'ಮುಂದಿನ ಚುನಾವಣೆಗೆ ಬಿಜೆಪಿಗೆ ಹೋದ 17 ಜನಕ್ಕಿಲ್ಲ ಟಿಕೆಟ್ '

By Kannadaprabha News  |  First Published Aug 16, 2021, 8:21 AM IST
  • ದಿನವೂ ಒಂದೊಂದು ಹೇಳಿಕೆ ನೀಡುವ ಬಿಜೆಪಿ ಮುಖಂಡರನ್ನು ಪಕ್ಷದವರೇ ನಿಯಂತ್ರಿಸಬೇಕು
  • ಮುಂದಿನ ಚುನಾವಣೆಯಲ್ಲಿ 17 ಮಂದಿ ವಲಸಿಗ ಮುಖಂಡರಿಗೆ ಟಿಕೆಟ್ ಸಿಗೋದು ಡೌಟ್
  • ನೈತಿಕ ಹೊಣೆ ಹೊತ್ತು ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ನೀಡಬೇಕಿತ್ತು

 ಅಥಣಿ (ಆ.116):  ಕೆ.ಎಸ್‌. ಈಶ್ವರಪ್ಪ ಹಾಗೂ ಸಿ.ಟಿ. ರವಿ ಅವರು ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದಾರೆ. ಅವರು ದಿನಾಲೂ ಒಂದೊಂದು ಹೇಳ್ತಾರೆ. ಅವರಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅದನ್ನು ಅವರ ಪಕ್ಷದವರೇ ನಿಯಂತ್ರಣ ಮಾಡಬೇಕು. ಅವರೆ ಹೇಳ್ತಾರೆ ತಮ್ಮದು ಶಿಸ್ತಿನ ಪಕ್ಷ ಎಂದು ಆದರೆ ಕೆಲವರ ಹೇಳಿಕೆ ನೋಡಿದರೆ ಶಿಸ್ತಿನ ಪಕ್ಷಕ್ಕೆ ಚ್ಯುತಿ ಬರುವಂತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಅವರು ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್‌, ಡಿಸೇಲ್‌, ಅಡುಗೆ ಗ್ಯಾಸ್‌ ಬೆಲೆ ನಿಯಂತ್ರಣ ಆಗ್ತಿಲ್ಲ, ನಿಯಂತ್ರಣಕ್ಕೆ ಸರಿಯಾದ ಸಮಯ ಬರಬೇಕು ಅಂದರೆ 2023-24ರ ವರೆಗೆ ಕಾಯಬೇಕು ಎಂದರು. ಈಗಾಗಲೇ ನಮ್ಮ ಪಕ್ಷ ಬಲಸಂವರ್ಧನೆಗೆ ಒತ್ತು ಕೊಟ್ಟಿದ್ದು, ಕೆಪಿಸಿಸಿ ವತಿಯಿಂದ ಕೋವಿಡ್‌ ಸಂದರ್ಭದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೇವೆ ಎಂದರು.

Latest Videos

undefined

ಖಾತೆ ಕ್ಯಾತೆ ಮಧ್ಯೆ ಮೊದಲ ಸಲ ಸಚಿವರಾದವರಿಗೆ ಪ್ರಮುಖ ಖಾತೆ ಹುಡುಕಿಕೊಂಡು ಬಂದವು

ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಕರಣ ವಿರುದ್ಧ ನಮ್ಮಷ್ಟುಯಾರೂ ಪ್ರತಿಭಟನೆ ಮಾಡಿಲ್ಲ. ಅವರು ಆರೋಪ ಬಂದ ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗಿತ್ತು. ಇದರಿಂದ ಬಿಜೆಪಿಗೆ ನೈತಿಕತೆ ಇಲ್ಲ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರು ರಾಜೀನಾಮೆ ಕೊಟ್ಟು ತನಿಖೆ ಆಗಲಿ ಎಂದು ಹೇಳಬೇಕಿತ್ತು ಎಂದು ಹೇಳಿದರು.

ಕಳೆದ ಮೂವತ್ತು ವರ್ಷಗಳಿಂದ ಜಾರಕಿಹೊಳಿ ಕುಟುಂಬದವರಿಗೆ ಪ್ರತಿ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕುತ್ತಿತ್ತು. ಆದರೆ ಈ ಬಾರಿ ಯಾರಿಗೂ ಸಚಿವ ಸ್ಥಾನ ನೀಡದೇ ಇರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಾರಕಿಹೊಳಿ ಮನೆತನಕ್ಕೆ ಅಧಿಕಾರ ಸಿಗಬೇಕು ಎಂದು ಯಾವ ಸಂವಿಧಾನದಲ್ಲೂ ಇಲ್ಲ. ಅದು ಜನರ ಹಾಗೂ ಪಕ್ಷದ ಮುಖಂಡರ ತೀರ್ಮಾನ, ಹಾಗೆಯೇ ಈಗಾಗಲೇ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದ 17 ಜನರಿಗೆ ಟಿಕೆಟ್‌ ಸಿಗೋದು ಕಷ್ಟಟಿಕೆಟ್‌ ಪಡೆಯಲು ಅವರು ಹರಸಾಹಸ ಮಾಡಬೇಕಾಗುತ್ತದೆ. ನೋಡ್ತಾಯಿರಿ ಅಥಣಿಯವರೂ ಸಹ ಪಡುವ ಕಷ್ಟವನ್ನು ಎಂದರು.

ಈ ವೇಳೆ ಮಾಜಿ ಶಾಸಕ ಭರಮಗೌಡ ಕಾಗೆ, ಕಾಂಗ್ರೆಸ್‌ ಮುಖಂಡರಾದ ಗಜಾನನ ಮಂಗಸೂಳಿ, ರಮೇಶ ಸಿಂದಗಿ, ಶ್ರೀಕಾಂತ ಪೂಜಾರಿ, ಎಸ್‌.ಕೆ. ಬುಟಾಳಿ, ಬಸವರಾಜ ಬುಟಾಳಿ ಸೇರಿದಂತೆ ಇತರರು ಇದ್ದರು.

click me!