ಇಂದಿನಿಂದ 17 ದಿನ ವಿಜಯಪುರ ರೈಲು ಸಂಚಾರ ಭಾಗಶಃ ರದ್ದು

By Kannadaprabha News  |  First Published Jun 8, 2023, 4:30 AM IST

ಜೂನ್‌ 8 ರಿಂದ 24 ರವರೆಗೆ ವಿಜಯಪುರ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್‌ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲನ್ನು ಹಾಸನ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಭಾಗಶಃ ರದ್ದು. 


ಮಂಗಳೂರು(ಜೂ.08): ಮೈಸೂರು ವಿಭಾಗದ ಶ್ರೀವಾಗಿಲು ಮತ್ತು ಎಡಕುಮೇರಿ ನಿಲ್ದಾಣಗಳ ನಡುವಿನ ಹಳಿಗಳ ನಿರ್ವಹಣೆ (ಮೆಷಿನ್‌ ಟ್ಯಾಂಪಿಂಗ್‌) ಕಾಮಗಾರಿ ಸಲುವಾಗಿ ವಿಜಯಪುರ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು 17 ದಿನಗಳ ಕಾಲ ಭಾಗಶಃ ರದ್ದುಗೊಳಿಸಲಾಗುತ್ತಿದೆ.

ಜೂನ್‌ 8 ರಿಂದ 24 ರವರೆಗೆ ವಿಜಯಪುರ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್‌ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲನ್ನು ಹಾಸನ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. 

Tap to resize

Latest Videos

ಮಂಗಳೂರು: ಫ್ರೀ ವಿದ್ಯುತ್‌ ತಲೆ​ಬಿಸಿ ಮಧ್ಯೆ ದರ ಏರಿಸಿ ಮೆಸ್ಕಾಂ ಶಾಕ್‌!

ಈ ರೈಲು ಹಾಸನದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಜೂನ್‌ 9 ರಿಂದ ಜೂನ್‌ 25 ರವರೆಗೆ ಮಂಗಳೂರು ಜಂಕ್ಷನ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್‌-ವಿಜಯಪುರ ಡೈಲಿ ಎಕ್ಸ್‌ಪ್ರೆಸ್‌ ವಿಶೇಷ ರೈಲನ್ನು ಮಂಗಳೂರು ಜಂಕ್ಷನ್‌ ಮತ್ತು ಹಾಸನ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಈ ರೈಲು ತನ್ನ ನಿಗದಿತ ಸಮಯದಲ್ಲಿ ಹಾಸನದಿಂದ ಪ್ರಾರಂಭವಾಗಲಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

click me!