ತುಮಕೂರು: ಟ್ರಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು

Published : May 11, 2019, 08:29 PM ISTUpdated : May 11, 2019, 08:35 PM IST
ತುಮಕೂರು: ಟ್ರಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು

ಸಾರಾಂಶ

ಟ್ರಾಕ್ಟರ್ ಪಲ್ಟಿಯಾಗಿ ನಾಲ್ವರ ಸಾವು| ತುಮಕೂರು ಜಿಲ್ಲೆಯ ತಿಪಟೂರು ತಾ. ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ಸಂಭವಿಸಿದ ಘಟನೆ| ಕಡಿದಾದ ಇಳಿಜಾರು ಇದ್ದದ್ದರಿಂದ ನಿಯಂತ್ರಣಕ್ಕೆ ಬಾರದ ಟ್ಯಾಕ್ಟರ್ ಪಲ್ಟಿ.

ತುಮಕೂರು, [ಮೇ.11]:  ಟ್ರಾಕ್ಟರ್ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಇಂದು [ಶನಿವಾರ] ತುಮಕೂರಿನ ತಿಪಟೂರು ತಾಲ್ಲೂಕು ಹತ್ಯಾಳು ನರಸಿಂಹಸ್ವಾಮಿ ಬೆಟ್ಟದಲ್ಲಿ ನಡೆದಿದೆ.

ಮೃತರು ಮತ್ತು ಗಾಯಾಳುಗಳು ಚಿಕ್ಕನಾಯಕನಹಳ್ಳಿ ತಾಲೂಕಿನ‌ ಮಾದಾಪುರ ಗ್ರಾಮದವರು.  ಟ್ರಾಕ್ಟರ್ ಚಾಲಕ ಶಿವಲಿಂಗಪ್ಪ (45), ಶಂಕರಮ್ಮ(45), ದೊಡ್ಡಲಿಂಗಯ್ಯ (40) ಮೃತ ದುರ್ದೈವಿಗಳು. 

7 ವರ್ಷದ ಭುವನ್ ಆಸ್ಪತ್ರೆಗೆ ತೆರಳುವಾಗ ಮಾರ್ಗ ‌ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಟ್ರಾಕ್ಟರ್​​ನಲ್ಲಿ ಸುಮಾರು 12 ಜನರಿದ್ದರು ಎಂದು ತಿಳಿದುಬಂದಿದೆ.

ನರಸಿಂಹ ಸ್ವಾಮಿ ದೇವಾಲಯದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.  ಕಡಿದಾದ ಇಳಿಜಾರು ಇದ್ದಿದ್ದರಿಂದ ನಿಯಂತ್ರಣಕ್ಕೆ ಬಾರದ ಟ್ರಾಕ್ಟರ್ ಪಲ್ಟಿಯಾಗಿದೆ. 

PREV
click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
19ರ ಯುವಕನ ಕಾರು ಚಾಲನೆಗೆ ಹೋಯ್ತು ಪಾದಾಚಾರಿ ಪ್ರಾಣ, ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ