ರಾಮನಗರ: ಕೃಷಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಂಸದ ಡಿ.ಕೆ.ಸುರೇಶ್..!

By Girish GoudarFirst Published Jul 9, 2022, 1:00 AM IST
Highlights

*  ನೀವು ಫಾರ್ಮೆಟ್‌ ಕೊಟ್ಟಿದ್ದೀರ ಅದನ ನೋಡಿಕೊಂಡು ಕಿವಿಗೆ ಹೂವು ಮೂಡಿದುಕೊಂಡು ಹೋಗಬೇಕಾ ನಾನು?
*  ರಾಮನಗರ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ ದಿಶಾ ಸಭೆ
*  ಮೂಕ ವಿಸ್ಮಿತರಾದ ಅಧಿಕಾರಿಗಳು
 

ವರದಿ - ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ(ಜು.09):  ಹೇಳುವಷ್ಟರಲ್ಲಿ ಸಾಕಾಯ್ತು..? ಅನ್ನೋ ಅಧಿಕಾರಿಗಳು ಇತ್ತ ವರದಿ ಜೊತೆಗೆ ಇಲಾಖೆಯ ಜನ್ಮ ಜಾಲಾಡಿಸುತ್ತಿರೋ ಸಂಸದ ಡಿಕೆ ಸುರೇಶ್, ಈ ಎಲ್ಲಾ ಘಟನೆ ನಡೆದಿದ್ದು ಇಂದು ರಾಮನಗರ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ಪುರಸ್ಕೃತ ಅನುದಾನದ ಬಳಕೆ ಬಗ್ಗೆ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಇಂದು ದಿಶಾ ಸಭೆ ಕರೆಯಲಾಯಿತು. ಸಭೆಯಲ್ಲಿ ಸಂಸದ ಡಿಕೆ ಸುರೇಶ್ ಅಧಿಕಾರಿಗಳ ಬೆವರಿಳಿಸಿದರು. ಒನ್ ಟು ಒನ್ ಮಾಹಿತಿ ಕೇಳುವ ಮೂಲಕ ಅಧಿಕಾರಿಗಳ ಚಳಿ ಬಿಡಿಸಿದರು. 

ರಾಮನಗರದಲ್ಲಿ ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಪತ್ತೆ!

ಒಂದು ಮಾಹಿತಿ ಕೇಳಿದ್ರೆ ನಿಮ್ಮ ಹತ್ತಿರ ಇಲ್ಲ ಅಂದ್ರೆ ನೀವು ತಹಶಿಲ್ದಾರ್ ಯಾಕೆ ಆಗಿದ್ದೀರಾ ಎಂದು ರಾಮನಗರ ತಹಶಿಲ್ದಾರ್ ವಿಜಯ್ ಕುಮಾರ್ ಅವರಿಗೆ ತರಾಟೆ ತೆಗದುಕೊಂಡ್ರು, ಮತ್ತೊಂದು ಕಡೆ ಕೃಷಿ ಇಲಾಖೆಯಲ್ಲಿ ಮಳೆ ಪ್ರಮಾಣ, ಬಿತ್ತನೆ ಬಿಜ, ಯೂರಿಯಾ ಸಂಭಂದ ಸರಿಯಾಗಿ ಮಾಹಿತಿ ‌ನೀಡದ ಜಿಲ್ಲಾ ಕೃಷಿ ಅಧಿಕಾರಿ ಮೇಲೆ ಗರಂ ಆಗಿ ನೀನು ಯಾಕಿದ್ಯಾ ನಿನ್ನ ಆಫೀಸ್ ಮುಚ್ಚಿಕೊಂಡು ಹೋಗು ಅಂದ್ರು ಇಂದು ಬೆಳಿಗ್ಗೆ 11 ಘಂಟೆಗೆ ಸಭೆ ಆರಂಭವಾಯ್ತು ಸಭೆ ಆರಂಭವಾಗ್ತಿದ್ದಂತೆ ಅಧಿಕಾರಿಗಳಿಗೆ ಚಾಟಿ ಬೀಸಿದ್ರು, ಕೇವಲ ಪುಸ್ತಕದಲ್ಲಿ ಇರೋದನ್ನ ಮಾಹಿತಿ ನೀಡಿದ್ರೆ ಸಾಲದು, ಎಲ್ಲೆಲ್ಲೆ ಕೆಲಸ ಆಗಿದೆ, ಯಾವ ತಾಲ್ಲೂಕಿನಲ್ಲಿ ಎಷ್ಟು ಕೆಲಸವಾಗಿದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಉತ್ತರಿಸುವಂತೆ ತಾಕೀತು ಮಾಡಿದ್ರು.ಇನ್ನೂ ಕೃಷಿ ಇಲಾಖೆಯ ವಿವಿಧ ಯೋಜನೆಗೆ ಆನ್‌ಲೈನ್ ಮೂಲಕ ಮಾಹಿತಿ ತುಂಬುವ ವಿಚಾರ ಪ್ರಸ್ತಾಪದ ವೇಳೆ ಮಾತನಾಡಿದ ಸಂಸದ ಡಿಕೆ ಸುರೇಶ್ ಅಯೋ ಓಎಂಆರ್ ಶೀಟ್ ಬದಲಾವಣೆ ಮಾಡಿದ್ದಾರೆ.

ಇನ್ನ ಇದ್ಯಾವ ಲೆಕ್ಕ ಬಿಡಯ್ಯ ಪೊಲೀಸ್ ಡಿಪಾರ್ಟ್‌ಮೆಂಟ್ ಓಎಂಆರ್ ಶೀಟ್ ಬದಲಾವಣೆ ಮಾಡ್ತಾರೆ ಕಂಪ್ಯೂಟರ್ ಎಲ್ಲಾ ಮ್ಯಾನ್ ಮೇಡ್ ನಿನಿನ್ನ ಬುದ್ದಿಗಿಂತ ಕಂಪ್ಯೂಟರ್ ಏನ್ ವರ್ಕ್ ಆಗಲ್ಲ ನೀನು ಏನ್ ಮಾಡ್ತಿಯಾ ಅದೆಲ್ಲ ಬೇಡ, ನೀನು ಸರಿಯಾಗಿ ಮಾಹಿತಿ ನೀಡಿ ಎಂದ್ರು, ಇತ್ತ ಇದೇ ಮೊದಲ ಬಾರಿಗೆ ಸಭೆ ಎದುರಿಸಿದ್ದ ಡಿಸಿ, ಸಿಇಒ, ಎಸ್ಪಿ ಸೇರಿದಂತೆ ಕೆಲ ಅಧಿಕಾರಿಗಳ ಮೂಕ ವಿಸ್ಮಿತರಾಗಿದ್ರು.
 

click me!