ಗೌರಿಬಿದನೂರು ಮಾದರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಹಿನ್ನೆಲೆಯಲ್ಲಿ 17ನೇ ವಾರ್ಡ್ ಸೀಲ್‌ಡೌನ್| ಶೀಘ್ರದಲ್ಲಿಯೇ 1 ಲಕ್ಷ ಮೆಡಿಕಲ್ ಕಿಟ್‌ಗಳು ಬರಲಿದೆ| ಜಾಗತಿಕ ಮಟ್ಟದಲ್ಲಿ ಮೆಡಿಕಲ್ ಕಿಟ್‌ಗಳಿಗೆ ಪ್ರಸ್ತುತ ಬೇಡಿಕೆ ಹೆಚ್ಚಾಗಿರುವ ಕಾರಣ ಕಿಟ್ ಬರಲು ತಡ| ಪಿಸಿಆರ್ ಟೆಸ್ಟ್ ವರದಿಯೇ ನಿಖರತೆಯಾಗಿದ್ದು, ರಾಜ್ಯದಲ್ಲಿ ಮೂರರಿಂದ 16 ಲ್ಯಾಬ್‌ಗಳು: ಸಚಿವ ಡಾ.ಕೆ. ಸುಧಾಕರ್|
ಚಿಕ್ಕಬಳ್ಳಾಪುರ(ಏ.15): ನಗರದಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 17ನೇ ವಾರ್ಡ್‌ನ್ನು ಸಂಪೂರ್ಣ ಸೀಲ್‌ಡೌನ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ವಾರ್ಡ್‌ನ್ನು ಸೀಲ್‌ಡೌನ್ ಮಾಡಲು ಸಚಿವರು ಸೂಚನೆ ನೀಡಿದ್ದು, ಗೌರಿಬಿದನೂರು ಮಾದರಿಯಲ್ಲಿ ಕ್ರಮವನ್ನು ಮಂಗಳವಾರದಿಂದಲೇ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ವೈದ್ಯಕೀಯ ಕಿಟ್‌ಗಳು ಇನ್ನೂ ಬಂದಿಲ್ಲ, ಶೀಘ್ರದಲ್ಲಿಯೇ 1 ಲಕ್ಷ ಮೆಡಿಕಲ್ ಕಿಟ್‌ಗಳು ಬರಲಿದೆ. ಜಾಗತಿಕ ಮಟ್ಟದಲ್ಲಿ ಮೆಡಿಕಲ್ ಕಿಟ್‌ಗಳಿಗೆ ಪ್ರಸ್ತುತ ಬೇಡಿಕೆ ಹೆಚ್ಚಾಗಿರುವ ಕಾರಣ ಕಿಟ್ ಬರಲು ತಡವಾಗಿದೆ. ಪಿಸಿಆರ್ ಟೆಸ್ಟ್ ವರದಿಯೇ ನಿಖರತೆಯಾಗಿದ್ದು, ರಾಜ್ಯದಲ್ಲಿ ಮೂರರಿಂದ 16 ಲ್ಯಾಬ…ಗಳು ಮಾಡಿರುವುದಾಗಿ ಅವರು ಹೇಳಿದರು. 16ರಿಂದ 60 ಲ್ಯಾಬ್ ಮಾಡಲು ಮುಂದಾಗಿದ್ದು, ಪ್ರತಿನಿತ್ಯ 1 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ ಹೆಚ್ಚು ಟೆಸ್ಟ್‌ಗಳು ಮಾಡಬೇಕೆಂಬುದು ಸಿದ್ದರಾಮಯ್ಯ ಅವರ ಅಭಿಪ್ರಾಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸುಧಾಕರ್ ಹೇಳಿದರು.