IPL ಫೀವರ್ : ಲಕ್ಷ ಲಕ್ಷ ಬೆಟ್ಟಿಂಗ್ ದಂಧೆಗೆ ಕಡಿವಾಣವೇ ಇಲ್ಲ

By Kannadaprabha News  |  First Published Sep 22, 2020, 10:22 AM IST

IPL ಜ್ವರ ಈಗ ಎಲ್ಲೆಡೆ ಶುರುವಾಗಿದ್ದು, ಇದರಲ್ಲಿ ಲಕ್ಷ ಲಕ್ಷ ಹಣ ಹಾಕಿ ಮನೆ ಮಠ ಬೆಟ್ಟಿಂಗ್ ಕಟ್ಟಿ ತೊರೆಯುವ ಹಂತಕ್ಕೂ ಬಂದಿದ್ದಾರೆ. 


ವರದಿ : ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಸೆ.22):  ಕ್ರಿಕೆಟ್‌ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿರುವ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಒಂದು ಕಡೆ ಭಾರೀ ಸುದ್ದು ಮಾಡುತ್ತಿದ್ದರೆ ಮತ್ತೊಂದಡೆ ಜಿಲ್ಲೆಯಲ್ಲಿ ಐಪಿಎಲ್‌ ಕ್ರಿಕೆಟ್‌ ಶುರುವಾಗಿದ್ದೇ ತಡ ಸದ್ದಿಲ್ಲದೇ ಬೆಟ್ಟಿಂಗ್‌ ದಂಧೆ ವೇಗ ಪಡೆದುಕೊಂಡಿದೆ.

Tap to resize

Latest Videos

ಜಿಲ್ಲೆಯಲ್ಲಿ ಕ್ರಿಕೆಟ್‌ ಪ್ರೇಮಿಗಳಲ್ಲಿ ಐಪಿಎಲ್‌ ಜ್ವರ ತಾರಕಕ್ಕೇರಿದ್ದು ವೇಳಾಪಟ್ಟಿಯಂತೆ ನಡೆಯುತ್ತಿರುವ ಐಪಿಎಲ್‌ ಪಂದ್ಯಾವಳಿ ವೇಳೆ ವಿವಿಧ ತಂಡಗಳ ನಡುವೆ ನಡೆಯುವ ರೋಚಕ ಪಂದ್ಯಾವಳಿಗಳ ವೇಳೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್‌ ದಂಧೆ ನಡೆಯುತ್ತಿದ್ದು, ಯಾರು ಹೇಳೋರು ಕೇಳೋರು ಇಲ್ಲವಾಗಿದೆ.

ಪೋಷಕರಿಗೆ ಫಜೀತಿ:

ಜಿಲ್ಲೆಯಲ್ಲಿ ಸಹವಾಗಿಯೆ ಕ್ರಿಕೆಟ್‌ ದಂಧೆಯ ಮೋಹಕ ಜಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು ಮುಳಗಿರುವುದು ಪೋಷಕರನ್ನೆ ತೀವ್ರ ಕಂಗಾಲಾಗಿಸಿದೆ. ಹಲವು ದಿನಗಳಿಂದ ಐಪಿಎಲ್‌ ಕ್ರಿಕೆಟ್‌ ನಡೆಯುತ್ತಿರುವುದರಿಂದ ಕಾಲೇಜು ವಿದ್ಯಾರ್ಥಿಗಳು ಬೆಟ್ಟಿಂಗ್‌ ದಂಧೆಯಲ್ಲಿ ತೆರೆಮರೆಯಲ್ಲಿ ತೊಡಗಿ ಪೋಷಕರು ಕೂಡಿಟ್ಟಹಣಕ್ಕೆ ಸಂಚಕಾರ ತರುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ಅಂದಾಜಿನ ಲೆಕ್ಕಾಚಾರದಲ್ಲಿ ಪ್ರತಿ ದಿನ ಲಕ್ಷಾಂತರ ರು., ಬೆಟ್ಟಿಂಗ್‌ ದಂಧೆಯಲ್ಲಿ ಹಣ ಹೂಡಿಕೆ ಮಾಡಲಾಗುತ್ತಿದೆ.

ಐಪಿಎಲ್ 2020: ಚೆನ್ನೈ ಸೂಪರ್‌ ಕಿಂಗ್ಸ್‌ಗಿಂದು ರಾಜಸ್ಥಾನ ರಾಯಲ್ಸ್ ಚಾಲೆಂಜ್..! ..

ವಿಶೇಷವಾಗಿ ಚಿಂತಾಮಣಿ ನಗರ, ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರು ಪಟ್ಟಣಗಳಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಹೆಚ್ಚು. ಬಹುತೇಕತಕರು ಬೆಟ್ಟಿಂಗ್‌ ದಂಧೆಗೆ ಮೊಬೈಲ್‌ ಎಸ್‌ಎಂಎಸ್‌, ವಾಟ್ಸ್‌ಆಫ್‌, ಇ-ಮೇಲ್‌ ಇಡಿಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದು ಸೈಬರ್‌ ಕೇಂದ್ರಗಳು ಬೆಟ್ಟಿಂಗ್‌ ದಂಧೆಯ ಅಡ್ಡೆಗಳಾಗಿವೆ. ಆದರೂ ಪೊಲೀಸರಿಗೆ ದಂಧೆಕೋರನ್ನು ಪತ್ತೆ ಮಾಡುವುದು ಸವಾಲಾಗಿದೆ.

ಬಾಲ್‌ ಟು ಬಾಲ್‌ ಬೆಟ್ಟಿಂಗ್‌:

ಜಿಲ್ಲೆಯಲ್ಲಿ ಐಪಿಎಲ್‌ ಬೆಟ್ಟಿಂಗ್‌ ದಂಧೆ ಈ ಹಿಂದೆ ಸಾಕಷ್ಟುಅವಘಡಗಳನ್ನು ಸೃಷ್ಠಿಸಿದೆ. ಎಷ್ಟೋ ಮಕ್ಕಳು ಮನೆಯಲ್ಲಿ ಹಣ ಕದ್ದು ಬೆಟ್ಟಿಂಗ್‌ನಲ್ಲಿ ತೊಡಗಿಸಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ಮಕ್ಕಳು ಪೋಷಕರಿಗೆ ಭಯಪಟ್ಟು ಮನೆ ತೊರೆದಿದ್ದಾರೆ. ಇನ್ನೂ ಕೆಲವರು ಸಣ್ಣಪುಟ್ಟಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವಿಶೇಷವಾಗಿ ಬೆಟ್ಟಿಂಗ್‌ ದಂಧೆಯಲ್ಲಿ ಬಾಲ್‌ ಟೂ ಬಾಲ್‌ ಬೆಟ್ಟಿಂಗ್‌ ಕಟ್ಟಲಾಗುತ್ತಿದೆ. ಜಿಲ್ಲೆಯ ಪೊಲೀಸ್‌ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ದಂಧೆಯನ್ನು ತಡೆಗಟ್ಟಬೇಕಿದೆ. ಇಲ್ಲದೇ ಹೋದರೆ ಇದರ ಪರಿಣಾಮಗಳು ಸಾಕಷ್ಟುಗಂಭೀರ ಸ್ವರೂಪ ಪಡೆಯಲಿವೆಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಆರ್‌ಸಿಬಿಗೆ ಜೈಕಾರ ಕೂಗಿದ ಸ್ಯಾಂಡಲ್‌ವುಡ್‌;ಅನೇಕ ವಿಡಿಯೋ ಹಾಡುಗಳು ಬಿಡುಗಡೆ!

 ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಬಗ್ಗೆ ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಿದೆ. ಈಗಾಗಲೇ ಚಿಂತಾಮಣಿ, ಚಿಕ್ಕಬಳ್ಳಾಪುರ ನಗರಗಳಲ್ಲಿ ಕಳೆದ ವರ್ಷ ಐಪಿಎಲ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಇಲಾಖೆ ಪಟ್ಟಿಯಲ್ಲಿರುವ ಬೆಟ್ಟಿಂಗ್‌ ದಂಧೆಕೋರರನ್ನು ಠಾಣೆಗೆ ಪ್ರತಿ ದಿನ ಬಂದು ಸಹಿ ಹಾಕಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬೆಟ್ಟಿಂಗ್‌ ದಂಧೆ ನಡೆಸುವರ ಪರೇಡ್‌ ನಡೆಸಿ ಇನ್ನಷ್ಟುಎಚ್ಚೆರಿಕೆ ನೀಡಲಾಗುವುದು.

ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

 ಇತ್ತೀಚಿನ ದಿನಗಳಲ್ಲಿ ಐಪಿಎಲ್‌ ಕ್ರಿಕೆಟ್‌ ದಂಧೆ ಕಾಲೇಜು ಹುಡುಗರನ್ನು ಹೆಚ್ಚು ಬಲಿ ಪಡೆದುಕೊಳ್ಳುತ್ತಿದೆ. ಕೆಲ ವಿದ್ಯಾರ್ಥಿಗಳು ಬೆಟ್ಟಿಂಗ್‌ ಮೋಹದಲ್ಲಿ ಸಿಲುಕಿ ಪೋಷಕರು ಕಷ್ಟಪಟ್ಟು ದುಡಿದು ಸಂಪಾದಿಸಿದ ಲಕ್ಷಾಂತರ ರು, ಹಣವನ್ನು ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿ ಕೈ ಸುಟ್ಟುಕೊಂಡು ಕುಟುಂಬಗಳನ್ನು ಬೀದಿಗೆ ತರುತ್ತಿದ್ದಾರೆ. ಪೊಲೀಸ್‌ ಇಲಾಖೆ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕಬೇಕು.

ಎನ್‌.ಚಂದ್ರಶೇಖರ್‌. ಕಾಲೇಜು ಉಪನ್ಯಾಸಕರು.

click me!