ಪಂಚಮಲಸಾಲಿ 2ಎ ಮೀಸಲಾತಿ: ಬಿಜೆಪಿ ಸರ್ಕಾರ ಮಾಡಿದ ಸ್ಪಂದನೆ ಸಿದ್ದರಾಮಯ್ಯ ಸರ್ಕಾರ ಮಾಡ್ತಿಲ್ಲ, ಕೂಡಲ ಶ್ರೀ

By Girish Goudar  |  First Published Aug 30, 2024, 6:18 PM IST

ನ್ಯಾಯಾಂಗದ ಮೊರೆ ಹೋಗಲು ಮುಂದಾಗಿದ್ದೇವೆ. ಅದಕ್ಕಾಗಿ ಸಮಾಜದ ವಕೀಲರ ಸಭೆ ನಡೆಸಿ ಚಿಂತನೆ ನಡೆಸುತ್ತಿದ್ದೇವೆ. ಸೆಪ್ಟೆಂಬರ್ 22 ಕ್ಕೆ ಬೆಳಗಾವಿಯಲ್ಲಿ ವಕೀಲರ ಮಹಾಪರಿಷತ್ ಸಭೆ ನಡೆಸುತ್ತಿದ್ದೇವೆ. ಪ್ರತಿ ಸಲ ನಮ್ಮ ಸಮಾಜದ ಸಚಿವರನ್ನು ಕೇಳಿದಾಗ ಮೀಟಿಂಗ್ ಮಾಡ್ತೇವೆ ಅಂತ ಹೇಳ್ತಾರೆ.  ಆದ್ರೆ ಯಾವ ಪ್ರಯತ್ನವನ್ನು ಮಾಡುತ್ತಿಲ್ಲಾ. ಪಂಚಮಸಾಲಿ ಹೋರಾಟದಿಂದ ಅನೇಕರು ಗೆದ್ದಿದ್ದಾರೆ. ಅದರ ಋಣ ತೀರಿಸೋ ಕೆಲಸವನ್ನು ಶಾಸಕರು, ಸಚಿವರು ಮಾಡಬೇಕು: ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃುಂತ್ಯುಂಜಯ್ಯ ಸ್ವಾಮೀಜಿ 
 


ಕೊಪ್ಪಳ(ಆ.30): ಸಿದ್ದರಾಮಯ್ಯ ಸರ್ಕಾರದಿಂದ ನಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅಧಿವೇಶನದಲ್ಲಿ ಮಾತನಾಡಲು ನಮ್ಮ ಸಮಾಜದ ಶಾಸಕರಿಗೆ ಹೇಳಿದ್ದೆವು. ಆದ್ರೆ ಯಾರು ಈ ಬಗ್ಗೆ ಮಾತನಾಡಲ್ಲಿಲ್ಲ. ಹಿಂದಿನ ಸರ್ಕಾರದಲ್ಲಿ ಶಾಸಕರು ಮಾತನಾಡುತ್ತಿದ್ದರು. ಶಾಸಕರ ವರ್ತನೆ ಬಗ್ಗೆ ಸಮಾಜದ ಜನರು ನಿರಾಸೆಗೊಂಡಿದ್ದಾರೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃುಂತ್ಯುಂಜಯ್ಯ ಸ್ವಾಮೀಜಿ ಎಂದು ತಿಳಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಯಮೃುಂತ್ಯುಂಜಯ್ಯ ಸ್ವಾಮೀಜಿ ಅವರು,  ನ್ಯಾಯಾಂಗದ ಮೊರೆ ಹೋಗಲು ಮುಂದಾಗಿದ್ದೇವೆ. ಅದಕ್ಕಾಗಿ ಸಮಾಜದ ವಕೀಲರ ಸಭೆ ನಡೆಸಿ ಚಿಂತನೆ ನಡೆಸುತ್ತಿದ್ದೇವೆ. ಸೆಪ್ಟೆಂಬರ್22 ಕ್ಕೆ ಬೆಳಗಾವಿಯಲ್ಲಿ ವಕೀಲರ ಮಹಾಪರಿಷತ್ ಸಭೆ ನಡೆಸುತ್ತಿದ್ದೇವೆ. ಪ್ರತಿ ಸಲ ನಮ್ಮ ಸಮಾಜದ ಸಚಿವರನ್ನು ಕೇಳಿದಾಗ ಮೀಟಿಂಗ್ ಮಾಡ್ತೇವೆ ಅಂತ ಹೇಳ್ತಾರೆ.  ಆದ್ರೆ ಯಾವ ಪ್ರಯತ್ನವನ್ನು ಮಾಡುತ್ತಿಲ್ಲಾ. ಪಂಚಮಸಾಲಿ ಹೋರಾಟದಿಂದ ಅನೇಕರು ಗೆದ್ದಿದ್ದಾರೆ. ಅದರ ಋಣ ತೀರಿಸೋ ಕೆಲಸವನ್ನು ಶಾಸಕರು, ಸಚಿವರು ಮಾಡಬೇಕು ಎಂದು ತಿಳಿಸಿದ್ದಾರೆ.

Latest Videos

undefined

ಪಂಚಮಸಾಲಿ ಮೀಸಲಾತಿ ಪರಿಶೀಲಿಸುವ ಭರವಸೆ ನೀಡಿದ ಸಿದ್ದರಾಮಯ್ಯ: ಕೂಡಲ ಶ್ರೀ

ಹಿಂದಿನ ಸರ್ಕಾರ ನೀಡಿದ್ದ 2 ಡಿ ನೀಡಿದ್ರೆ ಸ್ವಲ್ಪವಾದ್ರು ಅನಕೂಲವಾಗುತ್ತಿತ್ತು. ಹಿಂದಿನ ಸರ್ಕಾರ ಮಾಡಿದ ಸ್ಪಂದನೆಯನ್ನು ಈ ಸರ್ಕಾರ ಮಾಡ್ತಿಲ್ಲಾ ಎಂದು ಹೇಳಿದ್ದಾರೆ. 

ಗಂಗಾವತಿಯಲ್ಲಿ ಬೀದಿ ದೀಪ ಕಂಬಗಳ ಧರ್ಮ ದಂಗಲ್‌ ವಿಚಾರದ ಬಗ್ಗೆ ಮಾತನಾಡಿದ ಶ್ರೀಗಳು, ಆಯಾ ಧರ್ಮಗಳ ಕ್ಷೇತ್ರಗಳಲ್ಲಿ ಅವರ ಧರ್ಮದ ಸಂಕೇತಗಳನ್ನು ಅಳವಡಿಸಲು ಯಾವುದೇ ತೊಂದರೆ ಇಲ್ಲಾ. ಅನ್ಯ ಧರ್ಮೀಯರು ಅದನ್ನು ಪ್ರಶ್ನಿಸೋ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ. 

ಶಾಸಕ ಯತ್ನಾಳ ಫ್ಯಾಕ್ಟರಿಗೆ ಪರವಾನಗಿ ನೀಡದೇ ಇರೋ ವಿಚಾರದ ಬಗ್ಗೆ ಮಾತನಾಡಿದ ಸ್ವಾಮೀಜಿಗಳು, ರೈತರಿಗೆ ಪೂರಕವಾಗಿರುವ ಕಾರ್ಖಾನೆ ಮಾಡಿದ್ದಾರೆ. ದುರುದ್ದೇಶದಿಂದ ಅದನ್ನು ಮುಚ್ಚುವ ಕೆಲಸ ಮಾಡಬಾರದು. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ. 

click me!