ಅಕ್ರಮ ಮಾಲ್‌ನೊಂದಿಗೆ ಸಿಕ್ಕಿಬಿದ್ರು ಆಂಧ್ರದ ನಿವಾಸಿಗಳು

By Suvarna News  |  First Published Sep 22, 2020, 11:10 AM IST

ಅಕ್ರಮವಾಗಿ ಮಾಲ್ ಸಾಗಾಟ ಮಾಡುತ್ತಿದ್ದ ಇಬ್ಬರು ಆಂಧ್ರ ಮೂಲದ ವ್ಯಕ್ತಿಗಳನ್ನು ಬಂಧಿಸಿ ಅವರ ಬಳಿ ಇದ್ದ ಲಕ್ಷ ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ. 


ಚಿಕ್ಕಬಳ್ಳಾಪುರ (ಸೆ.22): ಅಕ್ರಮ ಗಾಂಜಾ ಸಾಗಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. 

ಮೂರು ಲಕ್ಷ ರು. ಮೌಲ್ಯದ ಗಾಂಜಾವನ್ನು ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಂತಾಮಣಿ ತಾಲೂಕಿನ ಕೈವಾರ ಬಳಿಯ ಮಸ್ತೇನಹಳ್ಳಿ ಗ್ರಾಮದಲ್ಲಿ  ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಿಲೇರಿ ನಿವಾಸಿ  ಹರಿ, ಪಾಲಮಂಡಲಂ ನಿವಾಸಿ ವಿನೋದ್  ಕುಮಾರ್ ಎಂಬುವವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.

Tap to resize

Latest Videos

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾಗೆ ಹವಾಲಾ ಲಿಂಕ್; ಚಾಲಾಕಿ ರವಿಶಂಕರ್‌ನಿಂದ ಸ್ಫೋಟಕ ಮಾಹಿತಿ

 ಆರೋಪಿಗಳಿಂದ ಒಟ್ಟು ಮೂರು ಲಕ್ಷ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ‌ ಚಿಂತಾಮಣಿ ‌ಗ್ರಾಮಾಂತರ‌ ಠಾಣೆ ಸಿಪಿಐ ಕೆ.ಎಂ ಶ್ರೀನಿವಾಸ್, ಪಿಎಸ್ಐ ನರೇಶ್ ನಾಯ್ಕ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

click me!