ಭಾನುವಾರ 6 ವರ್ಷದ ಗಂಡು ಹುಲಿ ರೇವಾ ಮತ್ತು ನೇತ್ರಾವತಿ ನಡುವೆ ಕಾದಾಟ ನಡೆದಿತ್ತು. ಇದರಲ್ಲಿ ನೇತ್ರಾವತಿ ತೀವ್ರ ಗಾಯಗೊಂಡಿತ್ತು. ರೇವಾ ಹುಲಿ ಬೆದೆಗೆ ಬಂದಿರುವುದರಿಂದ ನೇತ್ರಾವತಿ ಸಂಪರ್ಕಕ್ಕೆ ಬಂದಾಗ ನೇತ್ರಾವತಿ ರೇವಾ ಮೇಲೆರಗಿತ್ತು. ಆಗ ಎರಡೂ ಹುಲಿಗಳು ಕಾದಾಡಿದ್ದವು.
ಮಂಗಳೂರು(ಜೂ.08): ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಬುಧವಾರ ಸಂಭವಿಸಿದೆ.
15 ವರ್ಷದ ನೇತ್ರಾವತಿ ಹುಲಿಯೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದೆ. ಭಾನುವಾರ 6 ವರ್ಷದ ಗಂಡು ಹುಲಿ ರೇವಾ ಮತ್ತು ನೇತ್ರಾವತಿ ನಡುವೆ ಕಾದಾಟ ನಡೆದಿತ್ತು. ಇದರಲ್ಲಿ ನೇತ್ರಾವತಿ ತೀವ್ರ ಗಾಯಗೊಂಡಿತ್ತು. ರೇವಾ ಹುಲಿ ಬೆದೆಗೆ ಬಂದಿರುವುದರಿಂದ ನೇತ್ರಾವತಿ ಸಂಪರ್ಕಕ್ಕೆ ಬಂದಾಗ ನೇತ್ರಾವತಿ ರೇವಾ ಮೇಲೆರಗಿತ್ತು. ಆಗ ಎರಡೂ ಹುಲಿಗಳು ಕಾದಾಡಿದ್ದವು. ಆಗ ಸ್ಥಳದಲ್ಲಿದ್ದ ಅಧಿಕಾರಿ, ಸಿಬ್ಬಂದಿ ಹರಸಾಹಸಪಟ್ಟು ನೇತ್ರಾವತಿ ಹಾಗೂ ರೇವಾನನ್ನು ಗೂಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
Wildlife: ಉಳೆಪಾಡಿ ಮಿತ್ತಬೆಟ್ಟು ಬಳಿ ಉರುಳಿಗೆ ಸಿಲುಕಿ ಚಿರತೆ ಸಾವು!
ನಂತರ ಪಿಲಿಕುಳದ ವೈದ್ಯಾಧಿಕಾರಿಗಳು ನೇತ್ರಾವತಿಗೆ ಶುಶ್ರೂಷೆ ನಡೆಸುತ್ತಿದ್ದರು. ಇದರಿಂದ ನೇತ್ರಾವತಿ ನೀರು ಆಹಾರ ಸೇವಿಸಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಬುಧವಾರ ಬೆಳಗ್ಗೆ ಚಿಕಿತ್ಸೆ ನೀಡುತ್ತಿರುವಾಗಲೇ ಕುಸಿದು ಸಾವನ್ನಪ್ಪಿತು. ಸದ್ಯ ಪಿಲಿಕುಳದಲ್ಲಿ 8 ಹುಲಿಗಳಿವೆ ಎಂದು ಉದ್ಯಾನವನ ನಿರ್ದೇಶಕರ ಪ್ರಕಟಣೆ ತಿಳಿಸಿದೆ.