ಉಡುಪಿ ಜಿಲ್ಲೆಯಲ್ಲಿ ನಗರಸಭಾ ಸದಸ್ಯ, ವೈದ್ಯ ದಂಪತಿ, ಹೊಟೇಲ್ ಮಾಲೀಕ, ಹೊಟೇಲ್ ಗ್ರಾಹಕ, ಆಟೋ ಚಾಲಕ, ಪಂಚಾಯಿತಿ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ. ಹೊರಗಿನಿಂದ ಬಂದವರಿಗಿಂತಲೂ, ಅವರಿಂದ ಸೋಂಕು ಹರಡಿದ ಸ್ಥಳೀಯರ ಸಂಖ್ಯೆ ಹೆಚ್ಚುತ್ತಿದೆ.
ಉಡುಪಿ(ಜು.05): ಉಡುಪಿ ಜಿಲ್ಲೆಯಲ್ಲಿ ನಗರಸಭಾ ಸದಸ್ಯ, ವೈದ್ಯ ದಂಪತಿ, ಹೊಟೇಲ್ ಮಾಲೀಕ, ಹೊಟೇಲ್ ಗ್ರಾಹಕ, ಆಟೋ ಚಾಲಕ, ಪಂಚಾಯಿತಿ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ. ಹೊರಗಿನಿಂದ ಬಂದವರಿಗಿಂತಲೂ, ಅವರಿಂದ ಸೋಂಕು ಹರಡಿದ ಸ್ಥಳೀಯರ ಸಂಖ್ಯೆ ಹೆಚ್ಚುತ್ತಿದೆ.
ಶನಿವಾರ ಜಿಲ್ಲೆಯಲ್ಲಿ 19 ಮಂದಿಗೆ ಸೋಂಕು ಪತ್ತೆಯಾಗಿದೆ. ಅವರಲ್ಲಿ ಸ್ಥಳೀಯರೇ 12 ಮಂದಿ, ಉಳಿದ 3 ಮಂದಿ ಬೆಂಗಳೂರು, 3 ಮಂದಿ ಮಂಗಳೂರು ಮತ್ತು ಒಬ್ಬರು ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಾಸ್ ಬಂದವರಾಗಿದ್ದಾರೆ. ಅವರಲ್ಲಿ 11 ಮಂದಿ ಪುರುಷರು, 7 ಮಂದಿ ಮಹಿಳೆಯರು ಮತ್ತು 4 ವರ್ಷದ ಬಾಲಕಿ ಇದ್ದಾರೆ.
undefined
ದಕ್ಷಿಣ ಕನ್ನಡದಲ್ಲಿ ಮತ್ತೆ ಮೂವರು ಬಲಿ, ಬಿಜೆಪಿ ಮುಖಂಡ ಸೇರಿ 75 ಪಾಸಿಟಿವ್
ಮಲ್ಪೆ ಭಾಗದ ನಗರಸಭಾ ಸದಸ್ಯರೊಬ್ಬರು ಸ್ವಯಂಪ್ರೇರಿತರಾಗಿ ಪರೀಕ್ಷೆಗೊಳಪಟ್ಟಿದ್ದು, ಅವರಿಗೆ ಸೋಂಕಿರುವುದು ದೃಢಪಟ್ಟಿದೆ. ಅದೇ ರೀತಿ ಮಣಿಪಾಲದ ವೈದ್ಯ ದಂಪತಿಗೂ ಸೋಂಕಿರುವುದು ಪತ್ತೆಯಾಗಿದೆ. ಬೈಂದೂರಿನ ಪಂಚಾಯಿತಿ ಕಂಪ್ಯೂಟರ್ ಆಪರೇಟರ್‌ಗೂ ಸೋಂಕು ಬಂದಿದೆ. ಉಡುಪಿಯ ಮೀನು ಹೊಟೇಲ್ ಮಾಲೀಕರಿಗೆ ಸೋಂಕು ದೃಢಪಟ್ಟಿದೆ. ಈ ಸೋಂಕಿತರ ಮನೆ, ಕಚೇರಿ, ಹೊಟೇಲ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 1277 ಆಗಿದ್ದು, ಅವರಲ್ಲಿ 1114 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು 160 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಸಾವನ್ನಪ್ಪಿದ್ದಾರೆ.
ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ
ಶನಿವಾರ 752 ವರದಿಗಳು ಬಂದಿದ್ದು, ಅವುಗಳಲ್ಲಿ 19 ಪಾಟಿಸಿವ್, 733 ನೆಗೆಟಿವ್ ಬಂದಿವೆ. ಇನ್ನೂ 1712 ವರದಿಗಳು ಕೈಸೇರುವುದಕ್ಕೆ ಬಾಕಿಯಾಗಿವೆ. ಪ್ರಸ್ತುತ 1034 ಮಂದಿ ಹೋಂ ಕ್ವಾರಂಟೈನ್, 109 ಮಂದಿ ಐಸೋಲೇಷನ್ ವಾರ್ಡ್‌ನಲ್ಲಿದ್ದಾರೆ.
ಆತಂಕ ಹೆಚ್ಚಿಸುತ್ತಿದೆ ಶಂಕಿತರ ಸಂಖ್ಯೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಆದರೆ ಶಂಕಿತರ ಸಂಖ್ಯೆ ಮಾತ್ರ ದಿನೇದಿನೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಶುಕ್ರವಾರ 862 ಮಂದಿ ಶಂಕಿತರ ಮಾದರಿಗಳನ್ನು ಸಂಗ್ರಹಿಸಲಾಗಿದ್ದರೆ, ಶನಿವಾರ ಬರೋಬ್ಬರಿ 1047 ಮಂದಿ ಶಂಕಿತರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಈಗ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅಚ್ಚರಿಯೇನಿಲ್ಲ. ಶನಿವಾರ 957 ಮಂದಿ ಹಾಟ್‌ಸ್ಪಾಟ್‌ನಿಂದ ಬಂದವರು, 84 ಮಂದಿ ಸೋಂಕಿತರ ಸಂಪರ್ಕಿತರು, 3 ಮಂದಿ ಶೀತಜ್ವರ ಮತ್ತು 3 ಮಂದಿ ಉಸಿರಾಟದ ತೊಂದರೆ ಇರುವವರ ಮಾದರಿಗಳನ್ನು ಕಳುಹಿಸಲಾಗಿದೆ.