28 ವರ್ಷಗಳ ನಂತ್ರ ಒಂದೆಡೆ ಸೇರಿ ಶಿಕ್ಷಕರಿಗೆ ಪಾದಪೂಜೆ ನೆರವೇರಿಸಿದ ವಿದ್ಯಾರ್ಥಿಗಳು

Published : May 27, 2026, 09:35 AM IST
Davanagere Students

ಸಾರಾಂಶ

ಡಿಆರ್‌ಆರ್ ಶಾಲೆಯ 1998ರ ಸಾಲಿನ ಕನ್ನಡ ಮಾಧ್ಯಮದ ಹಿರಿಯ ವಿದ್ಯಾರ್ಥಿಗಳು 28 ವರ್ಷಗಳ ನಂತರ ಒಂದೆಡೆ ಸೇರಿದರು. ಈ ಸ್ನೇಹ ಸಮ್ಮಿಲನದಲ್ಲಿ ತಮ್ಮ ಶಿಕ್ಷಕರಿಗೆ ಪಾದಪೂಜೆ ನೆರವೇರಿಸಿ, ಗುರುಕಾಣಿಕೆ ಸಲ್ಲಿಸುವ ಮೂಲಕ ಅಪೂರ್ವ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ದಾವಣಗೆರೆ: ನಗರದ ಡಿಆರ್‌ಆರ್ ಶಾಲೆಯಲ್ಲಿ 28 ವರ್ಷಗಳ ನಂತರ 1998ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಕನ್ನಡ ಮಾಧ್ಯಮದ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಶಾಲೆ ಆವರಣದಲ್ಲಿ ನಡೆಯಿತು. ಹಳೆಯ ವಿದ್ಯಾರ್ಥಿಗಳು ಸೇರಿ ಶಿಕ್ಷಕರ ಪಾದಪೂಜೆ ನೆರವೇರಿಸಿ ಗುರುಕಾಣಿಕೆ ಸಲ್ಲಿಸಿದರು.

ಶಾಲೆ ಮುಖ್ಯ ಶಿಕ್ಷಕ ಭೋಜರಾಜ್ ಯಾದವ್‌ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಗುರುವಂದನೆಯಂಥ ಕಾರ್ಯಕ್ರಮ ಮಾಡುತ್ತಿರುವುದು ಅವರಿಗೆ ನಮ್ಮ ಶಾಲೆ ಕಲಿಸಿದ ಸಂಸ್ಕಾರದ ಧ್ಯೋತಕವಾಗಿದೆ ಎಂದರು.

ಶಾಲೆ ಕಲಿಸಿದ ಸಂಸ್ಕೃತಿ ಮತ್ತು ಸಂಸ್ಕಾರ

ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಈ ಹಿರಿಯ ವಿದ್ಯಾರ್ಥಿಗಳು 28 ವರ್ಷಗಳ ಹಿಂದೆ ಓದಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇದು ಅವರಿಗೆ ನಮ್ಮ ಶಾಲೆ ಕಲಿಸಿದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿವಿಧ ಹುದ್ದೆಗಳನ್ನು ಅಲಂಕರಿಸಿ ತಮ್ಮ ಜೀವನವನ್ನು ಕಟ್ಟಿಕೊಂಡು ತಮಗೆ ಮತ್ತು ತಾವು ಓದಿದ ಶಾಲೆಗೆ ಹೆಸರು ಮತ್ತು ಕೀರ್ತಿ ತಂದಿರುವುದು ತುಂಬಾ ಹೆಮ್ಮೆಯ ವಿಷಯ. ಇಂದು ಸಚಿವರಾಗಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಹಾ ಇದೇ ಶಾಲೆ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿದರು.

ಇದನ್ನೂ ಓದಿ: 

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ನಾಗಪನಿ ನಾಯಕ್, ಪ್ರದೀಪ್, ಪ್ರಭುದೇವ್, ಹಿರಿಯ ವಿದ್ಯಾರ್ಥಿಗಳಾದ ದೀಪ, ಹೇಮಾ, ರಾಘವೇಂದ್ರ, ತಿಪ್ಪೇಶ್ ಸೇರಿದಂತೆ ಸುಮಾರು 48 ಹಿರಿಯ ವಿದ್ಯಾರ್ಥಿಗಳು ಮತ್ತು 26 ಶಿಕ್ಷಕರು ಭಾಗವಹಿಸಿದ್ದರು.

ಇದನ್ನೂ ಓದಿ: 60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ

PREV
Read more Articles on
click me!

Recommended Stories

ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲನ್ನು ಕುಷ್ಟಗಿಯವರೆಗೆ ವಿಸ್ತರಿಸಲು ಹೆಚ್ಚಿದ ಒತ್ತಾಯ, ಪ್ರಯೋಜನವೇನು?
Uttara Kannada ಮುಂಡಗೋಡ ಆಕಾಶದಲ್ಲಿ ಏಕಾಏಕಿ ಪೈಟರ್ ಜೆಟ್‌ ಹಾರಾಟ: ಜನರಲ್ಲಿ ಗೊಂದಲ