): ಹುಬ್ಬಳ್ಳಿ ನೈರುತ್ಯ ರೈಲ್ವೇ ವಲಯದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 57 ವರ್ಷದ ನೌಕರ, ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ ಕೊರೋನಾದಿಂದ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ಮೃತ ನೌಕರ ಕರ್ತವ್ಯದ ಮೇಲೆ ಮಹಾರಾಷ್ಟ್ರದ ಮಿರಜ್‌ಗೆ ತೆರಳಿ ವಾಪಸ್ ಹುಬ್ಬಳ್ಳಿಗೆ ಬಂದು ಕಳೆದ ಶುಕ್ರವಾರ ಸ್ವಗ್ರಾಮಕ್ಕೆ ಬಂದಿದ್ದರು. ಜ್ವರದಿಂದಾಗಿ ಸೋಮವಾರ ಬಾಗಲಕೋಟೆ ಆಸ್ಪತ್ರೆಗೆ ತೆರಳುವ ವೇಳೆ ಹೃದಯಾಘಾತ ಸಾವನ್ನಪ್ಪಿದ್ದರು.
ಹುನಗುಂದ: ಸೂರ್ಯಗ್ರಹಣದ ಮಧ್ಯೆಯೂ ಸಂಗಮನಾಥನ ದರ್ಶನ ಪಡೆದ ಭಕ್ತರು
ನಗರದ ಕೋವಿಡ್ ಆಸ್ಪತ್ರೆಯಲ್ಲಿ ಗಂಟಲುದ್ರವ ಪರೀಕ್ಷೆ ವೇಳೆ ಕೊರೋನಾ ಪಾಸಿಟಿವ್ ದೃಢವಾಗಿತ್ತು. ಸೋಂಕು ಖಚಿತತೆಗೆ ಬೆಂಗಳೂರು ಲ್ಯಾಬ್‌ಗೆ ಸ್ಯಾಂಪಲ್ ಕಳುಹಿಸಲಾಗಿದೆ. ಮೃತನ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.