ರಾಜ್ಯದ ಮತ್ತಿಬ್ಬರು ಮುಖಂಡರಿಗೆ ಕೊರೋನಾ ದೃಢ

Kannadaprabha News   | Asianet News
Published : Aug 21, 2020, 07:10 AM ISTUpdated : Aug 21, 2020, 07:12 AM IST
ರಾಜ್ಯದ ಮತ್ತಿಬ್ಬರು ಮುಖಂಡರಿಗೆ ಕೊರೋನಾ ದೃಢ

ಸಾರಾಂಶ

ರಾಜ್ಯದ ಮತ್ತಿಬ್ಬರು ಶಾಸಕರಿಗೆ ಕೊರೋನಾ ಸೋಂಕು ದರಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಟ್ಕಳ/ ಮುದ್ದೇಬಿಹಾಳ (ಆ.21): ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಅವರಿಗೆ ಕೊರೋನಾ ದೃಢಪಟ್ಟಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಸಕ ಸುನೀಲ ನಾಯ್ಕ ಅವರು ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಮನೆಗೆ ಬಂದಿದ್ದು, ಆಯಾಸ ಮತ್ತು ಸಣ್ಣದಾಗಿ ಜ್ವರ ಕಾಣಿಸಿಕೊಂಡಿದ್ದರಿಂದ ತಕ್ಷಣ ಮುರ್ಡೇಶ್ವರದ ಆರ್‌ಎನ್‌ಎಸ್‌ ಆಸ್ಪತ್ರೆ ಆ್ಯಂಟಿಜೆನ್‌ ಕೋವಿಡ್‌-19 ಟೆಸ್ಟ್‌ ಮಾಡಿದಾಗ ಪಾಸಿಟಿವ್‌ ಬಂದಿದೆ. 

ರಾಜ್ಯದಲ್ಲಿ 2ನೇ ಸಲ 8000+ ಕೊರೋನಾ ಪ್ರಕರಣಗಳು, ಆಗಸ್ಟ್‌ನಲ್ಲೇ ಹೆಚ್ಚು ಸಾವು!...

ತಕ್ಷಣ ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

ಇನ್ನು ಮಾಜಿ ಸಚಿವ, ವಿಜಯಪುರ ಜಿಲ್ಲೆಯ ಸಿ.ಎಸ್‌.ನಾಡಗೌಡ ಅವರು ಕೊರೋನಾ ಸೋಂಕಿತರ ಸಂಪರ್ಕ ಹೊಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

PREV
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!