ಕರ್ನಾಟಕ-ತಮಿಳುನಾಡು ಗಡಿಯಲ್ಲಿ 2 ಕಿಮೀ ಟ್ರಾಫಿಕ್ ಜಾಂ

Published : Nov 09, 2023, 06:10 AM IST
ಕರ್ನಾಟಕ-ತಮಿಳುನಾಡು ಗಡಿಯಲ್ಲಿ 2 ಕಿಮೀ ಟ್ರಾಫಿಕ್ ಜಾಂ

ಸಾರಾಂಶ

ದಿಂಬಂ ಘಟ್ಟ ಪ್ರದೇಶದಲ್ಲಿ ಸರಕು ತುಂಬಿದ ವಾಹನಗಳು 16 ಟನ್ ಅಷ್ಟೇ ಹೊತ್ತು ಸಾಗಬೇಕು ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಗಡಿಯಲ್ಲಿ ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡುತ್ತಿರುವುದರಿಂದ ಉಳಿದ ವಾಹನಗಳು ಕಿಮೀಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕುವಂತಾಗಿದೆ.

ಚಾಮರಾಜನಗರ(ನ.09): ಅತೀ ಭಾರ ಹೊತ್ತ ವಾಹನಗಳಿಗೆ ತಮಿಳುನಾಡು ಅರಣ್ಯ ಇಲಾಖೆಯು ದಂಡ ವಿಧಿಸುತ್ತಿದ್ದು, ಪ್ರತಿ ಲಾರಿ, ಟ್ರಕ್ ಗಳ ತೂಕ ಅಳೆಯುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಿಮೀಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿದೆ.

ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುವ ಚಾಮರಾಜನಗರದ ಗಡಿಯಲ್ಲಿರುವ ಅಸನೂರಿನಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯು ಅತಿಭಾರ ಹೊತ್ತ ವಾಹನಗಳಿಗೆ ದಂಡ ವಿಧಿಸುತ್ತಿರುವ ಹಿನ್ನೆಲೆ ಉಳಿದ ವಾಹನಗಳಾದ ಬಸ್, ಕಾರು, ಬೈಕ್ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಿಲುಕಿದ್ದಾರೆ.

ಮತ್ತೊಮ್ಮೆ ಕೋಟ್ಯಧಿಪತಿಯಾದ ಮಾದಪ್ಪ: 28 ದಿನಗಳಲ್ಲಿ 2 ಕೋಟಿಗೂ ಅಧಿಕ ಹಣ ಸಂಗ್ರಹ

ದಿಂಬಂ ಘಟ್ಟ ಪ್ರದೇಶದಲ್ಲಿ ಸರಕು ತುಂಬಿದ ವಾಹನಗಳು 16 ಟನ್ ಅಷ್ಟೇ ಹೊತ್ತು ಸಾಗಬೇಕು ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಗಡಿಯಲ್ಲಿ ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡುತ್ತಿರುವುದರಿಂದ ಉಳಿದ ವಾಹನಗಳು ಕಿಮೀಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕುವಂತಾಗಿದೆ.

6 ಮತ್ತು 10 ಚಕ್ರದ ಲಾರಿಗಳು, ಟ್ರಕ್ ಗಳು ಕೇವಲ 16.2 ಟನ್ ನಷ್ಟು ಮಾತ್ರ ಸರಕು ಸಾಗಾಟ ನಡೆಸಬಹುದಾಗಿದೆ. ಆದರೆ, ಬಹುತೇಕ ಲಾರಿಗಳು 20-25 ಟನ್ ನಷ್ಟು ತೂಕ ಹೊತ್ತು ಸಾಗುತ್ತಿರುವುದು ಕಂಡುಬಂದಿದ್ದರಿಂದ ಅರಣ್ಯ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಒಟ್ಟಿನಲ್ಲಿ ಆ್ಯಂಬುಲೆನ್ಸ್ ಗಳು ಸೇರಿದಂತೆ ಹಲವು ವಾಹನಗಳು ಕಿಮೀಗಟ್ಟಲೇ ನಿಂತು ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಫಜೀತಿ ಅನುಭವಿಸುವಂತಾಗಿದೆ.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!