ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರ ಬಂಧನ/ ವಿಜಯಪುರ ಜಿಲ್ಲೆಯ ಪಾನ್ ಶಾಪ್ ನಲ್ಲಿ ಬಂಧನ/ ಎಲ್ಲಿಂದ ಬಂತು ನಕಲಿ ನೋಟು?
ವಿಜಯಪುರ[ಸೆ. 15] ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಪಾನ್ ಶಾಪ್ ನಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ನಡೆಸಿದಾಗ ಬಂಧನ ಮಾಡಲಾಗಿದೆ.
ವಿಜಯಪುರದ ಬಸವನಬಾಗೇವಾಡಿಯ ಇಂದಿರಾ ನಗರದ ನಿವಾಸಿಗಳಾದ ಸುಮನ್ ಬಂಗಾರಿ, ಸೋಹೆಲ್ ಇನಾಂದಾರ್ ಬಂಧಿತರು. 100 ರೂಪಾಯಿ ಮುಖಬೆಲೆಯ 4500 ನಕಲಿ ನೋಟು ಜಪ್ತಿ ಮಾಡಲಾಗಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಭಾಗಕ್ಕೂ ಈ ಖೋಟಾ ನೋಟು ಹಾವಳಿ ಕಾಲಿಟ್ಟಿದ್ದು ಸಹಜವಾಗಿ ಆತಂಕ ತಂದಿದೆ.